ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಅಷ್ಟ ಮಠಗಳ ಪೀಠಾಧಿಪತಿಗಳು ಯಾರು

|
Google Oneindia Kannada News

ಹದಿಮೂರನೇ ಶತಮಾನದ ಪುರಾಣ ಪ್ರಸಿದ್ದ ದೇವಾಲಯಗಳಲ್ಲಿ ಉಡುಪಿ ಶ್ರೀಕೃಷ್ಣ ಮಠ ಕೂಡಾ ಒಂದು. ಸಮುದ್ರದಲ್ಲಿ ಸಿಕ್ಕ ಗೋಪಿಚಂದನ ಶಿಲೆಯ ಕಡಗೋಲು ಶ್ರೀಕೃಷ್ಣನ ವಿಗ್ರಹವನ್ನು ಆಚಾರ್ಯ ಮಧ್ವರು ಪ್ರತಿಷ್ಠಾಪಿಸಿದರು.

ಉಡುಪಿ ಶ್ರೀಕೃಷ್ಣ ಮಠಕ್ಕೂ ಹಳೆಯದಾದ ಇತಿಹಾಸ ಹೊಂದಿರುವ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಾಲಯಗಳೂ ಶ್ರೀಕೃಷ್ಣ ಮಠದ ರಥಬೀದಿ ಆವರಣದಲ್ಲಿದೆ. ಹಾಗೆಯೇ, ಮಠದ ಪ್ರಾಂಗಣದಲ್ಲಿ ಪ್ರಾಣದೇವರು, ಗರುಡ ದೇವರು, ಸುಬ್ರಮಣ್ಯ ಮತ್ತು ನವಗ್ರಹ ಗುಡಿಗಳಿವೆ. (ಈಶಪ್ರಿಯ ತೀರ್ಥ ಸ್ವಾಮೀಜಿ ಅದಮಾರು ಮಠಾಧಿಪತಿ)

ಆಚಾರ್ಯ ಮಧ್ವರು ಶ್ರೀಕೃಷ್ಣನ ಪೂಜೆ ನಿರ್ವಿಘ್ನವಾಗಿ ಸಾಗಲು ಅಷ್ಠಮಠಗಳನ್ನು ಸ್ಥಾಪಿಸಿ, ಎಂಟು ಮಠಾಧೀಶರನ್ನು ನೇಮಿಸಿದರು. ಹಾಗೆಯೇ, ಶ್ರೀಕೃಷ್ಣನ ಪೂಜಾ ಕೈಂಕರ್ಯವನ್ನು ಎರಡು ತಿಂಗಳಿಗೊಮ್ಮೆ ಬದಲಾಗುವಂತೆ ಎಂಟು ಮಠಗಳಿಗೆ ಹಸ್ತಾಂತರಿಸಿದರು.

ಮುಂದಿನ ದಿನಗಳಲ್ಲಿ, ಎರಡು ತಿಂಗಳಿಗಿದ್ದ ಹಸ್ತಾಂತರ ಪದ್ದತಿಯನ್ನು ಸೋದೆ ವಾದಿರಾಜ ಗುರುಗಳು ಎರಡು ವರ್ಷಕ್ಕೆ ಬದಲಾಯಿಸಿದರು. ಅದುವೇ, ಎರಡು ವರ್ಷಕ್ಕೊಮ್ಮೆ ಜನವರಿ 18ರಂದು ನಡೆಯುವ ಪರ್ಯಾಯ ಮಹೋತ್ಸವ. (ಉಡುಪಿ: ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ)

ಕನಕಗೋಪುರ, ಪಂಕ್ತಿಭೋಜನ, ಮಡೆಸ್ನಾನ, ಮಠದ ಸರಕಾರೀಕರಣ ಹೀಗೆ ಉಡುಪಿ ಶ್ರೀಕೃಷ್ಣ ಮಠ ಮತ್ತು ಅಷ್ಠಮಠದ ಶ್ರೀಗಳು ಸದಾ ಸುದ್ದಿಯಲ್ಲಿರುತ್ತಾರೆ. ಉಡುಪಿಯ ಅಷ್ಠಮಠಗಳ ಮಠಾಧೀಶರ ಬಗ್ಗೆ ಕಿರು ಪರಿಚಯ ಸ್ಲೈಡಿನಲ್ಲಿ...

ವಿಶ್ವೇಶತೀರ್ಥ ಶ್ರೀಗಳು

ವಿಶ್ವೇಶತೀರ್ಥ ಶ್ರೀಗಳು

ಸಾಮಾಜಿಕ ಕಳಕಳಿಯುಳ್ಳ ಪೇಜಾವರ ಮಠದ ಹಿರಿಯ ಶ್ರೀಗಳಾದ ಶ್ರೀವಿಶ್ವೇಶತೀರ್ಥರು 1931ರಲ್ಲಿ ಶಿವಳ್ಳಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. ಶ್ರೀಭಂಢಾರಕೇರಿ ಮಠಾಧೀಶರ ಸಮ್ಮುಖದಲ್ಲಿ ತನ್ನ ಎಂಟನೇ ವಯಸ್ಸಿನಲ್ಲೇ ಸನ್ಯಾಸ ದೀಕ್ಷೆ ಪಡೆದ ಪೇಜಾವರ ಶ್ರೀಗಳ ಹೆಸರು ಪ್ರಸ್ತುತ ಬಹಳ ಚರ್ಚೆಯಲ್ಲಿರುವ ಹೆಸರು.

ಪೇಜಾವರ ಕಿರಿಯ ಶ್ರೀಗಳು
ಹಿರಿಯ ಪೇಜಾವರ ಶ್ರೀಗಳು ತನ್ನ ಉತ್ತರಾಧಿಕಾರಿಯಾಗಿ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಗಳನ್ನು 1979ರಲ್ಲಿ ನೇಮಿಸಿದರು. ಶ್ರೀವಿಶ್ವವಿಜಯ ತೀರ್ಥರು ತನ್ನ ಹದಿನಾರನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು.

ಸೋದೆ ವಾದಿರಾಜ ಮಠ (ಶ್ರೀವಿಷ್ಣುತೀರ್ಥ ಪೀಠ)

ಸೋದೆ ವಾದಿರಾಜ ಮಠ (ಶ್ರೀವಿಷ್ಣುತೀರ್ಥ ಪೀಠ)

ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು 14.06.2006ರಲ್ಲಿ ಸನ್ಯಾಸತ್ವ ಪಡೆದು ಸೋದೆ ವಾದಿರಾಜ ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾದರು. 24.03.1991ರಲ್ಲಿ ವೇದಮೂರ್ತಿ ಪಾಡಿಗಾರು ಶ್ರೀನಿವಾಸ ತಂತ್ರಿ ಮತ್ತು ವೇದಾವತಿ ದಂಪತಿಗಳಿಗೆ ಜನಿಸಿದ ಶ್ರೀಗಳು ತನ್ನ ಹದಿನೈದನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ತೆಗೆದುಕೊಂಡರು. ಭೂತರಾಜರ ಶ್ರೀರಕ್ಷೆ ಯಾವತ್ತೂ ಮಠದ ಮೇಲಿರುತ್ತದೆ ಎನ್ನುವುದು ಪ್ರತೀತಿ. ಹಾಗೆಯೇ, ಉತ್ತರಾಧಿಕಾರಿಯನ್ನಾಗಿ ನೇಮಿಸುವುದು ಹಾಲಿ ಮಠಾಧೀಶರಾಗಿ ಇರುವವರಿಗೆ ಇಹಲೋಕ ತ್ಯಜಿಸುವ ಮುನ್ಸೂಚನೆ ಎನ್ನುವುದು ಭಕ್ತ ವಲಯದಲ್ಲಿ ಕೇಳಿ ಬರುವ ಮಾತು.

ಪಲಿಮಾರು ಮಠ (ಹೃಷಿಕೇಷತೀರ್ಥ ಪೀಠ ಸಂಸ್ಥಾನ)

ಪಲಿಮಾರು ಮಠ (ಹೃಷಿಕೇಷತೀರ್ಥ ಪೀಠ ಸಂಸ್ಥಾನ)

ಪಲಿಮಾರು ಮಠದ ಪರಂಪರೆಯ ಮೂವತ್ತನೇ ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥ ಶ್ರೀಗಳು 1956ರಲ್ಲಿ ಜನಿಸಿದರು. ಮಾರ್ಚ್ 1979ರಲ್ಲಿ ಸನ್ಯಾಸತ್ವ ಸ್ವೀಕರಿಸಿದ ಶ್ರೀಗಳು ತಮ್ಮ 23ನೇ ವಯಸ್ಸಿನಲ್ಲಿ ದೀಕ್ಷೆ ಸ್ವೀಕರಿಸಿದರು. ಮಹಾನ್ ವಿದ್ವತ್ ಹೊಂದಿರುವ ಶ್ರೀಗಳ ಪ್ರವಚನ ಬಹು ಪ್ರಸಿದ್ದ.

ಅದಮಾರು ಮಠ (ಶ್ರೀನರಸಿಂಹ ತೀರ್ಥ ಪೀಠ)

ಅದಮಾರು ಮಠ (ಶ್ರೀನರಸಿಂಹ ತೀರ್ಥ ಪೀಠ)

ಕಾಳೀಮರ್ಧನ ದೇವರ ಪಟ್ಟದ ವಿಗ್ರಹವನ್ನು ಹೊಂದಿರುವ ಈ ಮಠದ ಈಗಿನ ಮಠಾಧೀಶರು ವಿಶ್ವಪ್ರಿಯ ತೀರ್ಥ ಶ್ರೀಪಾದರು. ಇವರು ಮಠದ ಪರಂಪರೆಯ 31ನೇ ಪೀಠಾಧಿಪತಿಗಳು. ಇವರು ತಮ್ಮ ಕಿರಿ ವಯಸ್ಸಿನಲ್ಲಿ ಸನ್ಯಾಸತ್ವವನ್ನು ಸ್ವೀಕರಿಸದವರು.

ಈಶಪ್ರಿಯ ತೀರ್ಥ ಸ್ವಾಮೀಜಿ
ಮಠದ ಪರಂಪರೆಯ 32ನೇ ಯತಿಗಳಾಗಿ 29 ವರ್ಷದ ಶ್ರೀಶ ಎಸ್ ಎನ್ನುವ ಇಂಜಿನಿಯರಿಂಗ್ ಪಧವೀಧರ ಮಠದ ಉತ್ತರಾಧಿಕಾರಿಯಾಗಿ ಗುರುವಾರ ಜೂನ್ 19ರಂದು ದೀಕ್ಷೆ ಸ್ವೀಕರಿಸಿದ್ದಾರೆ. ಇವರನ್ನು ಈಶಪ್ರಿಯ ತೀರ್ಥ ಸ್ವಾಮೀಜಿ ಎಂದು ಮರುನಾಮಕರಣ ಮಾಡಲಾಗಿದೆ.

ಕಾಣಿಯೂರು ಮಠ (ಶ್ರೀರಾಮತೀರ್ಥ ಪೀಠ)

ಕಾಣಿಯೂರು ಮಠ (ಶ್ರೀರಾಮತೀರ್ಥ ಪೀಠ)

ಹಾಲಿ ಪರ್ಯಾಯ ಪೀಠಾಧಿಪತಿಗಳಾದ ವಿದ್ಯಾವಲ್ಲಭ ತೀರ್ಥರು ಕಾಣಿಯೂರು ಮಠದ ಗುರು ಪರಂಪರೆಯ 30ನೇ ಪೀಠಾಧಿಪತಿಗಳು. ಇವರು ತಮ್ಮ ಹನ್ನೊಂದನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಪಡೆದರು.

ಪುತ್ತಿಗೆ ಮಠ (ಶ್ರೀಉಪೇಂದ್ರ ತೀರ್ಥ ಪೀಠ)

ಪುತ್ತಿಗೆ ಮಠ (ಶ್ರೀಉಪೇಂದ್ರ ತೀರ್ಥ ಪೀಠ)

ಗೋವಿಂದಾಚಾರ್ಯ ಮತ್ತು ಕಮಲಮ್ಮ ದಂಪತಿಗಳ ಪುತ್ರರಾದ ಶ್ರೀಸುಗುಣೇಂದ್ರ ತೀರ್ಥರ ಪೂರ್ವಶ್ರಮದ ಹೆಸರು ಹಯವದನ ಎಂದು, ಇವರು ಜನಿಸಿದ್ದು 1961ರಲ್ಲಿ. ಪುತ್ತಿಗೆ ಮಠದ ಗುರುಪರಂಪರೆಯ ಮೂವತ್ತನೇ ಯತಿಗಳಾದ ಸುಗುಣೇಂದ್ರ ಶ್ರೀಗಳು ತಮ್ಮ ಹದಿಮೂರನೇ ವಯಸ್ಸಿನಲ್ಲಿ ಅಂದರೆ 1974ರಲ್ಲಿ ಸನ್ಯಾಸತ್ವ ಸ್ವೀಕರಿಸಿದರು.

ಕೃಷ್ಣಾಪುರ ಮಠ (ಶ್ರೀಜನಾರ್ಧನತೀರ್ಥ ಪೀಠ)

ಕೃಷ್ಣಾಪುರ ಮಠ (ಶ್ರೀಜನಾರ್ಧನತೀರ್ಥ ಪೀಠ)

ಮಠದ 35ನೇ ಯತಿಗಳಾಗಿರುವ ಶ್ರೀವಿದ್ಯಾಸಾಗರ ತೀರ್ಥರು ಹಾಲಿ ಪೀಠಾಧಿಪತಿಗಳು. ಕಾಳಿಂಗಮರ್ಧನ ಕೃಷ್ಣ ಪಟ್ಟದ ದೇವರನ್ನು ಹೊಂದಿರುವ ಕೃಷ್ಣಾಪುರ ಮಠದ ಯತಿಗಳು ತಮ್ಮ ಸಣ್ಣ ವಯಸ್ಸಿನಲ್ಲೇ ಸನ್ಯಾಸತ್ವ ಸ್ವೀಕರಿಸಿದರು.

ಶಿರೂರು ಮಠ (ಶ್ರೀವಾಮನತೀರ್ಥ ಪೀಠ)

ಶಿರೂರು ಮಠ (ಶ್ರೀವಾಮನತೀರ್ಥ ಪೀಠ)

ವಿಠಲ ಆಚಾರ್ಯ ಮತ್ತು ಕುಸುಮಮ್ಮ ದಂಪತಿಗಳಿಗೆ ಜೂನ್ 8, 1964ರಲ್ಲಿ ಜನಿಸಿದ ಹಾಲಿ ಶ್ರೀಗಳಾದ ಲಕ್ಷ್ಮೀವರ ತೀರ್ಥ ಶ್ರೀಗಳು ಜುಲೈ 2, 1971ರಲ್ಲಿ ಸನ್ಯಾಸತ್ವ ಸ್ವೀಕರಿಸಿದರು. ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಂದರೆ ಏಳನೇ ವಯಸ್ಸಿನಲ್ಲಿ ಲಕ್ಷ್ಮೀವರ ತೀರ್ಥರು ಸನ್ಯಾಸತ್ವ ಸ್ವೀಕರಿಸಿದರು.

English summary
Udupi Sri Krishna Mutt and Eight Seers of Mutt. The Krishna Matha was founded by the Vaishnavite saint Shri Madhwacharya in the 13th century.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X