ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇಕೆದಾಟು ಪಾದಯಾತ್ರೆ; ರೈತರಿಗೆ ನಿರಾಕರಿಸಿದ್ದ ಜಿಲ್ಲಾಡಳಿತ ಈಗೇನು ಮಾಡುತ್ತದೆ?

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ 7: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮ- ಮೇಕೆದಾಟು ನಡುವೆ ಅಣೆಕಟ್ಟು ನಿರ್ಮಾಣ ಮಾಡಬೇಕೆಂಬುದು ಬಯಲು ಸೀಮೆ ಜನರ ಬಹುದಿನದ ಕನಸು. ಹೀಗಾಗಿ 2013ರಿಂದಲೂ ಈ ಯೋಜನೆ ಜಾರಿಗೆ ಆಗ್ರಹಿಸಿ, ರೈತರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಆದರೆ ಯಾವ ಹೋರಾಟವು ತಾರ್ಕಿಕ ಅಂತ್ಯ ಕಂಡಿಲ್ಲ.

ಕರ್ನಾಟಕ ರಾಜ್ಯ ರೈತ ಸಂಘ, ಹಲವು ಕನ್ನಡಪರ ಸಂಘಟನೆಗಳು ಸೇರಿದಂತೆ ಮೇಕೆದಾಟು ಹೋರಾಟ ಸಮಿತಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಹಲವು ಪ್ರತಿಭಟನೆ ಹೋರಾಟಗಳನ್ನು ಹಮ್ಮಿಕೊಂಡಿವೆ. ಕೆಲವೊಂದು ಹೋರಾಟ ಜಿಲ್ಲಾ ಕೇಂದ್ರಕ್ಕೆ ಅಷ್ಟೇ ಸೀಮಿತವಾಗಿದ್ದವು.

ಕಳೆದ ವರ್ಷ ಮೇಕೆದಾಟು ಅಣೆಕಟ್ಟು ವ್ಯಾಪ್ತಿಯ ಎಲ್ಲಾ ಜಿಲ್ಲೆಯ ರೈತರು ಸಂಘಟಿತರಾಗಿ ಮೇಕೆದಾಟು ಹೋರಾಟ‌ ಸಮಿತಿ‌ ರಚನೆ ಮಾಡಿಕೊಂಡು ಸಮಿತಿಯ ಮೂಲಕ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಮೇಕೆದಾಟು ಸ್ಥಳದಿಂದ ಬೆಂಗಳೂರಿಗೆ ಐದು ದಿನದ ಪಾದಯಾತ್ರೆ ಕೂಡ ಹಮ್ಮಿಕೊಂಡಿತ್ತು.

ramanagara district administration what stand on mekedatu padayatra

ಕಳೆದ ಸೆಪ್ಟೆಂಬರ್ ತಿಂಗಳ ಸಂಗಮ ಸ್ಥಳದಿಂದ ಕಾವೇರಿಗೆ ತಾಯಿ ಪೂಜೆ ಸಲ್ಲಿಸಿ, ಕಳಸದಲ್ಲಿ ಕಾವೇರಿ ನೀರು ತುಂಬಿಕೊಂಡು ಬೆಂಗಳೂರಿನತ್ತ ಹೊರಟ ಪಾದಯಾತ್ರೆಯನ್ನು ಕನಕಪುರದಲ್ಲಿ ತಡೆದ ಜಿಲ್ಲಾಡಳಿತ ಕೋವಿಡ್ ಕಾರಣ ನೀಡಿ ಪಾದಯಾತ್ರೆ ಮುಂದುವರೆಯಲ್ಲಿ ಅವಕಾಶ ಮಾಡಿಕೊಟ್ಟಿರಲಿಲ್ಲ.

ರಾಮನಗರ ಜಿಲ್ಲಾಡಳಿತದ ನಡೆಯನ್ನು ಖಂಡಿಸಿ ಮೇಕೆದಾಟು ಹೋರಾಟ ಸಮಿತಿಯ ಸದಸ್ಯರು ಕನಕಪುರದಲ್ಲಿ ಪ್ರತಿಭಟನೆ ನಡೆಸಿ, ತೀವ್ರವಾಗಿ ಖಂಡಿಸಿದ್ದರು. ಅಲ್ಲದೇ ಮೇಕೆದಾಟು ಸ್ಥಳದಲ್ಲಿ ಕನ್ನಡಪರ ವಾಟಾಳ್ ನಾಗರಾಜ್ ಸೇರಿದಂತೆ ಯಾವುದೇ ಸಂಘಟನೆ ಪ್ರತಿಭಟನೆಗೆ ಜಿಲ್ಲಾಡಳಿತ ನಿರಾಕರಿಸಿತ್ತು.

ಇದೀಗ ಕೋವಿಡ್ ಮೂರನೇ ಅಲೆ ರಾಜ್ಯಕ್ಕೆ ಅಪ್ಪಳಿಸುತ್ತಿರುವ ಸಮಯದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ "ನಮ್ಮ ಹಕ್ಕು ನಮ್ಮ ನೀರು' ಪಾದಯಾತ್ರೆಗೆ ಜಿಲ್ಲಾಡಳಿತ ಯಾವ ರೀತಿ ಸ್ಪಂದಿಸುತ್ತದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.

ramanagara district administration what stand on mekedatu padayatra

ಇನ್ನು ಮೇಕೆದಾಟು ಅಣೆಕಟ್ಟು ಆದರೆ ಸುಮಾರು 66 ಟಿಎಂಸಿಯಷ್ಟು ನೀರು ಸಹ ಸಂಗ್ರಹ ಆಗಲಿದೆ. ಅಲ್ಲದೆ 400ರಿಂದ 440 ಮೆಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದನೆ ಮಾಡಬಹುದಾಗಿದೆ. ಈ ಮೂಲಕ ಬಯಲು ಸೀಮೆ ಜನರ ಕುಡಿಯುವ ನೀರಿನ ದಾಹ ತೀರಲಿದೆ. ಇದೀಗ ಯೋಜನೆ ರಾಜಕೀಯ ಬಣ್ಣ ಪಡೆದುಕೊಂಡಿದೆ.

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಜಯಕರ್ನಾಟಕ ಸಂಘಟನೆ ಬೆಂಬಲ
ಇದೇ ಭಾನುವಾರ, ಜ.9ರಂದು ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ 'ನಮ್ಮ ಹಕ್ಕು ನಮ್ಮ ನೀರು' ವಿಚಾರವಾಗಿ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಜಾರಿಗೊಳಿಸಬೇಕು ಒತ್ತಾಯಿಸಿ ನಡೆಯುವ ಪಾದಯಾತ್ರೆಯನ್ನು ಬೆಂಬಲಿಸುವುದಾಗಿ ಜಯಕರ್ನಾಟಕ ಸಂಘಟನೆ ರಾಜ್ಯ ಪ್ರಮುಖ ಸಲಹೆಗಾರ ಪ್ರಕಾಶ್ ರೈ ಘೋಷಣೆ ಮಾಡಿದರು.

ಶುಕ್ರವಾರ ರಾಮನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮೇಕೆದಾಟು ಪಾದಯಾತ್ರೆ ಬೆಂಬಲಿಸುವ ತೀರ್ಮಾನ ತಿಳಿಸಿದರು. ಪಾದಯಾತ್ರೆ
ಯಶಸ್ವಿಗೊಳಿಸಲು ಡಿ.ಕೆ. ಶಿವಕುಮಾರ್ ಸಂಘಟನೆಯ ಸಹಕಾರ ಕೋರಿ ಮಾಡಿರುವ ಮನವಿಗೆ ಸ್ಪಂದಿಸಿ ಅಣ್ಣ ಮುತ್ತಪ್ಪ ರೈ ಸ್ಥಾಪಿತ ಜಯಕರ್ನಾಟಕ ಸಂಘಟನೆ ಬೆಂಬಲಿಸುತ್ತದೆ ಎಂದು ತಿಳಿಸಿದರು.

ಕಳೆದ 14 ವರ್ಷಗಳಿಂದ ಜಯಕರ್ನಾಟಕ ಸಂಘಟನೆ ನಾಡು ನುಡಿ ಜಲ ಪರವಾಗಿ ನಿರಂತರ ಹೋರಾಟವನ್ನು ಮಾಡಿಕೊಂಡು ಬಂದಿದ್ದು, ಎಲ್ಲರಿಗೂ ತಿಳಿದಿರುವ ವಿಚಾರ. ಅನೇಕ ವರ್ಷಗಳಿಂದ ರಾಮನಗರ ಜಿಲ್ಲೆಯಲ್ಲಿ ಎಲ್ಲಾ ರೈತ ಮತ್ತು ಕನ್ನಡಪರ ಸಂಘಟನೆಗಳು ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಬೇಕೆಂದು ಹೋರಾಟಗಳನ್ನು ಮಾಡಿಕೊಂಡು ಬಂದಿದೆ.

ಜಯಕರ್ನಾಟಕ ಸಂಘಟನೆಯು ರಾಮನಗರ ಜಿಲ್ಲೆಗೆ ನೀರಾವರಿ ವಿಚಾರಕ್ಕೆ ಸಂಬಂಧಪಟ್ಟಂತೆ ವೃಷಭಾವತಿ ನದಿ ನೀರು ಶುದ್ಧೀಕರಣ, ಬಿಡದಿ ಭಾಗಕ್ಕೆ ಕಾವೇರಿ ನೀರು ಪೂರೈಕೆ, ಅರ್ಕಾವತಿ ನದಿ ಶುದ್ಧೀಕರಣ, ಮಂಚನಬೆಲೆ ಎಡದಂಡೆ ಬಲದಂಡೆ ನಾಲೆಯಲ್ಲಿ ನೀರು ಹರಿಸುವಂತೆ ಒತ್ತಾಯ ಹಾಗೂ ಮೇಕೆದಾಟು ಆಣೆಕಟ್ಟು ಕುಡಿಯುವ ನೀರು ಯೋಜನೆಯನ್ನು ಜಾರಿಗೊಳಿಸಬೇಕೆಂದು ಅನೇಕ ವರ್ಷಗಳಿಂದ ನಿರಂತರವಾಗಿ ಹೋರಾಟವನ್ನು ಮಾಡಿದೆ ಎಂದು ಪ್ರಕಾಶ್ ರೈ ತಿಳಿಸಿದರು.

Recommended Video

Team India ಆಟಗಾರರ ಕಳಪೆ ಆಟದಿಂದ ಬೇಸತ್ತ Dravid | Oneindia Kannada

English summary
Ramanagara district administration what stand on Congress led-by Mekedatu Padayatra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X