• search
  • Live TV
ಪುಣೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇ ಭೀಕರ ಅಪಘಾತ, 5 ಮಂದಿ ಸಾವು

|

ಪುಣೆ, ಫೆಬ್ರವರಿ 16: ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಐದು ಮಂದಿ ಮೃತಪಟ್ಟಿದ್ದಾರೆ. ಖಪೋಲಿ ಬಳಿ ಮಂಗಳವಾರ ಮುಂಜಾನೆ ಟ್ರಕ್ ಹಾಗೂ ಇನ್ನೆರಡು ವಾಹನ ಡಿಕ್ಕಿಯಾಗಿದ್ದು, ಐವರು ಮೃತಪಟ್ಟು, ಐವರಿಗೆ ತೀವ್ರ ಗಾಯಗಳಾಗಿವೆ.

ಮೃತರ ಪೈಕಿ ನವಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಎನ್ ಎಂಎಂಸಿ) ವೈದ್ಯರು ಸೇರಿದ್ದಾರೆ. ವೈದ್ಯರು ಹಾಗೂ ಕುಟುಂಬಸ್ಥರು ಇದ್ದ ಕಾರು ಟ್ರಕ್ ಡಿಕ್ಕಿಯಾಗಿದೆ. ಮೃತರನ್ನು ಡಾ ವೈಭವ್ ಝಾಂಜರೆ, ಅವರ ತಾಯಿ ಹಾಗೂ ಪತ್ನಿ ಮತ್ತು ಪುತ್ರಿ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಖಲಾಪುರ್ ಟೋಲ್ ಪ್ಲಾಜಾ ಬಳಿ ನಿಲ್ಲಿಸಿದ್ದ ಎರಡು ಕಾರುಗಳಿಗೆ ಹಿಂಬದಿಯಿಂದ ಟ್ರಕ್ ಬಲವಾಗಿ ಡಿಕ್ಕಿ ಹೊಡಿದಿದೆ. ಟ್ರಕ್ ಚಾಲಕ ಅತಿ ವೇಗದಿಂದ ಚಾಲನೆ ಮಾಡಿದ್ದು ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

English summary
5 killed, 5 injured in collision between multiple vehicles on Mumbai-Pune Expressway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X