Get Updates
Get notified of breaking news, exclusive insights, and must-see stories!

‘WWE-Style Fight’: ಬಳೆ ಅಂಗಡಿಯ ಹೊರಗೆ ವ್ಯಕ್ತಿಯನ್ನ ಎಗರಿ ಎಗರಿ ಥಳಿಸಿದ ಮಹಿಳೆ

ಜೋಡಿ ಜಗಳ ಅಥವಾ ಹೊಡೆದಾಟದ ವೀಡಿಯೊಗಳು ತಕ್ಷಣವೇ ಅಂತರ್ಜಾಲದಲ್ಲಿ ವೈರಲ್ ಆಗುತ್ತವೆ. ಇದು ಸಾಮಾಜಿಕ ಜಾಲತಾಣದಲ್ಲಿ ಪ್ರತಿ ಬಾರಿಯೂ ಚರ್ಚೆಯ ವಿಷಯ. ಇತ್ತೀಚೆಗೆ ಬಳೆ ಅಂಗಡಿಯಲ್ಲಿ ಮಹಿಳೆಯೊಬ್ಬರು ಪುರುಷನನ್ನು ಥಳಿಸುವ ವಿಡಿಯೋ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗಿದೆ. ನೆಟ್ಟಿಗರು ಇದನ್ನು WWE ಕುಸ್ತಿ ಪಂದ್ಯಕ್ಕೆ ಹೋಲಿಸಿದ್ದಾರೆ.

ವಿಡಿಯೋದಲ್ಲಿ ಮಹಿಳೆಯೊಬ್ಬರು ಪುರುಷನೊಂದಿಗೆ WWE ಶೈಲಿಯಲ್ಲಿ ಹೊಡೆದಾಡುವುದನ್ನು ಕಾಣಬಹುದು. ಅಜ್ಞಾತ ಸ್ಥಳವಾದ ಬಳೆ ಅಂಗಡಿಯ ಹೊರಗೆ ಈ ಹೊಡೆದಾಟ ನಡೆದಿದೆ. ವಿಡಿಯೋ ಹಂಚಿಕೊಳ್ಳುವಾಗ ಹಿನ್ನೆಲೆಯಲ್ಲಿ ಹಾಡು ಕೂಡ ಎಡಿಟ್ ಮಾಡಲಾಗಿದೆ.

‘WWE-Style Fight’: A woman beat up a man outside a bangle shop: video viral

ಮಹಿಳೆ ಪುರುಷನನ್ನು ಅಂಗಡಿಯ ಹೊರಗೆ ರಸ್ತೆಯಲ್ಲಿ ಕೆಡವಿ ಅವನ ಮೇಲೆ ಹತ್ತಿ ಬಳಿಗಳಿಂದ ಹಾಗೂ ಕೈಯಿಂದ ಮನಬಂದಂತೆ ಥಳಿಸುತ್ತಾರೆ. ಆದರೆ ಇದಕ್ಕೆ ಕಾರಣವೇನು ಎನ್ನುವುದು ತಿಳಿದು ಬಂದಿಲ್ಲ. ಜೊತೆಗೆ ಇದು ಯಾವ ಸ್ಥಳದಲ್ಲಿ ನಡೆದಿದೆ ಎನ್ನುವುದು ಕೂಡ ತಿಳಿದು ಬಂದಿಲ್ಲ.

ಆದರೆ ಇಲ್ಲಿ ಮತ್ತೊಂದು ಶಾಕಿಂಗ್ ವಿಚಾರ ಏನು ಅಂದರೆ, ಹೊಡೆದಾಟವನ್ನು ಇಬ್ಬರು ತಾವಾಗೇ ನಿಲ್ಲಿಸುತ್ತಾರೆ. ಅವರು ಹೊಟೆದಾಡ ನಿಲ್ಲಿಸಿದ ಬಳಿಕ ಇತ್ತ ವಿಡಿಯೋ ಮಾಡಲು ನಿಂತಿರುವ ಹುಡುಗರು ಖುಷಿಯಿಂದ ಕೂಗಾಡುತ್ತಾರೆ. ಆರಂಭದಲ್ಲಿ ಇದೊಂದು ನಿಜವಾದ ಹೊಡೆದಾಟ ಅನಿಸಿದರೂ ಕೊನೆಯಲ್ಲಿ ಇದೊಂದು ನಾಟಕೀಯ ವಿಡಿಯೋ ಎಂದೆನಿಸುತ್ತದೆ. ವಿಡಿಯೋ ಮಾಡಲು ನಿಂತಿರುವ ಹುಡುಗರನ್ನು ನೋಡಿದರೆ ಅವರ ಖುಷಿ ನೋಡಿದರೆ ಇಲ್ಲಿ ಡ್ರಾಮಾ ನಡೆದಂತೆ ಕಾಣಿಸುತ್ತದೆ.

ಈ ಕ್ಲಿಪ್ ಅನ್ನು X (ಹಿಂದೆ ಟ್ವಿಟರ್) ನಲ್ಲಿ @GharKeKalesh ಹೆಸರಿನ ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ. ಈ ಕ್ಲಿಪ್ 858.7K ವೀಕ್ಷಣೆಗಳನ್ನು ಸಂಗ್ರಹಿಸಿದ್ದು. 5,300 ಕ್ಕೂ ಹೆಚ್ಚು ಇಷ್ಟಗಳನ್ನು ಸ್ವೀಕರಿಸಿದೆ. ಈ ವಿಡಿಯೋಕ್ಕೆ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. ಇತರರು ಇದು ನಕಲಿ ಮತ್ತು ವೀಕ್ಷಣೆಗಳನ್ನು ಸಂಗ್ರಹಿಸಲು ಮಾಡಲಾಗಿದೆ ಎಂದು ಹೇಳಿದ್ದಾರೆ.

‘WWE-Style Fight’: A woman beat up a man outside a bangle shop: video viral

ಕೆಲವು ಆಸಕ್ತಿಕರ ಕಾಮೆಂಟ್‌ಗಳು ಇಲ್ಲಿವೆ:-

'ಜನರು ಗಮನವನ್ನು ಸೆಳೆಯಲು ಇದನ್ನು ಮಾಡಿದ್ದಾರಾ,' ಎಂದು ಎಕ್ಸ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

'ವಾಸ್ತವವಾಗಿ ಇವರು ಕಲೇಶ್ ಹ್ಯಾಂಡಲ್‌ನ ತಂಡದ ಸದಸ್ಯರು' ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು.

'WWE ಇಂಡಿಯಾ,' ಎಂದು ಮತ್ತೊಬ್ಬರು ಬರೆದಿದ್ದಾರೆ.

'ಇದು ಕೇವಲ ಪ್ರಚಾರಕ್ಕಾಗಿ' ಎಂದು ಎಕ್ಸ್ ಬಳಕೆದಾರರು ಹೇಳಿದ್ದಾರೆ.

'ಇದು ನಕಲಿ ಹೊಡೆದಾಟ, ಇವರು ನಕಲಿ ಗ್ಯಾಂಗ್ ಸದಸ್ಯರು ಮತ್ತು ಯೂಟ್ಯೂಬ್ ಗಮನ ಸೆಳೆಯಲು ವೀಡಿಯೊ ಮಾಡಿದ್ದಾರೆ" ಎಂದು ಬರೆದಿದ್ದಾರೆ.

ಬಸ್‌ ಸೀಟಿಗಾಗಿ ಮಾರಾಮಾರಿ:-

ಕಳೆದ ವರ್ಷ ಕರ್ನಾಟಕ ಸಾಂಸ್ಕೃತಿಕ ರಾಜಧಾನಿ ಎಂದು ಪ್ರಸಿದ್ಧವಾದ ಮೈಸೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣದ ವೇಳೆ ಸೀಟಿಗಾಗಿ ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿತ್ತು.

ಮೈಸೂರು‌ ಸಿಟಿ ಬಸ್ ನಲ್ಲಿ ಸೀಟ್ ಗಾಗಿ ಮಹಿಳೆಯರು ಕೈ ಕೈ ಮಿಲಾಯಿಸಿಕೊಂಡಿದ್ದರು. ಮಹಿಳೆಯರ ಬಡಿದಾಟದ ವಿಡಿಯೋ ಸೋಷಿಯಲ್ ಮೀಡಿಯಲ್ಲಿ ವೈರಲ್ ಆಗಿತ್ತು. ಮೈಸೂರು ಸಿಟಿ ಬಸ್ ಸ್ಟ್ಯಾಂಡ್ ನಿಂದ ಚಾಮುಂಡಿ ಬೆಟ್ಟಕ್ಕೆ ಹೊರಟಿದ್ದ ಬಸ್ ನಲ್ಲಿ ಘಟನೆ ನಡೆದಿದೆ.

ಮಹೊಳೆಯೊಬ್ಬಳು ಬಸ್ ಹೊರಗಿನಿಂದ ತನ್ನ ದುಪ್ಪಟ ಹಾಕಿ ಸೀಟ್ ರಿಸರ್ವ್ ಮಾಡಿದ್ದಳು. ಆದರೆ, ಮಹಿಳೆ ಪ್ರಯಾಸಪಟ್ಟು ಬಸ್‌ ಹತ್ತಿ ಬಂದಾಗ ಸೀಟಿನಲ್ಲಿ ಬೇರೆ ಮಹಿಳೆ ಕುಳಿತಿದ್ದಳು. ಈ ವಿಚಾರವಾಗಿ ಶುರುವಾದ ಮಾತಿನ ಚಟಾಪಟಿ, ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ. ಜೊತೆಗೆ, ಇವರೊಂದಿಗೆ ಬಂದಿದ್ದ ಮಹಿಳೆಯರು ಕೂಡ ತಮ್ಮ ಸಹಚರರಿಗೆ ಬೆಂಬಲ ನೀಡಲು ಕೈ-ಕೈ ಮಿಲಾಯಿಸಿದ್ದಾರೆ. ಇಂಥಹ ಘಟನೆಗಳು ಬಸ್‌ನಲ್ಲಿ ಕಂಡು ಬರುತ್ತಲೇ ಇವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+