ಮಿಗ್ ತರಬೇತಿ ವಿಮಾನ ಪತನ: ಪೈಲಟ್‌ಗಳು ಪಾರು
ದಾಬೋಲಿಮ್, ನವೆಂಬರ್ 16: ಗೋವಾ ಐಎನ್‌ಎಸ್ ಹನ್ಸಾ ಏರ್‌ಬೇಸ್‌ನಲ್ಲಿ ತರಬೇತಿ ನಿರತವಾಗಿದ್ದ ಮಿಗ್-29ಕೆ ಯುದ್ಧವಿಮಾನ ಪತನವಾಗಿದೆ. ಗೋವಾದ ಡಾಬೋಲಿಂನಲ್ಲಿ ತರಬೇತಿ ವಿಮಾನ ಇದಾಗಿದ್ದು ಅದೃಷ್ಟವಶಾತ್ ಇಬ್ಬರೂ ಫೈಲಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದು ಬೆಳಿಗ್ಗೆ ನಿತ್ಯದಂತೆ ತರಬೇತಿಯಲ್ಲಿ ನಿರತವಾಗಿದ್ದ ಈ ವಿಮಾನ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.
ಪತನಗೊಂಡ ತರಬೇತಿ ವಿಮಾನದಲ್ಲಿ ಕ್ಯಾಪ್ಟನ್ ಎಂ ಶೇಯೋಖಾಂಡ್ ಮತ್ತು ಲೆಫ್ಟಿನೆಂಟ್ ಕಮಾಂಡರ್ ದೀಪಕ್ ಯಾದವ್ ಇದ್ದು ತಕ್ಷಣವೇ ವಿಮಾನದಿಂದ ಬೇರ್ಪಟ್ಟು ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ವಾಯುಸೇನೆ ಈ ವಿಚಾರವಾಗಿ ಅಧಿಕೃತ ಹೇಳಿಕೆಯನ್ನು ನೀಡಿದ್ದು, ತರಬೇತಿ ವರ್ಷನ್‌ನ ಎರಡು ಸೀಟ್‌ಗಳುಳ್ಳ ವಿಮಾನ ಇದಾಗಿದೆ ಎಂದು ತಿಳಿಸಿದೆ. ಈ ತರಬೇತಿ ವಿಮಾನಕ್ಕೆ ಹಕ್ಕಿ ಡಿಕ್ಕಿಹೊಡದ ಕಾರಣ ಇಮಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಈ ಘಟನೆ ಸಂಭವಿಸಿದೆ ಎಂದು ತಿಳಿಸಿದೆ.

ಫೈಲಟ್‌ಗಳು ಪರಿಸ್ಥಿತಿಯನ್ನು ತಕ್ಷಣಕ್ಕೆ ಅರಿತುಕೊಂಡು ವಿಮಾನದಿಂದ ಬೇರ್ಪಟ್ಟಿದ್ದಾರೆ. ಯಾವುದೇ ಜನವಸತಿಯಿಲ್ಲದ ಕಡೆ ವಿಮಾನ ಪತನಗೊಂಡಿರುವುದರಿಂದ ಯಾವುದೇ ಅಪಾಯಗಳು ಆಗಿಲ್ಲ ಎಂದು ವಾಯುಸೇನೆ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ. ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಈ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ. ಇಬ್ಬರೂ ಫೈಲಟ್‌ಗಳ ಜೊತೆಗೂ ಮಾತನಾಡಿದ್ದು, ಫೈಲಟ್‌ಗಳ ಸಮಯ ಪ್ರಜ್ಞೆಯಿಂದಾಗಿ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಶುಭಹಾರೈಸಿದ್ದಾರೆ.
ಕಳೆದ ಜೂನ್ ತಿಂಗಳಲ್ಲೂ ಗೋವಾದ ಏರ್‌ಬೇಸ್‌ನಲ್ಲಿ ಮಿಗ್-29ಕೆ ತರಬೇತಿ ವಿಮಾನವೊಂದು ಪತನಗೊಂಡಿತ್ತು. ಆ ಸಂದರ್ಭದಲ್ಲಿ ಗೋವಾ ವಿಮಾನ ನಿಲ್ದಾಣದಲ್ಲಿ ಸುಮಾರು 90 ನಿಮಿಷಗಳ ಕಾಲ ವಿಮಾನ ಹಾರಾಟದ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು.












Click it and Unblock the Notifications