• search
  • Live TV
ರಾಂಚಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
LIVE

Jharkhand Assembly Elections 2019 Polling LIVE :18 ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆಗೆ ಮತದಾನ ಪ್ರಕ್ರಿಯೆ ಮ

|

ರಾಂಚಿ, ಡಿಸೆಂಬರ್ 07: ಜಾರ್ಖಂಡ್ ರಾಜ್ಯದ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಮುಂದುವರೆದಿದ್ದು, ಡಿಸೆಂಬರ್ 07ರಂದು 20 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ಆರಂಭವಾಗಿದೆ. ಜಾರ್ಖಂಡ್ ನಲ್ಲಿ ಒಟ್ಟು ಐದು ಹಂತದಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 30ರಿಂದ ಡಿಸೆಂಬರ್ 20 ರ ತನಕ ಮತದಾನ ನಿಗದಿಯಾಗಿದೆ. ಡಿಸೆಂಬರ್ 23ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಬಿಜೆಪಿಗೆ ಸೆಡ್ಡು ಹೊಡೆಯಲು ಜಾರ್ಖಂಡ್ ಮುಕ್ತಿ ಮೋರ್ಚಾ( ಜೆಎಂಎಂ), ಕಾಂಗ್ರೆಸ್, ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಮೈತ್ರಿಕೂಟ ರಚಿಸಿವೆ. ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅವರು ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ.

Jharkhand Assembly Elections Second phase voting Live Updates

81 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 31, ಆರ್ ಜೆಡಿ 7 ಹಾಗೂ ಜೆಎಂಎಂ 43 ಸ್ಥಾನಗಳಲ್ಲಿ ಸ್ಪರ್ಧೆಗಿಳಿದಿವೆ. ಜಾರ್ಖಂಡ್ ನಲ್ಲಿ ಕಳೆದ ವಿಧಾನಸಭೆ ಚುನಾವಣೆ 2014 ರಲ್ಲಿ ನಡೆದಿತ್ತು. ಒಟ್ಟು 81 ಶಾಸಕ ಬಲದ ಜಾರ್ಖಂಡ್ ನಲ್ಲಿ ಪ್ರಸ್ತುತ ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. 37 ಸ್ಥಾನಗಳ್ಲಲಿ ಜಯಗಳಿಸಿದ್ದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಸ್ಥಳೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸಿ, ಸರ್ಕಾರ ರಚಿಸಿತ್ತು. ರಘುವರ್ ದಾಸ್ ಮುಖ್ಯಮಂತ್ರಿಯಾಗಿದ್ದಾರೆ. ಎರಡನೇ ಹಂತದ ಕ್ಷೇತ್ರಗಳ ಅಂಕಿ ಅಂಶ ಹಾಗೂ ಮತದಾನ ಪ್ರಕ್ರಿಯೆ ಅಪ್ಡೇಟ್ಸ್

Newest First Oldest First
5:00 PM, 7 Dec
18 ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯ
ಜಾರ್ಖಂಡ್ ಎರಡನೇ ಹಂತದ ಚುನಾವಣೆ: 18 ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯ ಶೇ 59.27ರಷ್ಟು ಮತದಾನ ದಾಖಲಾಗಿದೆ. ಸಿಸಾಯಿ ಕ್ಷೇತ್ರದಲ್ಲಿ ಅತ್ಯಧಿಕ ಶೇ 68.6 ರಷ್ಟು ಮತದಾನ. ಜೇಮ್ಶೇಡ್ಪುರ್ ಪೂರ್ವ ಹಾಗೂ ಜೇಮ್ಶೇಡ್ಪುರ್ ಪಶ್ಚಿಮದಲ್ಲಿ ಮಾತ್ರ 5 ಗಂಟೆ ತನಕ ಮತದಾನ ನಡೆಯಲಿದೆ.
4:46 PM, 7 Dec
ಜಾರ್ಖಂಡ್ ಎರಡನೇ ಹಂತದ ಚುನಾವಣೆ: ಮಧ್ಯಾಹ್ನ 3 ಗಂಟೆಗೆ ಶೇ 59.27ರಷ್ಟು ಮತದಾನ ದಾಖಲಾಗಿದೆ.
3:34 PM, 7 Dec
ಜಾರ್ಖಂಡ್ ಎರಡನೇ ಹಂತದ ಚುನಾವಣೆ: ಮಧ್ಯಾಹ್ನ 2 ಗಂಟೆಗೆ ಶೇ 45.41ರಷ್ಟು ಮತದಾನ ದಾಖಲಾಗಿದೆ. ಸಿಸಾಯಿಯಲ್ಲಿ ಅಧಿಕ ಶೇ54.56%, ಜೇಮ್ಶೇಡ್ಪುರ್ ಪಶ್ಚಿಮ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ33ರಷ್ಟು ಮಾತ್ರ ಮತದಾನವಾಗಿದೆ.
2:55 PM, 7 Dec
ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಸಾವು
ಸಿಂಗ್ ಬಮ್ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯೊಬ್ಬರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಸಹಾಯಕ ಸಬ್ ಇನ್ಸ್ ಪೆಕ್ಟರ್ ಚಂದ್ರಗಿರಿ(44) ಎಂದು ಗುರುತಿಸಲಾಗಿದೆ. ಬರ್ಸೋಲೆಯ ಭೂತ್ ನಂಬರ್ 234ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಬಹರಗೋಡಾ ಪೊಲೀಸ್ ಠಾಣಾಧಿಕಾರಿ ರಾಜಧಾನ್ ಸಿಂಗ್ ಹೇಳಿದ್ದಾರೆ.
2:52 PM, 7 Dec
ಮಧ್ಯಾಹ್ನ 1 ಗಂಟೆಗೆ ಸಿಸಾಯಿ ಕ್ಷೇತ್ರದಲ್ಲಿ ಶೇ54ರಷ್ಟು ಮತದಾನ, ಒಟ್ಟಾರೆ 20 ಕ್ಷೇತ್ರಗಳಲ್ಲಿ ಸರಾಸರಿ 45.41% ಮತದಾನ ದಾಖಲು.
12:14 PM, 7 Dec
ಸಿಸಾಯಿ ಕ್ಷೇತ್ರದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಗುಮ್ಲಾದ ಸಿಸಾಯಿ ಕ್ಷೇತ್ರದ ಭದ್ರತಾ ಸಿಬ್ಬಂದಿ ಆಯುಧ ಕಸಿಯಲು ಯತ್ನಿಸಿದ್ದರಿಂದ ಕೆಲೆಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಬೂತ್ ನಂಬರ್ 36ರಂದು ನಡೆದ ಈ ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ
12:09 PM, 7 Dec
ಬೆಳಗ್ಗೆ 10 ಗಂಟೆ ಶೇ 14.92 ಮತದಾನವಾಗಿದೆ. ಚಾಯಿಬಾಸದಲ್ಲಿ ಶೇ27.32ರಷ್ಟು ಅತ್ಯಧಿಕ ಹಾಗೂ ಕೊಲೆಬಿರಾ ಕ್ಷೇತ್ರದಲ್ಲಿ ಶೇ 8.5 ರಷ್ಟು ಅತಿ ಕಡಿಮೆ ಮತದಾನ ದಾಖಲಾಗಿದೆ.
10:34 AM, 7 Dec
ಬೆಳಗ್ಗೆ 9 ಗಂಟೆ ಶೇ 13.03% ಮತದಾನವಾಗಿದೆ. ಐದು ಹಂತಗಳ ಪೈಕಿ 2ನೇ ಹಂತದ ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಯಿಂದ ಚಾಲನೆಯಲ್ಲಿದೆ.
10:34 AM, 7 Dec
ಸಿಎಂ ರಘುಬರ್ ದಾಸ್, ರೆಬೆಲ್ ಬಿಜೆಪಿ ನಾಯಕ ಸರ್ಯು ರಾಯ್ ಮತದಾನ ಮಾಡಿದರು.
9:58 AM, 7 Dec
ಜಮ್ಶೇಡ್ಪುರ್ ಪೂರ್ವ ಕ್ಷೇತ್ರದಲ್ಲಿ ಇವಿಎಂ ದೋಷ, ವಿದ್ಯುತ್ ಪೂರೈಕೆ ವ್ಯತ್ಯಯ ಕಂಡು ಬಂದಿದ್ದು, ಬೂತ್ ನಂಬರ್ 12ರಲ್ಲಿ ಕೆಲ ಕಾಲ ಮತದಾನ ಪ್ರಕ್ರಿಯೆ ಸ್ಥಗಿತ
9:23 AM, 7 Dec
ಖುಂತಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡುತ್ತಿರುವ ಚಿತ್ರ
9:16 AM, 7 Dec
ಜಾರ್ಖಂಡ್ ಮೊದಲ ಹಂತದಲ್ಲಿ ನವೆಂಬರ್ 30ರಂದು 6 ಜಿಲ್ಲೆಗಳ 13 ಕ್ಷೇತ್ರಗಳಲ್ಲಿ 62.87% ರಷ್ಟು ಮತದಾನ ದಾಖಲಾಗಿದೆ. ಛಾತ್ರಾ, ಗುಮ್ಲಾ, ಬಿಷುಣ್ ಪುರ್, ಲೊಹರ್ ದಾಗ, ಮಾನಿಕಾ, ಲತೇಹಾರ್, ಪಾನ್ಕಿ, ದಾಲ್ಟೊನ್ ಗಂಜ್, ಬಿಶ್ರಾಮ್ ಪುರ್, ಛಾತರೊರ್, ಹುಸೈನಾಬಾದ್, ಗರ್ಹ್ವಾ ಹಾಗೂ ಭವಾನಾಥ್ ಪುರ್ ಮೊದಲ ಹಂತದ ಮತದಾನವಾಗಿದೆ.
8:25 AM, 7 Dec
ಬಿಜೆಪಿ ಹಾಗೂ ಜಾರ್ಖಂಡ್ ವಿಕಾಸ್ ಮೋರ್ಚಾ ಎಲ್ಲಾ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಜಾರ್ಖಂಡ್ ಮುಕ್ತಿ ಮೋರ್ಚಾ, ಬಹುಜನ ಸಮಾಜ ಪಕ್ಷ ಹಾಗೂ ಕಾಂಗ್ರೆಸ್ ಕ್ರಮವಾಗಿ 14 ಹಾಗೂ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಆರ್ ಜೆಡಿ 7 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹೊಂದಿದೆ. ಸಿಪಿಐ ಹಾಗೂ ಸಿಪಿಐ ಎಂ ತಲಾ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ.
7:31 AM, 7 Dec
20 ಕ್ಷೇತ್ರಗಳಲ್ಲಿ ಪ್ರಮುಖ ಅಭ್ಯರ್ಥಿಗಳು
ಪ್ರಮುಖ ಅಭ್ಯರ್ಥಿಗಳು: ಮುಖ್ಯಮಂತ್ರಿ ಬಿಜೆಪಿ ಅಭ್ಯರ್ಥಿ ರಘುಬರ್ ದಾಸ್(ಜೇಮ್ಶೇಡ್ಪುರ್(ಪೂರ್ವ)), ಸ್ಪೀಕರ್ ದಿನೇಶ್ ಒರಾಯಾನ್(ಸಿಸಾಯಿ), ಸಚಿವ ನೀಲ್ ಕಂಥ್ ಸಿಂಗ್ ಮುಂಡಾ (ಖುಂತಿ), ಬಿಜೆಪಿ ರಾಜ್ಯಾಧ್ಯಕ್ಷ ಲಕ್ಷ್ಮಣ್ ಗಿಲುಯಾ(ಚಕ್ರಧಾರ್ ಪುರ್), ಎಜೆ ಎಸ್ ಯು ಅಭ್ಯರ್ಥಿ ರಾಮಚಂದ್ರ ಸಾಹಿಸ್(ಜುಗಾಸಲಾಯಿ), ಜೆಪಿಸಿಸಿ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಬಾಲ್ಮಾಚು,(ಘತ್ಸಿಲಾ), ಜೆಡಿಯು ಅಧ್ಯಕ್ಷ ಸಲ್ಖಾನ್ ಮುರ್ಮು(ಮಳಗಾಂವ್), ಜೆವಿಎಂ ಪಿಯಿಂದ ಬಂಧು ಟಿರ್ಕೆ(ಮಂದಾರ್).
7:20 AM, 7 Dec
ಮತದಾನ ನಡೆಯಲಿರುವ 20 ಕ್ಷೇತ್ರಗಳು
ಮತದಾನ ನಡೆಯಲಿರುವ 20 ಕ್ಷೇತ್ರಗಳು: ಬಹರಾಗೊರಾ, ಘತ್ಸಿಲಾ, ಪೊಟ್ಕಾ, ಜುಗಾಸಲಾಯಿ, ಜೇಮ್ಶೇಡ್ಪುರ್(ಪೂರ್ವ), ಜೇಮ್ಶೇಡ್ಪುರ್(ಪಶ್ಚಿಮ), ಸೆರಾಯಿಕೆಲಾ, ಚಾಯಿಬಾಸ, ಮಳಗಾಂವ್, ಜಗನಾಥ್ ಪುರ್, ಮನೊಹರ್ ಪುರ್, ಚಕ್ರಾಧರ್ಪುರ್,ಖಾರ್ಸಾವಾನ್, ತಮಾರ್, ತೊರ್ಪಾ, ಖುಂತಿ, ಮಾಂದಾರ್, ಸಿಸಾಯಿ, ಸಿಮ್ದೆಗಾ ಹಾಗೂ ಕೊಲೆಬಿರಾ
7:16 AM, 7 Dec
20 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 260 ಅಭ್ಯರ್ಥಿಗಳು
ಒಟ್ಟು 47,24,968 ಮತದಾರರು, 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 260 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. 20 ಕ್ಷೇತ್ರಗಳ ಪೈಕಿ 16 ಕ್ಷೇತ್ರಗಳು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದರೆ, ಒಂದು ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.
7:15 AM, 7 Dec
ಎರಡನೇ ಹಂತದ ಮತದಾನ ಪ್ರಕ್ರಿಯೆ ಆರಂಭ
ಜೇಮ್ಶೇಡ್ಪುರ್ (ಪೂರ್ವ) ಹಾಗೂ ಜೇಮ್ಶೇಡ್ಪುರ್ (ಪಶ್ಚಿಮ) ಕ್ಷೇತ್ರಗಳಲ್ಲಿ ಡಿಸೆಂಬರ್ 07ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆ ತನಕ ಮತದಾನ ನಡೆಯಲಿದೆ. ಮಿಕ್ಕ 18 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ 3 ಗಂಟೆ ತನಕ ಮಾತ್ರ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.
12:18 AM, 7 Dec
ಜಾರ್ಖಂಡ್ ನ 19 ಜಿಲ್ಲೆಯ 69 ವಿಧಾನಸಭೆ ಕ್ಷೇತ್ರಗಳು ನಕ್ಸಲ್ ಪೀಡಿತ ಕ್ಷೇತ್ರಗಳೆನಿಸಿದ್ದು, ವಿವಿಧ ಹಂತಗಳಲ್ಲಿ ವಿವಿಧ ಕಾಲಾವಧಿಯಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಭಾರಿ ಬಿಗಿ ಭದ್ರತೆಯನ್ನು ಚುನಾವಣಾ ಆಯೋಗ ನಿಯೋಜಿಸಿದೆ. 42000 ಸಿಬ್ಬಂದಿ 7 ಜಿಲ್ಲೆಗಳ 20 ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
12:14 AM, 7 Dec
ಸಿ ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 41 ಸ್ಥಾನ ಸಿಗಲಿದೆ. ಪ್ರಮುಖ ವಿಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 18 ರಿಂದ 28 ಸ್ಥಾನಗಳನ್ನು ಗಳಿಸಬಹುದು, ಕಾಂಗ್ರೆಸ್ ಪಕ್ಷ 4 ರಿಂದ 10 ಸೀಟು ಗೆಲ್ಲಬಹುದು ಎಂದು ಹೇಳಲಾಗಿದೆ. ಅಖಿಲ ಜಾರ್ಖಂಡ್ ವಿದ್ಯಾರ್ಥಿ ಸಂಘಟನೆ(ಎಜೆಎಸ್ ಯು) 3 ರಿಂದ 9 ಸ್ಥಾನ ಗಳಿಸಬಹುದು. ಜಾರ್ಖಂಡ್ ವಿಕಾಸ್ ಮೋರ್ಚಾ ಹಾಗೂ ಇನ್ನಿರರ ಪಕ್ಷಗಳು 3-9 ಸ್ಥಾನ ಪಡೆಯಬಹುದು ಎಂದು ಹೇಳಿದೆ.

English summary
Jharkhand Assembly Elections: Voting for the second of the five-phase assembly election in 20 seats in Jharkhand will be held on Saturday(Dec 07).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X