Mangaluru: ಹಿರಿಯ ಜೀವಕ್ಕೆ ಬರ್ಬರವಾಗಿ ಥಳಿಸಿದ ಸೊಸೆ ಬಂಧನ, ವಿಡಿಯೋ ವೈರಲ್
ಮಂಗಳೂರು, ಮಾರ್ಚ್ 12: ಮಂಗಳೂರಿನ ಕುಲಶೇಖರದ ನಂದಿನಿ ಹಾಲಿನ ಡೈರಿ ಬಳಿಯ ತಮ್ಮ ಮನೆಯಲ್ಲಿ 87 ವರ್ಷದ ಮಾವನಿಗೆ ಥಳಿಸಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮ್ಮ ಮಾವನಿಗೆ ಅಮಾನುಷವಾಗಿ ಥಳಿಸಿದ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ದೃಶ್ಯಾವಳಿಗಳು ವೈರಲ್ ಆಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆಯಲ್ಲಿ ಮಂಗಳೂರಿನ ಕುಲಶೇಖರದಲ್ಲಿ ಪದ್ಮನಾಭ ಸುವರ್ಣ ಎಂಬ 87 ವರ್ಷದ ವ್ಯಕ್ತಿಗೆ ಸೊಸೆ ಉಮಾ ಶಂಕರಿ ಎಂಬುವರು ಥಳಿಸಿದ್ದಾರೆ. ಮಾರ್ಚ್ 9 ರಂದು ಈ ಘಟನೆ ನಡೆದಿದೆ.

ಶನಿವಾರ ಮಧ್ಯಾಹ್ನ, ಉಮಾ ಶಂಕರ್ ಅವರು ತಮ್ಮ ಮಾವ ಪದ್ಮನಾಭ ಸುವರ್ಣ (87) ಅವರೊಂದಿಗೆ ದೊಡ್ಡ ಜಗಳ ಆಡಿದ್ದಾರೆ. ಅವರು ತಮ್ಮ ಅಂಗಿಯನ್ನು ಸೋಫಾದ ಮೇಲೆ ಇಟ್ಟಿದ್ದಾರೆ ಎಂಬ ಕಾರಣಕ್ಕೆ ತೀವ್ರ ಮಾತಿನ ಚಕಮಕಿ ನಡೆಸಿದರು. ಬಳಿಕ ಅವರದ್ದೇ ವಾಕಿಂಕ್ ಸ್ಟಿಕ್ ಹಿಡಿದು ಥಳಿಸಿದ್ದಾರೆ. ಪದ್ಮನಾಭ ಸುವರ್ಣ ಅವರ ಕಾಲುಗಳಿಗೆ, ಅವರ ಎದೆ ಮತ್ತು ಸೊಂಟದ ಮೇಲೆ ಉಮಾ ಶಂಕರ್ ವಾಕಿಂಗ್ ಸ್ಟಿಕ್ ಅನ್ನು ತೆಗೆದುಕೊಂಡು ಹೊಡೆದಿದ್ದಾರೆ.
ತೀವ್ರವಾಗಿ ಗಾಯಗೊಂಡ ಪದ್ಮನಾಭ ಸುವರ್ಣ ಅವರು ನೋವಿನಲ್ಲೇ ಎದ್ದು ಮನೆಯಿಂದ ಹೊರಗೆ ಹೋಗಿದ್ದಾರೆ. ಮಾರ್ನಮಿಕಟ್ಟೆಯಲ್ಲಿರುವ ತನ್ನ ಸಹೋದರನ ಮನೆಗೆ ತೆರಳಿದ ಅವರು, ಮೂಡುಬಿದಿರೆಯಲ್ಲಿರುವ ಮಗಳು ಪ್ರಿಯಾಳನ್ನು ಕರೆಸಿ ಘಟನೆಯ ಬಗ್ಗೆ ತಿಳಿಸಿದ್ದಾರೆ. ಸದ್ಯ ಪದ್ಮನಾಭ ಸುವರ್ಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
⚠️Disturbing Visuals
— Ghar Ke Kalesh (@gharkekalesh) March 11, 2024
Heartwrenching assault of elderly father-in-law by daughter in law in Mangalore's Kulasekhara. The culprit here is Umashankari, an officer in KEB in Attawara
pic.twitter.com/spfot36b8I
ಪದ್ಮನಾಭ ಸುವರ್ಣ ಮಗಳು ನೀಡಿದ ದೂರಿನ ಮೇರೆಗೆ ಅತ್ತಾವರದ ವಿದ್ಯುತ್ ಪೂರೈಕೆದಾರ ಕಂಪನಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಆರೋಪಿ ಉಮಾ ಶಂಕರಿ ಅವರನ್ನು ಬಂಧಿಸಲಾಗಿದೆ.
ಪದ್ಮನಾಭ ಸುವರ್ಣ ಪುತ್ರ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯು ಸ್ಥಳೀಯರಲ್ಲಿ ಆತಂಕ ಹುಟ್ಟುಹಾಕಿದೆ. ವಯಸ್ಸಾದವರ ಯೋಗಕ್ಷೇಮದ ಬಗ್ಗೆ ಮತ್ತು ಕೌಟುಂಬಿಕ ಹಿಂಸಾಚಾರದ ವಿರುದ್ಧ ಕಠಿಣ ಕ್ರಮಗಳ ಅಗತ್ಯತೆ ಇದೆ ಎಂದು ಹಲವರು ಆಗ್ರಹಿಸಿದ್ದಾರೆ.












Click it and Unblock the Notifications