ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Just in : ಪುಣೆಯಲ್ಲಿ ಚಾರ್ಜಿಂಗ್ ವೇಳೆ ಎಲೆಕ್ಟ್ರಿಕ್ ಬೈಕ್‌ಗಳಿಗೆ ಬೆಂಕಿ

|
Google Oneindia Kannada News

ಮುಂಬೈ, ಜುಲೈ 19: ಮಹಾರಾಷ್ಟ್ರದ ಪುಣೆ ನಗರದ ಶೋರೂಂನಲ್ಲಿ 7 ಎಲೆಕ್ಟ್ರಿಕ್ ಬೈಕ್‌ಗಳು ಚಾರ್ಜಿಂಗ್ ಸಮಯದಲ್ಲಿ ಬೆಂಕಿಗೆ ಆಹುತಿಯಾಗಿವೆ. ಕಟ್ಟಡಕ್ಕೆ ಹಬ್ಬಿದ್ದ ಬೆಂಕಿಯನ್ನು ಅಗ್ನಿಶಾಮಕದಳದ ಸಿಬ್ಬಂದಿ ನಂದಿಸಿದ್ದಾರೆ.

ಪುಣೆಯ ಗಂಗಾಧಾಮ್ ಪ್ರದೇಶದ ಬಳಿ ಇರುವ ಇ-ಬೈಕ್ ಅಂಗಡಿಯಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

ಪುಣೆ: ED ವಶಕ್ಕೆ ABIL ಸಂಸ್ಥೆ ಚೇರ್ಮನ್ ಅವಿನಾಶ್ ಭೋಸ್ಲೆ ಪುಣೆ: ED ವಶಕ್ಕೆ ABIL ಸಂಸ್ಥೆ ಚೇರ್ಮನ್ ಅವಿನಾಶ್ ಭೋಸ್ಲೆ

ಚಾರ್ಜಿಂಗ್‌ಗಾಗಿ ಬೈಕ್‌ಗಳನ್ನು ಪ್ಲಗ್ ಇನ್ ಮಾಡಲಾಗಿದ್ದು, ಹೆಚ್ಚಿನ ಚಾರ್ಜ್‌ನಿಂದಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ.

Fire Accident At Electric Bike Showroom At Pune While Charging

ಆದರೆ, ವಿವರವಾದ ತನಿಖೆಯ ನಂತರ ಬೆಂಕಿ ಹತ್ತಿಕೊಳ್ಳಲು ನಿಖರ ಕಾರಣ ತಿಳಿಯಲಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯಲ್ಲಿ 7 ಬೈಕ್‌ಗಳು ಸುಟ್ಟು ಕರಕಲಾಗಿವೆ. ಘಟನೆಯ ಕುರಿತು ಕರೆ ಬಂದ ತಕ್ಷಣ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಬೆಂಕಿ ನಂದಿಸಿದ್ದಾರೆ. ಇನ್ನು, ಅಗ್ನಿಶಾಮಕ ದಳದಿಂದ ವರದಿ ಬಂದ ನಂತರ ಬೆಂಕಿಗೆ ನಿಖರ ಕಾರಣ ತಿಳಿಯಲಿದೆ ಎಂದು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ ಪುಣೆಯಲ್ಲಿಯೇ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಘಟನೆ ಬಳಿಕ ಓಲಾ ಎಲೆಕ್ಟ್ರಿಕ್ ಕಂಪನಿಯು ತಪಾಸಣೆಗಾಗಿ 1,441 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ವಾಪಸ್ ಪಡೆದಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೆಂಕಿ ಹತ್ತಿಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಲು ರಚಿಸಲಾದ ತಜ್ಞರ ಸಮಿತಿಯ ವರದಿಯನ್ನು ಪಡೆದ ನಂತರ ಸರ್ಕಾರವು ಈ ಕಂಪನಿಗಳ ಕುರಿತು ಅಗತ್ಯ ಆದೇಶಗಳನ್ನು ಹೊರಡಿಸುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದರು.

English summary
Seven Electric Bikes gutted in fire while charging at Maharashtra's Pune showroom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X