ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎನ್ಆರ್ ಸ್ಟೇಟಸ್ ಬಗ್ಗೆ ಎಸ್ಎಂಎಸ್ ಬರುತ್ತೆ!

|
Google Oneindia Kannada News

ನವದೆಹಲಿ, ಮಾ.4 : ರೈಲ್ವೆ ಪ್ರಯಾಣಿಕರಿಗೆ ಎಸ್ಎಂಎಸ್ ಮೂಲಕ ಪಿಎನ್ಆರ್ ಮಾಹಿತಿ ತಿಳಿಸುವ ವ್ಯವಸ್ಥೆಗೆ ಸೋಮವಾರ ಚಾಲನೆ ದೊರೆತಿದೆ. ರೈಲಿನಲ್ಲಿ ಪ್ರಯಾಣಿಸಲು ಮುಂಗಡ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಮೊಬೈಲ್ ಮೂಲಕ ಪಿಎನ್ಆರ್ ಮಾಹಿತಿಯನ್ನು ಪಡೆಯಬಹುದಾಗಿದೆ.

ರೈಲ್ವೆ ಮಾಹಿತಿ ವ್ಯವಸ್ಥಾಪನಾ ಕೇಂದ್ರ (ಸಿಆರ್‌ಐಎಸ್) ಎಸ್‌ಎಂಎಸ್ ಗೇಟ್‌ವೇ ರೂಪಿಸಿದೆ. ಈ ಮೂಲಕ ಪ್ರತಿದಿನ 4 ಲಕ್ಷ ಎಸ್‌ಎಂಎಸ್ ರವಾನಿಸುವ ವ್ಯವಸ್ಥೆ ರೂಪಿಸಲಾಗಿದೆ. ಸೋಮವಾರ ರೇಲ್ವೆ ಖಾತೆ ರಾಜ್ಯ ಸಚಿವ ಅಧಿರ್ ರಂಚನ್ ಚೌಧರಿ ಪ್ರಯಾಣಿಕರಿಗೆ ಪಿಎನ್ಆರ್ ಮಾಹಿತಿಯನ್ನು ಎಸ್ಎಂಎಸ್ ಮೂಲಕ ನೀಡುವ ಈ ಸೇವೆಗೆ ಚಾಲನೆ ನೀಡಿದ್ದಾರೆ. [ರೈಲ್ವೆ ಪ್ರಯಾಣ ರದ್ದಾದರೆ ರೀಫಂಡ್ ಮಾಡುವುದಿಲ್ಲ]

Indian Railway

ಎಸ್‌ಎಂಎಸ್ ಗೇಟ್‌ವೇ ಮೂಲಕ ಪಿಎನ್‌ಆರ್ (ಪ್ಯಾಸೆಂಜರ್ ನೇಮ್ ರೆಕಾರ್ಡ್) ಮಾಹಿತಿ ಪ್ರಯಾಣಿಸುವ ಮುಂಚಿನ ಐದು ದಿನಗಳಿಂದ ನಿತ್ಯವೂ ಪ್ರಯಾಣಿಕರಿಗೆ ರವಾನಿಸಲಾಗುತ್ತದೆ. ಇದರಿಂದಾಗಿ ನಿತ್ಯವೂ ಕಾಲ್‌ಸೆಂಟರ್‌, ವೆಬ್ ಸೈಟ್‌ ಮೂಲಕ ಪಿಎನ್ಆರ್ ಮಾಹಿತಿ ಹುಡುಕುವುದು ತಪ್ಪಲಿದೆ. [ಭಾರತೀಯ ರೈಲು ಓಡಲು ವಿದೇಶಿ ದುಡ್ಡು]

ಒಮ್ಮೆ ಪ್ರಯಾಣಿಕರು ಸೀಟು ಕಾಯ್ದಿರಿಸಿದ ನಂತರ ಆಗುವ ಪ್ರತಿ ಬದಲಾವಣೆಯನ್ನು ಎಸ್‌ಎಂಎಸ್ ಮೂಲಕ ಪ್ರಯಾಣಿಕರಿಗೆ ತಲುಪಿಸಲಾಗುತ್ತದೆ. ಒಂದು ವೇಳೆ ಪ್ರಯಾಣಿಕರು ಹೆಸರು, ವೇಟಿಂಗ್ ಲಿಸ್ಟ್‌ನಲ್ಲಿದ್ದರೆ, ಅವರ ಟಿಕೆಟ್ ಖಾತ್ರಿಯಾದ ಮಾಹಿತಿ ಸಹ ಸಂದೇಶದ ಮೂಲಕ ಪ್ರಯಾಣಿಕರಿಗೆ ತಲುಪುತ್ತದೆ.[ಹರಿಹರ-ಕೊಟ್ಟೂರು ರೈಲು ಮಾರ್ಗಕ್ಕೆ ಚಾಲನೆ]

ಇಷ್ಟು ದಿನ ಪ್ರಯಾಣಿಕರು ಪಿಎನ್ಆರ್ ಮಾಹಿತಿ ತಿಳಿಯಲು ಕಾಲ್‌ಸೆಂಟರ್‌ ಗೆ ಕರೆ ಮಾಡಬೇಕಿತ್ತು ಅಥವ ಎಸ್‌ಎಂಎಸ್‌ ಮಾಡಿ ಮಾಹಿತಿ ಪಡೆಯಬೇಕಿತ್ತು. ಸದ್ಯ ರೈಲ್ವೆ ಇಲಾಖೆಯೇ ಪ್ರಯಾಣಿಕರಿಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡುತ್ತದೆ. ನೂತನ ವ್ಯವಸ್ಥೆಯ ಮುಖಾಂತರ ಕಾಲ್ ಸೆಂಟರ್ ಮತ್ತು ವೆಬ್ ಸೈಟ್‌ಗಳಿಗೆ ಭೇಟಿ ನೀಡುವ ಜನರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ.

English summary
Indian Railways has announced launch of newly developed “SMS Gateway” that will enable passengers to get free SMS alerts on the status of reserved tickets. Previously, the SMS alerts were sent only when the booking was made. Any update on wait list position or berth confirmation were not sent via SMS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X