• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಲೆನಾಡಿನಲ್ಲಿ ಹೆಚ್ಚಾದ ಕಳ್ಳತನ: ಸಾಗರ ತಾಲ್ಲೂಕಿನ ಮೂರು ಮನೆಗಳಲ್ಲಿ ಹಾಡಹಗಲೇ ಕಳವು

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಅಕ್ಟೋಬರ್ 30: ಶಿವಮೊಗ್ಗ ಜಿಲ್ಲೆಯ ಮಲೆನಾಡು ಪ್ರದೇಶದ ಒಂಟಿ ಮನೆಗಳಲ್ಲಿ ಒಂದಿಷ್ಟು ಆತಂಕ ಹುಟ್ಟಿಸಿದೆ. ಈ ಭಾಗದಲ್ಲಿ ಕೊಲೆ ಹಾಗೂ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಮೂರು ಮನೆಗಳಲ್ಲಿ ಕಳವು ಪ್ರಕರಣ ನಡೆದಿದೆ.

ಸಾಗರ ತಾಲೂಕಿನ ಚುಟ್ಟಿಕೆರೆ, ತುಮರಿ ಮತ್ತು ಬ್ರಾಹ್ಮಣ ಕೆಪ್ಪಿಗೆಯಲ್ಲಿ ಹಾಡಹಗಲೇ ಕಳ್ಳತನ ನಡೆದಿದೆ. ನಗರ ಪ್ರದೇಶಗಳಲ್ಲಿ ಪೊಲೀಸ್ ಚುರುಕಿನ ಚಟುವಟಿಕೆ ನಡೆಸುತ್ತಾರೆ ಎಂಬ ಕಾರಣಕ್ಕೆ, ಗ್ರಾಮಾಂತರ ಭಾಗಗಳಲ್ಲಿ ಕಳವು ಸುಲಿಗೆ ಪ್ರಕರಣ ಹೆಚ್ಚಾಗುತ್ತಿವೆಯಾ ಎಂಬ ಶಂಕೆಯೂ ವ್ಯಕ್ತವಾಗುತ್ತಿವೆ.

ಶಿವಮೊಗ್ಗ; ವಿಮಾನದಲ್ಲಿ ಬಂದು ಸರ ಕದಿಯುತ್ತಿದ್ದ ಗ್ಯಾಂಗ್ ಬಂಧನ

ಕೊರೊನಾ ಲಾಕ್ ಡೌನ್ ನಿಂದ ಆರ್ಥಿಕವಾಗಿ ಕಂಗಾಲಾಗಿರುವ ಜನ, ಇಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳಲು ಆರಂಭಿಸಿದ್ದಾರೆ ಎಂಬ ಅನುಮಾನ ಸಹ ಮೂಡಿದೆ.‌

ಬ್ರಾಹ್ಮಣ ಕೆಪ್ಪಿಗೆಯಲ್ಲಿ ಚಕ್ಕೋಡು ರಾಜು ಮನೆಯಲ್ಲಿ 3 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 20 ಸಾವಿರ ನಗದು ಹಣ ಕಳವು ಮಾಡಲಾಗಿದೆ. ಉಳಿದ ಎರಡು ಮನೆಗಳ ಕಳ್ಳತನದ ವಸ್ತು, ಹಣ ಬಗ್ಗೆ ಮಾಹಿತಿ ಅಧಿಕೃತ ಆಗಿಲ್ಲ. ತುಮರಿಯಲ್ಲಿ ಲಕ್ಷ್ಮಣರ ಕುಟುಂಬ ಮದುವೆಗೆ ಹೋಗಿದ್ದ ಕಾರಣ ಮಾಹಿತಿ ಲಭ್ಯವಾಗಿಲ್ಲ.

ಕರೂರು ಹೋಬಳಿಯಲ್ಲಿ ಜೋಡಿ ಕೊಲೆಯ ಪತ್ತೆಗೆ ಪೊಲೀಸ್ ಹರಸಾಹಸ ಪಡುತ್ತಿದ್ದ ವೇಳೆಯಲ್ಲಿಯೇ ಕಳವು ಪ್ರಕರಣ ಅಲ್ಲಿನ ಜನರಲ್ಲಿ ಭಯ ಹುಟ್ಟಿಸಿದೆ. ಪ್ರಕರಣ ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

English summary
The Robbed has taken place in Chuttikere, Tumari and Brahmin keppige in the Sagara taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X