• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆನ್‌ಲೈನ್‌ ತರಗತಿ ಮಿಸ್ ಆಗಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಬಾಲಕಿ

|

ತಿರುವನಂತಪುರಂ, ಜೂನ್ 2: ಆನ್‌ಲೈನ್‌ ತರಗತಿಗೆ ಹಾಜರಾಗದಿದ್ದಕ್ಕೆ ಮನನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ.

   ಯಾರಿಂದ ಅಧಿಕಾರ ಕಳೆದುಕೊಂಡೆ ಅಂತಾ ನನಗೆ ಗೊತ್ತು | HD Kumaraswamy | Oneindia Kannada

   9ನೇ ತರಗತಿಯ ದೇವಿಕಾ ಬಾಲಕೃಷ್ಣನ್ ಎಂಬ ಬಾಲಕಿ ಮಲಪ್ಪುರಂ ಜಿಲ್ಲೆಯ ವಲಂಚೇರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆದರೆ, ಆನ್‌ಲೈನ್ ತರಗತಿಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾಳೆ.

   ನಿವೃತ್ತ ಜಲಮಂಡಳಿ ಅಧಿಕಾರಿಗೆ ಕೊರೊನಾ ಸೋಂಕು, ಆತ್ಮಹತ್ಯೆನಿವೃತ್ತ ಜಲಮಂಡಳಿ ಅಧಿಕಾರಿಗೆ ಕೊರೊನಾ ಸೋಂಕು, ಆತ್ಮಹತ್ಯೆ

   ಆನ್‌ಲೈನ್‌ ತರಗತಿಯಲ್ಲಿ ಪಾಲ್ಗೊಳ್ಳಲು ತಮ್ಮ ಮನೆಯಲ್ಲಿ ಟಿವಿ ಇಲ್ಲ ಹಾಗೂ ಸ್ಮಾರ್ಟ್‌ ಪೋನ್‌ ಕೂಡ ಇಲ್ಲ ಎಂದು ಬೇಸರ ಮಾಡಿಕೊಂಡಿದ್ದಳು ಎಂದು ತಿಳಿದು ಬಂದಿದೆ. ಅಕ್ಕಪಕ್ಕ ಯಾವುದೇ ಮನೆಗಳಿಲ್ಲದ ಕಾರಣ ಯಾರಿಗೂ ಈ ವಿಚಾರ ಸೂಕ್ತ ಸಮಯದಲ್ಲಿ ಗೊತ್ತಾಗಲಿಲ್ಲ.

   ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇದು ಸ್ವಾಭಾವಿಕ ಸಾವು ಎಂದು ಎಫ್‌ ಐ ಆರ್ ಹಾಕಿದ್ದಾರೆ. ಮನೆಯಲ್ಲಿ ಆಕೆ ಬರೆದಿದ್ದ ಡೆತ್‌ನೋಟ್ ಸಿಕ್ಕಿದ್ದು, ''ನಾನು ಹೋಗುತ್ತೇನೆ'' ಎಂದು ಭಾವನಾತ್ಮಕ ಪತ್ರ ಬರೆದಿದ್ದಾರಂತೆ.

   45 ವರ್ಷದ ದೇವಿಕಾ ಅವರ ತಂದೆ ಬಾಲಕೃಷ್ಣನ್ ದಿನಗೂಲಿ ಕಾರ್ಮಿಕ. ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಕೆಲಸ ಮಾಡಲು ಸಹ ಸಾಧ್ಯವಾಗಿರಲಿಲ್ಲ. ಮಗಳಿಗೆ ಆನ್‌ಲೈನ್ ತರಗತಿಗೆ ವ್ಯವಸ್ಥೆ ಮಾಡುವಷ್ಟು ಶಕ್ತರಾಗಿರಲಿಲ್ಲ. ದೇವಿಕಾ ಸಾವಿನ ಪ್ರಕರಣವನ್ನು ತನಿಖೆ ನಡೆಸುವಂತೆ ಜಿಲ್ಲಾ ಶಿಕ್ಷಣಾಧಿಕಾರಿ ಶಿಕ್ಷಣ ಸಚಿವ ಪ್ರೊ.ಸಿ.ರವೀಂದ್ರನಾಥ್ ಆದೇಶಿಸಿದ್ದಾರೆ.

   ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಶಾಲೆ ಕಾಲೇಜುಗಳು ಕಳೆದ ಮೂರು ತಿಂಗಳಿನಿಂದ ಮುಚ್ಚಿದೆ. ಎಲ್ಲ ಮೊದಲಿನಂತೆ ಇದ್ದಿದ್ದರೇ ಮೇ ಮತ್ತು ಜೂನ್‌ ತಿಂಗಳಲ್ಲಿ ಶಾಲೆ-ಕಾಲೇಜುಗಳು ಆರಂಭವಾಗಬೇಕಿತ್ತು. ಆದರೆ, ಸೋಂಕಿನ ಭೀತಿ ಇರುವ ಹಿನ್ನೆಲೆ ಆನ್‌ಲೈನ್‌ ಮೂಲಕ 1 ರಿಂದ 12ನೇ ತರಗತಿವರೆಗೂ ಕ್ಲಾಸ್ ಶುರು ಮಾಡಿದೆ.

   English summary
   9th standard girl commits suicide after she not attend online class at kerala.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X