• search
  • Live TV
ರಾಂಚಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Jharkhand Assembly Election Phase 4 Live: ಜಾರ್ಖಂಡ್ 4ನೇ ಹಂತದ ಚುನಾವಣೆ

|
Google Oneindia Kannada News

ರಾಂಚಿ, ಡಿಸೆಂಬರ್ 16: ಜಾರ್ಖಂಡ್ ವಿಧಾನಸಭೆಗೆ ನಾಲ್ಕನೇ ಹಂತದ ಮತದಾನ ಸೋಮವಾರ ನಡೆಯುತ್ತಿದೆ. ನಾಲ್ಕು ಜಿಲ್ಲೆಗಳ ಹದಿನೈದು ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಧನಬಾದ್, ಗಿರಿದಿಹ್, ದಿಯೋಘರ್ ಮತ್ತು ಬೊಕಾರೋ ಜಿಲ್ಲೆಗಳಲ್ಲಿ ಚುನಾವಣೆ ನಡೆಯುತ್ತಿದೆ.

ಐದು ನಕ್ಸಲ್ ಪೀಡಿತ ಪ್ರದೇಶಗಳಾದ ಬಾಗೋದರ್, ಜಾಮುವಾ, ಗಿರಿದಿಹ್, ದುಮ್ರಿ ಮತ್ತು ತುಂಡಿಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಆರಂಭವಾಗುವ ಮತದಾನ ಮಧ್ಯಾಹ್ನ 3 ಗಂಟೆಗೆ ಮುಕ್ತಾಯಗೊಳ್ಳಲಿದೆ. ಉಳಿದ ಹತ್ತು ಕ್ಷೇತ್ರಗಳಿಗೆ 7 ಗಂಟೆಗೆ ಆರಂಭವಾಗುವ ಮತದಾನ ಸಂಜೆ 5 ಗಂಟೆಯವರೆಗೂ ಮುಂದುವರಿಯಲಿದೆ. ಐದನೇ ಹಾಗೂ ಕೊನೆಯ ಹಂತದ ಮತದಾನವು ಡಿ. 20ರಂದು 16 ಕ್ಷೇತ್ರಗಳಲ್ಲಿ ನಡೆಯಲಿದೆ.

ಗುರುವಾರ ನಡೆದ ಮೂರನೇ ಹಂತದ ಚುನಾವಣೆಯಲ್ಲಿ ಶೇ 62.60ರಷ್ಟು ಮತದಾನ ನಡೆದಿತ್ತು. ಜಾರ್ಖಂಡ್ ನಕ್ಸಲ್ ಪೀಡಿತ ಪ್ರದೇಶವಾಗಿರುವುದರಿಂದ ಸೂಕ್ಷ್ಮ ಸ್ಥಳಗಳಲ್ಲಿ ಭಾರಿ ಭದ್ರತೆ ನಿಯೋಜಿಸಲಾಗಿದೆ.

Jharkhand Assembly Elections 4th Phase Voting Live Updates

ಸೋಮವಾರ ಮತದಾನ ನಡೆಯಲಿರುವ ಕ್ಷೇತ್ರಗಳು ಬಿಜೆಪಿಗೆ ಅತ್ಯಂತ ನಿರ್ಣಾಯಕವಾಗಿವೆ. ಈ 15 ಕ್ಷೇತ್ರಗಳ ಪೈಕಿ ಒಂದರಲ್ಲಿಯೂ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಮೀಸಲಾದ ಕ್ಷೇತ್ರವಿಲ್ಲ. 2914ರ ಚುನಾವಣೆಯಲ್ಲಿ ಈ 15ರಲ್ಲಿ 10 ಕ್ಷೇತ್ರಗಳು ಬಿಜೆಪಿಗೆ ಒಲಿದಿದ್ದವು. ಜೆಎಂಎಂ ಎರಡು ಸೀಟುಗಳನ್ನು ಗೆದ್ದಿದ್ದರೆ, ಎಜೆಎಸ್‌ಯು, ಜೆವಿಎಂ ಮತ್ತು ಎಂಸಿಸಿ ತಲಾ ಒಂದು ಕ್ಷೇತ್ರಗಳಲ್ಲಿ ಗೆದ್ದಿದ್ದವು.

Newest First Oldest First
4:19 PM, 16 Dec
ಐದು ಕ್ಷೇತ್ರಗಳಲ್ಲಿ ಮತದಾನವು 3 ಗಂಟೆಗೆ ಅಂತ್ಯಗೊಂಡಿದೆ.
2:40 PM, 16 Dec
ಪಾಕೂರ್‌ನಲ್ಲಿ ಮಾತನಾಡಿದ ಅಮಿತ್ ಶಾ, ರಾಹುಲ್ ಬಾಬಾ ಮತ್ತು ಹೇಮಂತ್ ಸೊರೆನ್ ಅವರು ಜಾರ್ಖಂಡ್‌ನಲ್ಲಿ ಕಾಶ್ಮೀರದ ಬಗ್ಗೆ ಏಕೆ ಮಾತನಾಡುತ್ತೀರಿ ಎಂದು ಕೇಳುತ್ತಾರೆ. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿರುವುದನ್ನು ನೋಡಲು ನೀವು ಬಯಸುತ್ತಿಲ್ಲವೇ? 370ನೇ ವಿಧಿ ರದ್ದತಿ ಬಳಿಕ ಕಾಶ್ಮೀರವು ಎಂದೆಂದಿಗೂ ಭಾರತದ ಭಾಗವಾಗಿಬಿಟ್ಟಿದೆ- ಅಮಿತ್ ಶಾ
2:37 PM, 16 Dec
ಅಟಲ್ ಬಿಹಾರಿ ವಾಜಪೇಯಿ ಜಾರ್ಖಂಡ್ ರಾಜ್ಯ ರಚಿಸಲು ನೆರವು ನೀಡಿದರು. ಪ್ರಧಾನಿ ಮೋದಿ ರಾಜ್ಯವನ್ನು ಅಭಿವೃದ್ಧಿಪಡಿಸಿದರು. ನಕ್ಸಲಿಸಂಅನ್ನು 20 ಅಡಿ ಆಳದವರೆಗೆ ಹೂತುಹಾಕಿದರು- ಅಮಿತ್ ಶಾ
2:34 PM, 16 Dec
ಮಧ್ಯಾಹ್ನ 1 ಗಂಟೆವರೆಗೆ ಶೇ 44.65ರಷ್ಟು ಮತದಾನ ನಡೆದಿರುವುದು ದಾಖಲಾಗಿದೆ.
2:32 PM, 16 Dec
ಜಾರ್ಖಂಡ್‌ನಲ್ಲಿ ಬಲವಂತದ ಮತಾಂತರ ಸುದೀರ್ಘ ಕಾಲದ ಸಮಸ್ಯೆಯಾಗಿತ್ತು. ರಘುಬರ್ ದಾಸ್ ಸರ್ಕಾರವು ಮತಾಂತರ ತಡೆ ಕಾಯ್ದೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ- ಜಾರ್ಖಂಡ್ ಚುನಾವಣಾ ಪ್ರಚಾರದಲ್ಲಿ ಅಮಿತ್ ಶಾ ಹೇಳಿಕೆ.
1:00 PM, 16 Dec
ಜಾಮುವಾ, ಬಗೋದರ್, ಗಿರಿದಿಹ್, ದುಮ್ರಿ ಮತ್ತು ತುಂಡಿ ಪ್ರದೇಶಗಳಲ್ಲಿ ಮಧ್ಯಾಹ್ನ 3 ಗಂಟೆಗೇ ಮತದಾನ ಅಂತ್ಯಗೊಳ್ಳಲಿದೆ.
12:25 PM, 16 Dec
ಬೆಳಿಗ್ಗೆ 11 ಗಂಟೆಯವರೆಗಿನವರೆಗೆ 15 ಕ್ಷೇತ್ರಗಳಲ್ಲಿ ಶೇ 28.6ರಷ್ಟು ಮತದಾನ ನಡೆದಿರುವುದು ವರದಿಯಾಗಿದೆ. 47 ಲಕ್ಷಕ್ಕೂ ಅಧಿಕ ಜನರು ತಮ್ಮ ಮತ ಚಲಾವಣೆ ಮಾಡಿದ್ದಾರೆ.
10:15 AM, 16 Dec
ಬೆಳಿಗ್ಗೆ 9 ಗಂಟೆಯವರೆಗೆ 11.85%ರಷ್ಟು ಮತದಾನ ನಡೆದಿದೆ.
9:11 AM, 16 Dec
6,101 ಮತಗಟ್ಟೆಗಳ ಪೈಕಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿರುವ 587 ಅತಿ ಸೂಕ್ಷ್ಮ ಮತ್ತು 405 ಸೂಕ್ಷ್ಮ ಮತಗಟ್ಟೆಗಳಾಗಿವೆ. ನಕ್ಸಲ್ ಪ್ರಭಾವಕ್ಕೆ ಒಳಗಾಗದ ಪ್ರದೇಶಗಳಲ್ಲಿ 546 ಅತಿ ಸೂಕ್ಷ್ಮ ಮತ್ತು 2,665 ಸೂಕ್ಷ್ಮ ಮತಗಟ್ಟೆಗಳಿವೆ.
8:32 AM, 16 Dec
ರಾಹುಲ್ ಗಾಂಧಿ ಅವರ 'ರೇಪ್ ಇನ್ ಇಂಡಿಯಾ' ಹೇಳಿಕೆಯ ವಿರುದ್ಧ ಚುನಾವಣಾ ಆಯೋಗದಲ್ಲಿ ದೂರು ದಾಖಲಾಗಿದ್ದು, ವಿವರವಾದ ಮಾಹಿತಿ ಕೇಳಿದೆ.
7:44 AM, 16 Dec
'ಇಂದು ಜಾರ್ಖಂಡ್ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ನಡೆಯಲಿದೆ. ಎಲ್ಲ ಮತದಾರರೂ ತಮ್ಮ ಮತಗಳನ್ನು ಚಲಾಯಿಸಲು ಮತ್ತು ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಬೇಕೆಂದು ಕೋರುತ್ತೇನೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
7:42 AM, 16 Dec
ಡಿ. 20ರಂದು ಕೊನೆಯ ಸುತ್ತಿನ ಮತದಾನ ನಡೆಯಲಿದ್ದು, ಡಿ. 23ರಂದು ಮತ ಎಣಿಕೆ ಮತ್ತು ಫಲಿತಾಂಶ ಹೊರಬೀಳಲಿದೆ.
7:41 AM, 16 Dec
ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.
6:21 AM, 16 Dec
ಗೃಹ ಸಚಿವ ಮೂರು ಕ್ಷೇತ್ರಗಳಲ್ಲಿ ಪ್ರಚಾರ ಸಮಾವೇಶಗಳನ್ನು ನಡೆಸಿದ್ದರು. ಮುಖ್ಯಮಂತ್ರಿ ರಘುಬರ್ ದಾಸ್ ಒಂದು ಕಡೆ ರೋಡ್ ಶೋ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ಗುರುವಾರ ಧನ್‌ಬಾದ್‌ದಲ್ಲಿ ಪ್ರಚಾರ ಸಭೆ ನಡೆಸಿದ್ದರು. ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಪ್ರಮುಖರು ಪ್ರಚಾರ ನಡೆಸಿದ್ದರು.
6:21 AM, 16 Dec
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡು ಕಡೆ ಬೃಹತ್ ಪ್ರಚಾರ ಸಭೆ ನಡೆಸಿದ್ದರು. ರಾಜಸ್ಥಾನದ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ ಪ್ರಚಾರ ನಡೆಸಿದ್ದರು.
6:20 AM, 16 Dec
ಸೋಮವಾರ ಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲಿ 221 ಅಭ್ಯರ್ಥಿಗಳಿದ್ದು, ಅದರಲ್ಲಿ 23 ಮಹಿಳೆಯರಿದ್ದಾರೆ.
6:20 AM, 16 Dec
45,85,009 ಮತದಾರರು ಸೋಮವಾರ ಮತದಾನ ಮಾಡಲು ಅರ್ಹರಾಗಿದ್ದಾರೆ. ಇವರಲ್ಲಿ 25,40,794 ಪುರುಷ ಮತದಾರರು ಮತ್ತು 22,44,134 ಮಹಿಳಾ ಮತದಾರರಿದ್ದಾರೆ. 95,795 ಮಂದಿ ಮೊದಲ ಬಾರಿ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.
6:20 AM, 16 Dec
ಹಾಲಿ ಸಚಿವರಾದ ಅಮರ್ ಕುಮಾರ್ ಬೌರಿ ಮತ್ತು ರಾಜ್ ಪಲಿವಾರ್ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

English summary
Jharkhand Assembly Elections fourth Phase live updates in Kannada: Voting for the 4th phase in 15 constituencies of Jharkhand will be held on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X