ಅಬ್ಬೋ ಬರೋಬ್ಬರಿ 270 ಬಾರಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ ಆಕ್ಟಿವಾ ಲೇಡಿ! ದಂಡವೆಷ್ಟು ಗೊತ್ತೆ?
ಬೆಂಗಳೂರು, ಏಪ್ರಿಲ್. 08: ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ಎಲ್ಲರಿಗೂ ಗೊತ್ತಿರುವ ವಿಚಾರ. ಇಂತಹದರ ಮಧ್ಯೆ ಟ್ರಾಫಿಕ್ ರೂಲ್ಸ್ ಕೂಡ ಪಾಲನೆ ಮಾಡದೇ ಇದ್ದರೇ ಇತರ ಸವಾರರಿಗೆ ಇನ್ನೂ ತೊಂದರೆಯಾಗುತ್ತದೆ. ಸಂಚಾರಿ ನಿಯಮಗಳ ಉಲ್ಲಂಘನೆ ಬಗ್ಗೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ರೂ ಕೆಲವರು ಮಾತ್ರ ಡೋಂಟ್ ಕೇರ್ ಎನ್ನುವಂತಿದ್ದಾರೆ.
ಬೆಂಗಳೂರಿನ ಮಹಿಳೆಯೊಬ್ಬರು ಇದಕ್ಕೆ ತಾಜಾ ಉದಾಹರಣೆಯಾಗಿದ್ದಾರೆ. ಬರೋಬ್ಬರಿ 270 ಬಾರಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿ ಪೊಲೀಸರ ಕಣ್ತಪ್ಪಿಸಿಕೊಂಡಿದ್ದಾರೆ. ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸದೆ ಇರುವುದು, ಹಿಂಬದಿ ಕುಳಿತಾಗಲು ಹೆಲ್ಮೆಟ್ ಧರಿಸದಿರುವುದು, ಮೊಬೈಲ್ ಫೋನ್‌ಗಳನ್ನು ಬಳಸುವುದು ಕಂಡು ಬಂದಿದೆ.

270 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ನಿರಂತರವಾಗಿ ನಿಯಮ ಉಲ್ಲಂಘನೆ ಮಾಡಿರುವ ಇವರಿಗೆ ಪೊಲೀಸರು ಬರೋಬ್ಬರಿ 1,36,000 ರೂಪಾಯಿ ದಂಡ ವಿಧಿಸಿದ್ದಾರೆ. ಪೊಲೀಸರ ವೆಬ್‌ಸೈಟಿನಲ್ಲಿ ಯಾವ ಯಾವ ವೇಳೆಯಲ್ಲಿ ಸಂಚಾಯಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಿದೆ.
KA03 JE5705 ನೋಂದಣಿಯ ಹೋಂಡಾ ಆ್ಯಕ್ಟೀವಾ ಬೈಕ್ ಮೇಲೆ ಸಂಚರಿಸುವ ಮಹಿಳೆ 270 ಬಾರಿ ಸಂಚಾರಿ ನಿಯಮ ಬ್ರೇಕ್ ಮಾಡಿದ್ದಾರೆ. ಇವರು ಟ್ರಾಫಿಕ್ ನಿಯಮ ಉಲ್ಲಂಘಿಸುತ್ತಿರುವುದನ್ನು ಪೊಲೀಸರು ಮತ್ತು ಸಾರ್ವಜನಿಕರು ಗಮನಿಸಿದ್ದಾರೆ. ಅವರ ಫೋಟೋಗಳನ್ನು ತೆಗೆದು ಪೊಲೀಸರಿಗೆ ಟ್ಯಾಗ್ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮಹಿಳೆ ಮತ್ತು ಅವರ ಕುಟುಂಬಸ್ಥರು ಬೆಂಗಳೂರಿನ ಸುಧಾಮನಗರ ಮತ್ತು ಸುತ್ತಮುತ್ತ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಸಿಗ್ನಲ್‌ಗಳಲ್ಲಿ ಸಿಗ್ನಲ್ ಜಂಪ್ ಮಾಡುವುದು, ಮುಂಬದಿ ಮತ್ತು ಹಿಂಬದಿ ಸವಾರರಿಬ್ಬರೂ ಹೆಲ್ಮಟ್ ಧರಿಸದೆ ಇರುವುದು, ಒನ್ ವೇನಲ್ಲಿ ಹೋಗುವುದು, ವಾಹನ ಓಡಿಸುವಾಗಲು ಮೊಬೈಲ್‌ನಲ್ಲಿ ಮಾತನಾಡುವುದು... ಈ ರೀತಿ 270 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾರೆ.












Click it and Unblock the Notifications