ಯಡ್ಡಿ-ಈಶು ಕಿತ್ತಾಟ: ಶಿವಮೊಗ್ಗ ಬಿಜೆಪಿ ಬೆಂಬಲಿಗರ ಕಾದಾಟ

Posted By:
Subscribe to Oneindia Kannada

ಶಿವಮೊಗ್ಗ, ಜನವರಿ 17: ಜಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂಪರಪ್ಪ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪನವರ ನಡುವಿನ ಜಿದ್ದಾಜಿದ್ದಿ ಅವರ ಬೆಂಬಲಿಗರಿಗೂ ಅಂಟಿದ್ದು ಶಿವಮೊಗ್ಗದಲ್ಲಿ ಈ ಸಂಬಂಧ ಕೈ-ಕೈ ಮಿಲಾಯಿಸುವ ಹಂತ ತಲುಪಿದ್ದಾರೆ.

ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಬಿಎಸ್ ವೈ ಮತ್ತು ಈಶ್ವರಪ್ಪ ಬೆಂಬಲಿಗರ ನಡುವೆ ಭಾರೀ ವಾಗ್ವಾದ ನಡೆದು ತಳ್ಳಾಟ ನೂಕಾಟದ ಹಂತ ತುಲುಪಿದೆ, ಬಳಿಕ ಕಚೇರಿಗೆ ಪೊಲೀಸರನ್ನು ನಿಯೋಜಿಸಲಾಗಿದೆ.[ಕಿತ್ತಾಡುತ್ತಿರುವ ಬಿಜೆಪಿ ನಾಯಕರಿಗೆ ನೊಂದ ಕಾರ್ಯಕರ್ತನ ಮುಕ್ತಪತ್ರ]

Intense fighting between the supporters of in BJP Office,Shimoga

ಬಿಜೆಪಿಯ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡ ಮತ್ತು ಮಾಜಿ ಸಂಸದ ಹಾಗೂ ಬಿಜೆಪಿ ವಿಭಾಗೀಯ ಪ್ರಭಾರಿ ಆಯನೂರು ಮಂಜುನಾಥ್ ನಡೆಸಿ ಪ್ರತಿಕಾಗೋಷ್ಠಿಯಲ್ಲಿ ಬಿಎಸ್ ವೈ ಮತ್ತು ಈಶ್ವರಪ್ಪ ಪರ ಮತ್ತು ವಿರೋಧವಾಗಿ ಜಿಲ್ಲಾ ಮಟ್ಟದ ನಾಯಕರ ನಡುವೆ ವಾದ-ವಿವಾದ ನಡೆದಿದೆ. ಈ ಮಧ್ಯೆ ಈಶ್ವರಪ್ಪ ಬೆಂಬಲಿಗರು ಗೂಂಢಾಗಿರಿ ನಡೆಸಿದ್ದಾರೆ ಎಮದು ಬಿಎಸ್ ವೈ ಬೆಂಬಲಿಗರು ಆರೋಪಿಸಿದ್ದು ಈ ಕಾರಣದಿಂದಲೇ ಬಿಜೆಪಿಯಲ್ಲಿ ಬೆಂಕಿ ಹತ್ತಿ ಉರಿದಿದೆ.[ಬಿಜೆಪಿಯಲ್ಲಿ ಮುಗಿಯದ ರಗಳೆ: ಬಿಎಸ್ವೈ ವಿರುದ್ದ ಹೊಸ ಹೋರಾಟಕ್ಕೆ ನಾಂದಿ]

ಶಿವಮೊಗ್ಗದಲ್ಲಿ ಬಿಜೆಪಿ ಮುಖಂಡರಲ್ಲಿಯೇ ವಾದ-ವಿವಾದಗಳು ಮುಗಿಲು ಮುಟ್ಟಿದ್ದು, ಬಿಜೆಪಿ ಪಾಳಯದಲ್ಲಿ ತೀವ್ರ ಪ್ರಮಾಣದ ಭಿನ್ನಮತ ಸ್ಫೋಟಿಸುವ ಸಾಧ್ಯತೆಯಿದೆ. ಇನ್ನು ಬಿಎಸ್ ವೈ- ಈಶ್ವರಪ್ಪನವರನ್ನು ರಾಷ್ಟ್ರೀಯ ನಾಯಕರು ಬಂದು ಸಮಾಧಾನ ಮಾಡಬೇಕೇನೋ ತಿಳಿಯದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Intense fighting between the supporters of BSY- Eshwarappa in BJP Office, Shimoga, led to serious problam in the party.
Please Wait while comments are loading...