5,000 ಸಂಬಳದಿಂದ ಜರ್ಮನಿಯ ಟೆಕ್ ನಾಯಕನ ತನಕ: ಭಾರತೀಯ ಯುವಕನ ಸ್ಫೂರ್ತಿದಾಯಕ ಕಥೆ

ಮುಂಬೈನ ಸ್ಲಂ ಪ್ರದೇಶದಲ್ಲಿ ಬೆಳೆದು 10ನೇ ತರಗತಿಯಲ್ಲಿ ಅನುತ್ತೀರ್ಣ ಆಗಿದ್ದ ಯುವಕ ಇಂದು ಜರ್ಮನಿಯಲ್ಲಿ ಪ್ರಮುಖ ತಂತ್ರಜ್ಙಾನದಲ್ಲಿ ವೃತ್ತಿಪರನಾಗಿ ಗುರುತಿಸಿಕೊಂಡಿರುವ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮ ಜೀವನದ ಪಯಣವನ್ನು ಹಂಚಿಕೊಂಡಿರುವ ಸಂತೋಷ್ ಯಾದವ್ ಅವರ ಕಥೆ ಸಾವಿರಾರು ಜನರಿಗೆ ಸ್ಫೂರ್ತಿದಾಯಕವಾಗಿದೆ.

ಸಂತೋಷ್ ಯಾದವ್ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಚಿತ್ರ 2012ರಲ್ಲಿ ಮುಂಬೈನ ಸ್ಲಂನಲ್ಲಿರುವ ಅವರ ಮನೆಯಲ್ಲಿದ್ದಾಗ ತೆಗೆದದ್ದು. ಮತ್ತೊಂದು ಚಿತ್ರ 2026ರಲ್ಲಿ ಜರ್ಮನಿಯ ಹ್ಯಾಂಬರ್ಗ್ ನಗರದಲ್ಲಿ ತಮ್ಮ ಪತ್ನಿಯೊಂದಿಗೆ 17ನೇ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ತೆಗೆದದ್ದು.

Santosh Yadav

"2012 Vs 2026 - ಹೇಗೆ ಆರಂಭವಾಯಿತು, ಈಗ ಹೇಗಿದೆ" ಎಂಬ ಶೀರ್ಷಿಕೆಯೊಂದಿಗೆ ಸಂತೋಷ್ ಯಾದವ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಚಿತ್ರ 2012ರಲ್ಲಿ ಮುಂಬೈನ ಸ್ಲಂನಲ್ಲಿರುವ ಅವರ ಮನೆಯಲ್ಲಿ ತೆಗೆದದ್ದು, ಆಕಾಲದ ಅವರ ಜೀವನದ ಪರಿಸ್ಥಿತಿಯನ್ನು ಪ್ರತಿಬಿಂಬಸುತ್ತದೆ. ಎರಡನೆ ಚಿತ್ರ 2026ರಲ್ಲಿ ಜರ್ಮನಿಯ ಹ್ಯಾಂಬರ್ಗ್ ನಗರದಲ್ಲಿ ತಮ್ಮ ಪತ್ನಿಯೊಂದಿಗೆ 17ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದದ್ದು. ಕೇವಲ ಎರಡು ಚಿತ್ರಗಳ ಮೂಲಕವೇ ತಮ್ಮ ಹೋರಾಟ, ಪರಿಶ್ರಮ ಮತ್ತು ಯಶಸ್ಸಿನ ಪಯಣವನ್ನು ಅವರು ಜನರ ಮುಂದೆ ತೆರೆದಿಟ್ಟಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಮಂದಿ ಅವರ ಸಾಧನೆಯನ್ನು ಮೆಚ್ಚಿ ಅಭಿನಂದಿಸಿದ್ದಾರೆ.

10 ವರ್ಷಗಳಲ್ಲಿ 1.92 ಲಕ್ಷದಿಂದ 57.80 ಲಕ್ಷಕ್ಕೆ ಜಿಗಿದ ಸಂಬಳ: ಕೆಪಿಎಂಜಿ ಉದ್ಯೋಗಿಯ ಯಶೋಗಾಥೆಗೆ ನೆಟ್ಟಿಗರು ಫಿದಾ
10 ವರ್ಷಗಳಲ್ಲಿ 1.92 ಲಕ್ಷದಿಂದ 57.80 ಲಕ್ಷಕ್ಕೆ ಜಿಗಿದ ಸಂಬಳ: ಕೆಪಿಎಂಜಿ ಉದ್ಯೋಗಿಯ ಯಶೋಗಾಥೆಗೆ ನೆಟ್ಟಿಗರು ಫಿದಾ

ಕಷ್ಟಗಳ ನಡುವೆ ಬೆಳೆದ ಜೀವನ

ಸಂತೋಷ್ ಯಾದವ್ ಅವರು ತಮ್ಮ ಬ್ಲಾಗ್‌ನಲ್ಲಿ ಜೀವನದ ಸುದೀರ್ಘ ಹೋರಾಟವನ್ನು ಹಂಚಿಕೊಂಡಿದ್ದಾರೆ, ಸುಮಾರು 29 ವರ್ಷಗಳ ಕಾಲ ಮುಂಬೈನ ಸ್ಲಂನಲ್ಲಿ ವಾಸಿಸಿದ್ದಾಗಿ ತಿಳಿಸಿದ್ದಾರೆ. "ನಾನು ಹುಟ್ಟಿದ್ದು ಮತ್ತು ಬೆಳೆದಿದ್ದು ಮುಂಬೈನ ಸ್ಲಂನಲ್ಲಿ. ಸಿನಿಮಾಗಳಲ್ಲಿ ಕಾಣುವಂತೆಯೇ ಅಲ್ಲಿ ಒಳ್ಳೆಯವರೂ ಇದ್ದರು, ಕೆಟ್ಟವರೂ ಇದ್ದರು. ಆದರೆ ನಾನು ಕೆಟ್ಟ ಸಂಗಡಿಗರಿಂದ ಯಾವಗಲೂ ದೂರ ಉಳಿದಿದ್ದೆ," ಎಂದು ಅವರು ಬರೆದಿದ್ದಾರೆ.

10ನೇ ತರಗತಿಯಲ್ಲಿ ಅನುತ್ತೀರ್ಣ

ಸಂತೋಷ್ ಅವರ ಶೈಕ್ಷಣಿಕ ಪಯಣ ಸುಲಭವಾಗಿರಲಿಲ್ಲ. ಅವರು 10ನೇ ತರಗತಿಯಲ್ಲಿ ನಿರೀಕ್ಷಿಸಿದಷ್ಟು ಉತ್ತಮ ಅಂಕಗಳನ್ನು ಪಡೆಯಲು ವಿಫಲರಾದ ಕಾರಣ ಮುಂದಿನ ವಿದ್ಯಾಭ್ಯಾಸದ ಆಯ್ಕೆಗಳು ತೀರಾ ಸೀಮಿತವಾಗಿದ್ದವು. ಆದರೆ, ಕುಟುಂಬದ ಸ್ನೇಹಿತನೊಬ್ಬ ನೀಡಿದ ಸಲಹೆಯ ಮೇರೆಗೆ ಅವರು ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾ ಕೋರ್ಸ್‌ಗೆ ಸೇರಿದರು. ಆರಂಭದಲ್ಲಿ ಇಂಗ್ಲಿಷ ಭಾಷೆಯ ಸಮಸ್ಯೆಯಿಂದಾಗಿ ಸಾಕಷ್ಟು ತೊಂದರೆ ಅನುಭವಿಸಿದರೂ, ಕ್ರಮೇಣ ತಮ್ಮ ಕಠಿಣ ಪರಿಶ್ರಮದಿಂದ ಆ ಸವಾಲನ್ನು ಜಯಿಸಿದರು.

2005ರಲ್ಲಿ ಅರ್ಜಿ ಹಾಕಿದ್ದ ವ್ಯಕ್ತಿಗೆ 18 ವರ್ಷದ ನಂತರ ಸಿಕ್ತು ಸರ್ಕಾರಿ ಕೆಲಸ! ಆದರೆ...
2005ರಲ್ಲಿ ಅರ್ಜಿ ಹಾಕಿದ್ದ ವ್ಯಕ್ತಿಗೆ 18 ವರ್ಷದ ನಂತರ ಸಿಕ್ತು ಸರ್ಕಾರಿ ಕೆಲಸ! ಆದರೆ...

ಮೊದಲ ಉದ್ಯೋಗದ ಸಂಬಳ ತಿಂಗಳಿಗೆ 5,000 ರೂ.

ಆರ್ಥಿಕ ಸಂಕಷ್ಟಗಳ ನಡುವೆಯೂ ಸಂತೋಷ್ ಮುಂಬೈ ವಿಶ್ವವಿದ್ಯಾಲಯದಿಂದ ಬಿ.ಟೆಕ್ ಪದವಿ ಪೂರ್ಣಗೊಳಿಸಿದರು. ಆದರೆ 2008ರಲ್ಲಿ ಜಾಗತಿಕ ಆರ್ಥಿಕ ಕುಸಿತದ ಸಂದರ್ಭದಲ್ಲಿ ಉದ್ಯೋಗ ಹುಡುಕುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಕೆಲಸ ಸಿಕ್ಕ ನಂತರ ಅವರ ಮೊದಲ ಕೆಲಸದ ಮಾಸಿಕ ಸಂಬಳ ಕೇವಲ 5,000 ರೂ. ಎಂಟು ತಿಂಗಳ ನಂತರ ಆ ಉದ್ಯೋಗ ತೊರೆದ ಅವರು ಕೆಲಕಾಲ ನಿರುದ್ಯೋಗಿಯಾದರು. ಬಳಿಕ SQL ಸಂಬಂಧಿತ ಕೆಲಸಗಳಲ್ಲಿ ಅನುಭವ ಪಡೆದು 2010ರಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಮತ್ತೊಂದು ಉದ್ಯೋಗ ಪಡೆದರು.

ಓಪನ್ ಸೋರ್ಸ್ ಕೋಡಿಂಗ್ ಮೂಲಕ ಬದಲಾದ ಜೀವನ

2019ರಲ್ಲಿ ಸಂತೋಷ್ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ದೊರೆಯಿತು. ಅವರು Angular ಮತ್ತು NgRx ಸೇರಿದಂತೆ ಹಲವು ಓಪನ್ ಸೋರ್ಸ್ ಪ್ರಾಜೆಕ್ಟ್‌ಗಳಿಗೆ ಮಾಡಲು ಆರಂಭಿಸಿದರು. ಅವರ ಸಾಧನೆಯನ್ನು ಗುರುತಿಸಿ Google Developer Expert (GDE) for Angular ಗೌರವವನ್ನು ನೀಡಲಾಯಿತು.

ಭಾರತದ ಮೊದಲ GitHub Star

2020ರಲ್ಲಿ ಸಂತೋಷ್ ಯಾದವ್ ಭಾರತದ ಮೊದಲ GitHub Star ಆಗಿ ಆಯ್ಕೆಯಾಗುವ ಮೂಲಕ ಮತ್ತೊಂದು ಸಾಧನೆ ಮಾಡಿದರು. ಪ್ರಸ್ತುತ ಅವರು ಜರ್ಮನಿಯಲ್ಲಿರುವ CodeRabbit ಸಂಸ್ಥೆಯಲ್ಲಿ Principal Developer Advocate ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸೋಲಿನಿಂದ ಯಶಸ್ಸಿನತ್ತ

10ನೇ ತರಗತಿಯಲ್ಲಿ ಹಿನ್ನಡೆ ಅನುಭವಿಸಿದ ಸಾಮಾನ್ಯ ವಿದ್ಯಾರ್ಥಿಯೊಬ್ಬ ಇಂದು ಜಾಗತಿಕ ಮಟ್ಟದ ಟೆಕ್ ತಜ್ಞನಾಗಿ ಬೆಳೆದು ನಿಂತಿರುವುದು ಸಾಮಾನ್ಯ ಸಾಧನೆಯಲ್ಲ. ಸಂತೋಷ್ ಯಾದವ್ ಅವರ ಈ ಸುದೀರ್ಘ ಪಯಣವು ಕಠಿಣ ಪರಿಶ್ರಮ, ನಿರಂತರ ಕಲಿಕೆ ಮತ್ತು ಅಚಲ ಆತ್ಮವಿಶ್ವಾಸದ ಮಹತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಯಾವುದೇ ಸಾಧನೆಗೆ ಹಿನ್ನೆಲೆ ಅಥವಾ ಕಠಿಣ ಪರಿಸ್ಥಿತಿಗಳು ಎಂದಿಗೂ ಅಡ್ಡಿಯಾಗುವುದಿಲ್ಲ; ದೃಢ ಸಂಕಲ್ಪ ಮತ್ತು ಪ್ರಾಮಾಣಿಕ ಪ್ರಯತ್ನವಿದ್ದರೆ ಬದುಕನ್ನೇ ಸಂಪೂರ್ಣವಾಗಿ ಬದಲಾಯಿಸಬಹುದು ಎಂಬುದಕ್ಕೆ ಸಂತೋಷ್ ಯಾದವ್ ಅವರ ಯಶೋಗಾಥೆಯೇ ಅತ್ಯುತ್ತಮ ಉದಾಹರಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+