ಪುಲ್ವಾಮಾ ದಾಳಿ ನಡೆಸಿದ ರಣಹೇಡಿ ಉಗ್ರನ ಬಗ್ಗೆ ಪಾಲಕರು ಹೇಳೋದೇನು?
ಶ್ರೀನಗರ, ಫೆಬ್ರವರಿ 16: 44 ಸೈನಿಕರ ಅಮೂಲ್ಯ ಜೀವವನ್ನು ಕಿತ್ತುಕೊಂಡ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕ ಅದಿಲ್ ಅಹ್ಮದ್ ದಾರ್ ಮಾಡಿದ್ದು ತಪ್ಪೇ ಅಲ್ಲ ಎಂಬಂತೆ ಆತನ ತಂದೆ ತಾಯಿ ಮಾತನಾಡಿದ್ದಾರೆ.
ನೇರವಾಗಿ ಆತನ ನಡೆಯನ್ನು ಸಮರ್ಥಿಸಿಕೊಳ್ಳದಿದ್ದರೂ, ಆತ ಇವನ್ನೆಲ್ಲ ಮಾಡುವುದಕ್ಕೆ ಕಾರಣವಿದೆ ಎಂಬಂತೆ ಆತನ ಬೆನ್ನಿಗೆ ನಿಂತಿದ್ದಾರೆ.
"ಯೋಧರನ್ನು ಕಳೆದುಕೊಂಡ ಕುಟುಂಬಗಳು ಹೇಗೆ ದುಃಖಿಸುತ್ತಿವೆಯೋ ಅಷ್ಟೇ ದುಃಖ ನಮಗೂ ಆಗಿದೆ. ಆದರೆ ಆತ ಇವನ್ನೆಲ್ಲ ಮಾಡಿದ್ದರ ಹಿಂದೆ ಅವನಿಗಾದ ಅಪಾರ ನೋವು, ಅವಮಾನದ ಕತೆ ಇದೆ" ಕುಟುಂಬ ಹೇಳಿಕೊಂಡಿದೆ.
ಫೆ.14 ರಂದು ಈತ ಸ್ಫೋಟಕ ತುಂಬಿದ ಕಾರನ್ನು ಸಿಆರ್ ಪಿಎಫ್ ಯೋಧರಿದ್ದ ಬಸ್ಸಿಗೆ ಡಿಕ್ಕಿ ಹೊಡೆಸಿದ ಪರಿಣಾಮ 44 ಯೋಧರು ಹುತಾತ್ಮರಾಗಿದ್ದರು. ಆತ್ಮಾಹುತಿ ದಾಳಿಕೋರ ದಾರ್, ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯವನು ಎಂಬುದು ನಂತರ ದೃಢವಾಗಿತ್ತು. ಈ ದಾಳಿಯ ಹೊಣೆಯನ್ನು ಉಗ್ರ ಸಂಘಟನೆ ಹೊತ್ತುಕೊಂಡಿತ್ತು.

2016 ರ ಆ ಘಟನೆ
2016 ರಲ್ಲಿ ಕಾಲೇಜು ಮುಗಿಸಿ ದಾರ್ ಮನೆಗೆ ಮರಳುತ್ತಿದ್ದ ಸಮಯದಲ್ಲಿ ಕೆಲವು ಪೊಲೀಸರು ಆತನ್ನೂ ಮತ್ತು ಆತನ ಸ್ನೇಹಿತರನ್ನು ತಡೆದಿದ್ದರು. ಮಾತ್ರವಲ್ಲ ಅವರಿಗೆ ಹಲವು ಪ್ರಶFನೆಗಳನ್ನು ಕೇಳಿ, ಕಲ್ಲೆಸೆತದ ಪ್ರಕರಣದಲ್ಲಿ ನೀವೂ ಬಾಗಿಯಾಗಿದ್ದೀರಿ ಎಂದು ಆರೋಪಿಸಿದ್ದರು ಎಂದು ಆತನ ಪಾಲಕರು ಹೇಳಿದ್ದಾರೆ.

ಸಾಕಷ್ಟು ಅವಮಾನವಾಗಿತ್ತು ಆತನಿಗೆ!
ಪೊಲೀಸರು ಆತನನ್ನು ತಡೆದಿದ್ದಲ್ಲದೆ, ಥಳಿಸಿ ಹಿಂಸಿಸಿದ್ದರು. ಕಲ್ಲೆಸೆತಕ್ಕೂ ತನಗೂ ಸಂಬಂಧವಿಲ್ಲ ಎಂದರೂ ಕೇಳದೆ, ಆತನನ್ನು ಚೆನ್ನಾಗಿ ಥಳಿಸಿದ್ದರು. ಇದರಿಂದ ಆತನಿಗೆ ಸಾಕಷ್ಟು ಅವಮಾನವಾಗಿತ್ತು. ಅಂದಿನಿಂದ ಆತ ಭಯೋತ್ಪಾದಕರೊಂದಿಗೆ ಸೇರಲು ನಿರ್ಧರಿಸಿದ ಎಂದು ಪಾಲಕರು ಸಮರ್ಥಿಸಿಕೊಳ್ಳುವ ಧಾಟಿಯಲ್ಲಿ ಮಾತನಾಡಿದ್ದಾರೆ.

ಕಳೆದ ವರ್ಷದಿಂದ ಕಾಣೆಯಾಗಿದ್ದ!
ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಆತ ಕಳೆದ ಮಾರ್ಚ್ 19 ರಂದು ಮನೆಯಿಂದ ಹೋದವನು ವಾಪಸ್ ಬರಲಿಲ್ಲ. ಮೂರು ತಿಂಗಳ ಕಾಲ ಆತನನ್ನು ಹುಡುಕಿದೆವು. ಆದರೆ ಆತ ಎಲ್ಲೂ ಸಿಗದ ಕಾರಣ ಸುಮ್ಮನಾದೆವು ಎಂಡು ದಾರ್ ತಾಯಿ ಫಹ್ಮೀದಾ ಹೇಳುತ್ತಾರೆ.

ಘಟನೆ ಬಗ್ಗೆ ನಮಗೆ ಅರಿವಿರಲಿಲ್ಲ!
ಮಗ ಮಿಲಿಟರಿ ಡ್ರೆಸ್ ನಲ್ಲಿ ಮಾತನಾಡುತ್ತಿದ್ದ ವಿಡಿಯೋವನ್ನು ಜೈಷ್ ಇ ಮೊಹಮ್ಮದ್ ಬಿಡುಗಡೆ ಮಾಡಿದಾಗಲೇ ನಮಗೆ ಅವನು ಉಗ್ರನಾಗಿ ಬದಲಾಗಿದ್ದಾನೆ ಎಂಬುದು ತಿಳಿಯಿತು. ಆದರೆ ಆತ ಈ ದಾಳಿ ನಡೆಸುವ ಬಗ್ಗೆ ನಮಗೆ ಯಾವುದೇ ಸುಳಿವೂ ಸಿಕ್ಕಿರಲಿಲ್ಲ ಎಂದು ಪಾಲಕರು ಹೇಳಿದ್ದಾರೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications