• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಪಿಐ ಹಿರಿಯ ಮುಖಂಡ ಸಿ.ಎ.ಕುರಿಯನ್ ನಿಧನ

|

ತಿರುವನಂತಪುರಂ, ಮಾರ್ಚ್ 20: ಸಿಪಿಐ ಹಿರಿಯ ಮುಖಂಡ, ಟ್ರೇಡ್ ಯೂನಿಯನ್ ಸದಸ್ಯ ಹಾಗೂ ಕೇರಳ ವಿಧಾನಸಭೆ ಮಾಜಿ ಡೆಪ್ಯುಟಿ ಸ್ಪೀಕರ್ ಸಿ.ಎ.ಕುರಿಯನ್ ಅವರು ಶನಿವಾರ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.

ಕುರಿಯನ್ ಅವರಿಗೆ 88 ವಯಸ್ಸಾಗಿದ್ದು, ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕೇರಳ ಮುನ್ನಾರ್‌ನಲ್ಲಿನ ತಮ್ಮ ನಿವಾಸದಲ್ಲಿ ಶನಿವಾರ ಬೆಳಿಗ್ಗೆ ನಿಧನರಾಗಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ವಿಧಾನಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಎಚ್.ಟಿ.ಕೃಷ್ಣಪ್ಪ ನಿಧನ

ಕೊಟ್ಟಾಯಂ ಜಿಲ್ಲೆಯ ಪುದುಪಳ್ಳಿಯವರಾದ ಕುರಿಯನ್ ಅವರು ಬ್ಯಾಂಕ್ ಉದ್ಯೋಗ ತ್ಯಜಿಸಿ ರಾಜಕೀಯ ಪ್ರವೇಶಿಸಿದ್ದರು. 1960ರಲ್ಲಿ ಟ್ರೇಡ್ ಯೂನಿಯನ್ ಕಾರ್ಯಕರ್ತರಾಗಿ ರಾಜಕೀಯ ಜೀವನ ಆರಂಭಿಸಿದ್ದರು. ಸಿಪಿಐ ಟ್ರೇಡ್ ಯೂನಿಯನ್ ವಿಭಾಗದ ಎಐಟಿಯುಸಿ ಸಂಘಟನೆಯ ಮುಖಂಡರಾಗಿ ಪೀರ್ಮೇಡ್ ಕ್ಷೇತ್ರದಿಂದ ಮೂರು ಬಾರಿ ವಿಭಾನಸಭೆಗೆ ಆಯ್ಕೆಯಾಗಿದ್ದರು.

ಕೃಷಿ ಕಾರ್ಮಿಕರ ಪರ ಹೋರಾಟದಲ್ಲಿ ಹಲವು ತಿಂಗಳುಗಳ ಕಾಲ ಜೈಲುವಾಸವನ್ನೂ ಅನುಭವಿಸಿದ್ದರು.

ಅವರಿಗೆ ಮೂರು ಜನ ಮಕ್ಕಳಿದ್ದಾರೆ. ಕುರಿಯನ್ ಅವರ ನಿಧನಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ.

English summary
CPI senior leader, trade unionist and former Deputy Speaker of Kerala Legislative Assembly, C.A. Kurian passes away at his residence in Munnar kerala,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X