• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮನಗರದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ 30 ಕೋಟಿ ಬಿಡುಗಡೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನೆವರಿ 2: ರೇಷ್ಮೆ ನಗರಿ ಖ್ಯಾತಿಯ ರಾಮನಗರದಲ್ಲಿ ಸುಸಜ್ಜಿತ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ಮಾಡಲು ರೂಪುರೇಷೆ ಸಿದ್ಧಗೊಂಡಿದೆ ಎಂದು ರೇಷ್ಮೆ ಖಾತೆ ಸಚಿವ ನಾರಾಯಣ ಗೌಡ ತಿಳಿಸಿದರು.

ರೇಷ್ಮೆ ಹಾಗೂ ಪೌರಾಡಳಿತ ಸಚಿವ‌ ನಾರಾಯಣಗೌಡ ಶನಿವಾರ ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಮನಗರ ಹಾಗೂ ಚನ್ನಪಟ್ಟಣ ಮಾರ್ಗ ಮಧ್ಯೆ 25 ಎಕರೆ ಜಾಗವನ್ನು ಈಗಾಗಲೇ ಮಾರುಕಟ್ಟೆ ನಿರ್ಮಾಣಾಕ್ಕಾಗಿ ರೇಷ್ಮೆ ಇಲಾಖೆಗೆ ಹಸ್ತಾಂತರ ಮಾಡಿದೆ ಎಂದರು.

ರಾಜ್ಯಕ್ಕೆ ಮಾದರಿ ಸಿಲ್ಕ್ ಮಾರುಕಟ್ಟೆ ರಾಮನಗರದಲ್ಲಿ ಮಾಡಲು ಯೋಜನೆ ರೂಪಿಸಲಾಗಿದೆ. ಮಾರುಕಟ್ಟೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆದಿದ್ದು, ಅಲ್ಲದೇ ಸರ್ಕಾರ 30 ಕೋಟಿ ಹಣವನ್ನು ಕೂಡ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ರೇಷ್ಮೆ ಸಚಿವ ಕೆ.ನಾರಾಯಣಗೌಡ ತಿಳಿಸಿದರು.


ರೇಷ್ಮೆ ಮಾರುಕಟ್ಟೆಗೆ ಬರುವ ನಮ್ಮ ರೈತರು ಮಾಸ್ಕ್ ಬಳಸುತ್ತಿಲ್ಲ, ರೈತರು ಹಠವಾದಿಗಳು, ನಮಗೆ ಎನೂ ಆಗಲ್ಲ ಎಂಬ ಭಾವನೆ ಅವರಲ್ಲಿದೆ. ಆದರೆ ಇದೀಗ ಕೊರೊನಾ ರೂಪಾಂತರಗೊಂಡಿದೆ, ಹಾಗಾಗಿ ಅಧಿಕಾರಿಗಳು ರೇಷ್ಮೆ ಮಾರುಕಟ್ಟೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಮಾಸ್ಕ್ ಇಲ್ಲದೆ ಮಾರುಕಟ್ಟೆಗೆ ಬರುವ ರೈತರಿಗೆ ಇಲಾಖೆ ವತಿಯಿಂದ ಮಾಸ್ಕ್ ನೀಡಬೇಕು ಅಂತಾ ಅಧಿಕಾರಿಗಳಿಗೆ ತಾಕೀತು ಮಾಡಿದರು.

English summary
Silk Minister Narayana Gowda said the planning to build a well-equipped high-tech silk market in Ramanagara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X