ಬೆಂಗಳೂರು: ಹಾಳಾದ ಹಾಲು ಹಿಂತಿರುಗಿಸಲು ಹೋಗಿ ₹77,000 ಕಳೆದುಕೊಂಡ ಮಹಿಳೆ.!, ಹೇಗೆ ಸಾಧ್ಯ?-ಇಲ್ಲಿದೆ ಮಾಹಿತಿ
ಬೆಂಗಳೂರು, ಮಾರ್ಚ್, 26: ಆನ್‌ಲೈನ್ ಪೇಮೆಂಟ್ ವಿಚಾರದಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹಾಗೆಯೇ ಇಂಥಹದ್ದೇ ಘಟನೆಯೊಂದು ಇದೀಗ ಬೆಂಗಳೂರಿನಲ್ಲಿ ನಡೆದಿದೆ. ಅಷ್ಟಕ್ಕೂ ಈ ವಂಚನೆ ನಡೆದಿದ್ದಾರೂ ಹೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರಿನ ಮಹಿಳೆಯೊಬ್ಬರು ಇತ್ತೀಚೆಗೆ ಆನ್‌ಲೈನ್‌ನಲ್ಲಿ ತಂದಿದ್ದ ಹಾಳಾದ ಹಾಲನ್ನು ಹಿಂದಿರುಗಿಸಲು ಪ್ರಯತ್ನಿಸುವಾಗ 77,000 ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ ಅಂತಾ ಮನಿ ಕಂಟ್ರೋಲ್ ವರದಿ ಮಾಡಿದೆ. ನಿವೃತ್ತ ಸೇನಾಧಿಕಾರಿಯೊಬ್ಬರ ಪತ್ನಿ ಹಾಗೂ ನಗರದ ಕಸ್ತೂರಬಾ ನಗರದ ನಿವಾಸಿ ಆಗಿರುವ ಮಹಿಳೆ ಆನ್‌ಲೈನ್ ಕಿರಾಣಿ ಅಂಗಡಿಯಿಂದ ನಿತ್ಯ ಹಾಲು ಖರೀದಿಸುತ್ತಿದ್ದರು. ಆದರೆ, ಮಾರ್ಚ್ 18ರಂದು ಹಾಲು ಹಾಳಾಗಿರುವುದನ್ನು ಗಮನಿಸಿ ವಾಪಸ್ ಕೊಡಲು ನಿರ್ಧರಿಸಿದ್ದಾಳೆ.

ಆನ್‌ಲೈನ್‌ನಲ್ಲಿ ಪ್ಲಾಟ್‌ಫಾರ್ಮ್‌ನ ಕಸ್ಟಮರ್ ಕೇರ್ ಸಂಖ್ಯೆಯನ್ನು ಹುಡುಕಿ ನಂತರ, ಮಹಿಳೆ ಆ ಸಂಖ್ಯೆಯನ್ನು ಡಯಲ್ ಮಾಡಿದ್ದಾರೆ. ಬಳಿಕ ಆ ವ್ಯಕ್ತಿಯು ತನ್ನನ್ನು ಕಿರಾಣಿ ಪ್ಲಾಟ್‌ಫಾರ್ಮ್‌ನ ಕಾರ್ಯನಿರ್ವಾಹಕ ಎಂದು ಪರಿಚಯಿಸಿಕೊಂಡಿದ್ದಾನೆ. ಹಾಳಾದ ಹಾಲನ್ನು ಹಿಂತಿರುಗಿಸಬೇಕಾಗಿಲ್ಲ. ಈ ಕಾರ್ಯವಿಧಾನವನ್ನು ಅನುಸರಿಸಿದರೆ ಹಣವನ್ನು ಹಿಂತಿರುಗಿಸಲಾಗುವುದು ಎಂದು ಆ ವ್ಯಕ್ತಿ ಮಹಿಳೆಗೆ ತಿಳಿಸಿದ್ದಾನೆ.
ಬಳಿಕ ಮಹಿಳೆಯು ಅಪರಿಚಿತ ವ್ಯಕ್ತಿಯಿಂದ UPI ಐಡಿ ಸಂಖ್ಯೆ 081958ನೊಂದಿಗೆ WhatsApp ಸಂದೇಶವನ್ನು ಪಡೆದಿದ್ದಾಳೆ. ಬಳಿಕ ಆ ವಂಚಕನು PhonePeನಲ್ಲಿ "ಹಣವನ್ನು ವರ್ಗಾಯಿಸಿ" ಎಂಬ ಆಯ್ಕೆಯನ್ನು ಒತ್ತಿ, "To Bank/UPI ID" ಐಕಾನ್ ಅನ್ನು ಕ್ಲಿಕ್ ಮಾಡಲು ಹೇಳಿದ್ದಾನೆ.
ತಾನು ವಂಚನೆಗೆ ಒಳಗಾಗುತ್ತಿದ್ದೇನೆ ಎಂದು ತಿಳಿಯದ ಮಹಿಳೆ ಸೂಚನೆಗಳನ್ನು ಅನುಸರಿಸಿದಳು. ಬಳಿಕ ಸ್ಕ್ಯಾಮರ್ ಅವಳನ್ನು UPI ಐಡಿ ಆಯ್ಕೆಯನ್ನು ಆಯ್ಕೆ ಮಾಡಲು ಹೇಳಿದ್ದಾನೆ. ನಂತರ WhatsAppನಲ್ಲಿ ಅವಳು ಸಂದೇಶವನ್ನು ಸ್ವೀಕರಿಸಿದ ಸಂಖ್ಯೆಯನ್ನು ಸೇರಿಸಲು ಹೇಳಿದ್ದಾನೆ. ಆಕೆಯ ಮೊಬೈಲ್ ಸಂಖ್ಯೆಯ ಕೊನೆಯ 5 ಸಂಖ್ಯೆಗಳನ್ನು ನಮೂದಿಸಿದ ನಂತರ ಮಹಿಳೆಗೆ "ಪಾವತಿ" ಆಯ್ಕೆಯನ್ನು ಕ್ಲಿಕ್ ಮಾಡಲು ಹೇಳಿದ್ದು, ಆಕೆಯ ಹಣವನ್ನು ಮರಳಿ ಪಡೆಯಲು UPI ಐಡಿಯನ್ನು ನಮೂದಿಸಲು ಹೇಳಿದ್ದಾನೆ.
ಯುಪಿಐ ಸಂಖ್ಯೆಯನ್ನು ನಮೂದಿಸಿದ ನಂತರ, ಆಕೆಯ ಖಾತೆಯಿಂದ ಮೊತ್ತವನ್ನು ಎಗರಿಸಲಾಯಿತು. ಬಳಿಕ ವಂಚಕ ಕರೆಯನ್ನು ಕಟ್ ಮಾಡಿದ್ದಾರೆ. ಆಗ ಮಹಿಳೆ ತಾನು ವಂಚನೆಗೊಳಗಾಗಿರುವುದನ್ನು ಅರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇನ್ನು "ನಾವು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದೇವೆ. ವಂಚಕರ ಖಾತೆಯಿಂದ ಮೊತ್ತವನ್ನು ಸ್ಥಗಿತಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದಲ್ಲಿ ಹೀಗೆ ಮಹಿಳೆಯರು ಫೋನ್ ಮೂಲಕ ಕರೆ ಮಾಡುವವರಿಂದ ತಿಳಿಯದೆ ವಂಚನೆಗೊಳಗಾದ ಅನೇಕ ಘಟನೆಗಳಲ್ಲಿ ಇದು ಒಂದು ಮಾತ್ರ.
ಈ ವರ್ಷದ ಆರಂಭದಲ್ಲಿ ನಗರದಲ್ಲಿ ಮಹಿಳೆಯೊಬ್ಬರು ಫೆಡೆಕ್ಸ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಎಂದು ತೋರಿಸಿದ ಆನ್‌ಲೈನ್ ವಂಚಕರಿಂದ 48,00,000 ರೂಪಾಯಿ ವಂಚನೆಗೆ ಒಳಗಾಗಿದ್ದು, ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರೇರೇಪಿಸಿದ ಹಿನ್ನೆಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications