ಆರ್‌ಸಿಬಿ ಪಂದ್ಯ ನೋಡಲು ಬಾಸ್ ಬಳಿ ಸುಳ್ಳು ಹೇಳಿದ ಬೆಂಗಳೂರು ಮಹಿಳೆ..! ಬಳಿಕ ಆಗಿದ್ದೇನು?

ದೇಶಾದ್ಯಂತ ಐಪಿಎಲ್ ಪಂದ್ಯಾವಳಿಯ ಜ್ವರ ಹೆಚ್ಚಾಗಿದೆ. 10 ತಂಡಗಳು ಒಂದು ಪ್ರಶಸ್ತಿಗಾಗಿ ಸೆಣೆಸಾಟ ನಡೆಸುತ್ತವೆ. ಎಲ್ಲಾ ತಂಡಗಳು ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿವೆ. ತನ್ನ ಅಭಿಮಾನಿಗಳ ವಿಚಾರಕ್ಕೆ ಆರ್‌ಸಿಬಿ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಆರ್‌ಸಿಬಿ ಪಂದ್ಯ ನೋಡಲು ಬಾಸ್ ಬಳಿ ಸುಳ್ಳು ಹೇಳಿದ ಮಹಿಳಾ ಅಭಿಮಾನಿಯೊಬ್ಬರು, ಬಾಸ್‌ ಬಳಿ ಸಿಕ್ಕಿಬಿದ್ದಿದ್ದಾರೆ.

ಏಪ್ರಿಲ್ 2ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ನಡುವಿನ ಪಂದ್ಯವನ್ನು ಮೈದಾನದಲ್ಲಿ ವೀಕ್ಷಿಸಲು ಆರ್‌ಸಿಬಿ ಅಭಿಮಾನಿಯೊಬ್ಬರು ಬಾಸ್ ಬಳಿ ಸುಳ್ಳು ಹೇಳಿದ್ದಾರೆ.

Bengaluru Woman s RCB IPL Excuse Exposed as Boss Spots Her at Stadium on Live TV

ಕಚೇರಿಯಿಂದ ಬೇಗ ಹೊರಡಲು ಬಾಸ್ ಬಳಿ ಫ್ಯಾಮಿಲಿ ಎಮರ್ಜೆನ್ಸಿ ಎಂದು ಕಾರಣ ನೀಡಿದ್ದ ಮಹಿಳೆ, ಅಲ್ಲಿಂದ ಸೀದಾ ಸ್ಟೇಡಿಯಂಗೆ ಪಂದ್ಯವನ್ನು ವೀಕ್ಷಿಸಲು ಹೋಗಿದ್ದಾರೆ. ಆದರೆ, ಪಂದ್ಯದ ನೇರಪ್ರಸಾರದ ಸಮಯದಲ್ಲಿ ಆಕೆಯನ್ನು ಟಿವಿಯಲ್ಲಿ ಬಾಸ್ ನೋಡಿದ್ದು, ಆಕೆ ಸುಳ್ಳು ಹೇಳಿರುವುದು ಬಾಸ್‌ಗೆ ಗೊತ್ತಾಗಿದೆ.

ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡ ಮಹಿಳೆ

ನೇಹಾ ದ್ವಿವೇದಿ ಆರ್‌ಸಿಬಿ ಅಭಿಮಾನಿಯಾಗಿದ್ದು, ತಾವು ಬಾಸ್‌ಗೆ ಸಿಕ್ಕಿಬಿದ್ದಿರುವ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ತಾವು ಸ್ಟೇಡಿಯಂನಲ್ಲಿ ಸಂಭ್ರಮಿಸುತ್ತಿರುವಾಗ ಅದನ್ನು ಬಾಸ್ ಟಿವಿಯಲ್ಲಿ ನೋಡಿದರು, ಮರುದಿನ ಸಂದೇಶ ಕಳುಹಿಸಿದರು. ಪಂದ್ಯದ ಬಗ್ಗೆ ಪರಿಶೀಲನೆ ಮಾಡಿದ್ದು, ಟಿವಿಯಲ್ಲಿ ನೋಡಿದ್ದರು ಎಂದು ಹೇಳಿದ್ದಾರೆ.

ಬಾಸ್ ಕೇಳಿದ್ದೇನು?

ಮ್ಯಾನೇಜರ್ ದ್ವಿವೇದಿಯನ್ನು ಆರ್‌ಸಿಬಿ ಅಭಿಮಾನಿಯೇ ಎಂದು ಕೇಳಿದರು, ಅದಕ್ಕೆ ಆಕೆ ಹೌದು ಎಂದು ಹೇಳಿದರು. ನೀವು ಪಂದ್ಯವನ್ನು ನೋಡಿ ನಿರಾಶರಾಗಿರಬೇಕು, ಫೀಲ್ಡಿಂಗ್ ಮಾಡುವಾಗ ಆರ್‌ಸಿಬಿ ಆಟಗಾರ ಕ್ಯಾಚ್ ಬಿಟ್ಟಾಗ ನೀವು ನಿರಾಶೆಗೊಂಡಿದ್ದನ್ನು ಟಿವಿಯಲ್ಲಿ ನೋಡಿದೆ ಎಂದು ಚಾಟ್‌ನಲ್ಲಿ ಹೇಳಿದ್ದಾರೆ.

ಅದಕ್ಕೆ ದ್ವಿವೇದಿ ಹೌದು, ಅನುಜ್ ರಾವತ್ ಕ್ಯಾಚ್ ಬಿಟ್ಟರು ಎಂದು ಬೇಸರದಿಂದ ಪ್ರತಿಕ್ರಿಯೆ ನೀಡಿದ್ದಾರೆ. ನಾನು ನಿಮ್ಮನ್ನು ಒಂದು ಸೆಕೆಂಡ್ ಟಿವಿ ಯಲ್ಲಿ ನೋಡಿ ಗುರುತು ಹಿಡಿದೆ, ಅಂದರೆ ಪಂದ್ಯವನ್ನು ನೋಡಲು ನೀವು ಫ್ಯಾಮಿಲಿ ಎಮರ್ಜೆನ್ಸಿ ಕಾರಣ ಕೊಟ್ಟು ಆಫೀಸಿನಿಂದ ಬೇಗ ಹೊಗಿದ್ದು ಎಂದು ನಗುವ ಇಮೋಜಿ ಜೊತೆ ಸಂದೇಶ ಕಳುಹಿಸಿದ್ದಾರೆ.

ನೇಹಾ ದ್ವಿವೇದಿ ಈ ಪ್ರಸಂಗವನ್ನು ತಮ್ಮ ಇನ್‌ಸ್ಟ್ರಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ವೈರಲ್ ಆಗಿದ್ದು, ತಮ್ಮ ನೆಚ್ಚಿನ ತಂಡದ ಪಂದ್ಯವನ್ನು ನೋಡಲು ಉದ್ಯೋಗಿಗಳು ಮ್ಯಾನೇಜರ್ ಬಳಿ ಏನೆಲ್ಲಾ ಕಾರಣ ನೀಡುತ್ತಾರೆ ಎಂದು ತಮಾಷೆಯಾಗಿ ಬಳಕೆದಾರರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+