ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗಳಿರಬೇಕು ಮನೆಗೆ, ಹೆಣ್ಣುಮಗುವಿಗೀಗ ಡಿಮ್ಯಾಂಡೋ, ಡಿಮ್ಯಾಂಡು!

|
Google Oneindia Kannada News

ನವದೆಹಲಿ, ಜನವರಿ 23: ಮಗಳು ಅಂದ್ರೆ ಮನೆಗೆ ಬೆಳಕು. ಅವಳ ಪ್ರತಿ ಹೆಜ್ಜೆಯಲ್ಲೂ ಪುಟಿಯುವ ಉತ್ಸಾಹ, ಪುಟ್ಟ ವಯಸ್ಸಿನಿಂದಲೂ ಮನೆಜನರ ಮೇಲೆ ಆಕೆ ತೋರುವ ಅವ್ಯಕ್ತ ಪ್ರೀತಿ, ಕಾಳಜಿ, ಆಕೆಯ ಅಪರಿಮಿತ ಜೀವನ ಪ್ರೀತಿ... ಹೀಗೇ ಮಗಳಿರಬೇಕು ಮನೆಗೆ ಎಂದೆನ್ನಿಸುವ ಮಟ್ಟಿಗೆ ಆಕೆ ಅಕ್ಕರೆಯ ಸೆಲೆಯಾಗಿ ಉಳಿಯುತ್ತಾಳೆ.

ಕೇವಲ ಆರ್ಥಿಕ ಹೊರೆಯ ನೆಪವನ್ನಿಟ್ಟುಕೊಂಡು ನಡೆವ ಹೆಣ್ಣು ಭ್ರೂಣ ಹತ್ಯೆ, ಬಾಲ್ಯವಿವಾಹದಂಥ ಸಮಸ್ಯೆಗಳ ನಡುವಲ್ಲೂ ನಮಗೆ ಹೆಣ್ಣು ಮಗುವೇ ಬೇಕು ಎನ್ನುವ ಕೋಟ್ಯಂತರ ಕುಟುಂಬಗಳು ಭಾರತದಲ್ಲಿವೆ ಎಂದರೆ ಸಂತೋಷವಾಗದಿರದು.

ಮಗಳು ಬರೆದ ಲೇಖನ ಓದಿ ಅಪ್ಪನ ಕಣ್ಣಲ್ಲಿ ಅಶ್ರುಧಾರೆ!ಮಗಳು ಬರೆದ ಲೇಖನ ಓದಿ ಅಪ್ಪನ ಕಣ್ಣಲ್ಲಿ ಅಶ್ರುಧಾರೆ!

ಇತ್ತೀಚೆಗೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿರುವ 5 ರಿಂದ 49 ವರ್ಷ ವಯೋಮಾನದ ಮಹಿಳೆಯರಲ್ಲಿ ಶೇ. 79 ಜನ ಮತ್ತು 15 ರಿಂದ 54 ವರ್ಷ ವಯೋಮಾನದ ಪುರುಷರಲ್ಲಿ ಶೇ. 78 ಜನ ತಮಗೆ ಒಬ್ಬಳಾದರೂ ಹೆಣ್ಣು ಮಗು ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ!

It's daughters' time! maximum people in India want a daughter

ಅದರಲ್ಲೂ ಹೆಚ್ಚಾಗಿ ನಗರ ಭಾಗಕ್ಕಿಂತ ಗ್ರಾಮೀಣ ಭಾಗದ ಮಹಿಳೆಯರೇ ತಮಗೆ ಹೆಣ್ಣು ಮಗು ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆರ್ಥಿಕವಾಗಿ ಸಂಕಷ್ಟದಲ್ಲಿರುವವರು, ಮುಸ್ಲಿಂ ಸಮುದಾಯದವರು, ತಮಗೆ ಹೆಣ್ಣು ಮಗು ಬೇಕು ಎಂದಿದ್ದಾರೆ.

ಅಪ್ಪಾ... ಐ ಲವ್ ಯೂ ಪಾ.. ಅಪ್ಪನೇ ಆಕಾಶದ ಪ್ರತಿರೂಪಅಪ್ಪಾ... ಐ ಲವ್ ಯೂ ಪಾ.. ಅಪ್ಪನೇ ಆಕಾಶದ ಪ್ರತಿರೂಪ

ಗಂಡು ಮಗು ಹುಟ್ಟಿದರೆ ಮಾತ್ರವೇ ತಂದೆ-ತಾಯಿಗೆ ಮೋಕ್ಷಪ್ರಾಪ್ತಿ ಎಂಬಿತ್ಯಾದಿ ನಂಬಿಕೆಗಳು ಇತ್ತೀಚೆಗೆ ಕಡಿಮೆಯಾಗಿವೆ. ಎಲ್ಲ ಕ್ಷೇತ್ರಗಳಲ್ಲೂ ಗಂಡಿಗೆ ಸಮನಾಗಿ ಹೆಣ್ಣೂ ನಿಂತಿದ್ದಾಳೆ. ಕುಟುಂಬಕ್ಕೆ ಒಂದು ಭದ್ರತೆಯ ಭಾವನೆ ನೀಡುವ ವಿಷಯಕ್ಕೆ ಬಂದಾಗ ಮಗನಿಗಿಂತ ಹೆಚ್ಚಾಗಿ ಮಗಳೇ ಕಾಳಜಿ ತೋರಿದ ಹಲವು ಉದಾಹರಣೆಗಳನ್ನೂ ನೋಡಿದ್ದೇವೆ. ಹೆಣ್ಣು ಹುಟ್ಟಿದೊಡನೆ ಆರ್ಥಿಕ ಹೊರೆ ಎಂದು ನೋಡುವ ಸನ್ನಿವೇಶ ಕೊಂಚ ಕಡಿಮೆಯಾಗಿರುವುದು ದೇಶದ ಪ್ರಗತಿಯತ್ತ ಒಂದು ಮಹತ್ವದ ಹೆಜ್ಜೆ ಎನ್ನಲೇಬೇಕು.

English summary
According to National Family Health Survey(NFHS) data, about 79 % of women aged 15 to 49 and 78% men in age 15-54 in India want at least one daughter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X