• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಲ್ಲಿ ಮರ್ಯಾದಾ ಹತ್ಯೆ; ತಂದೆಯಿಂದಲೇ ಮಗಳ ಕೊಲೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 18; ಮಗಳು ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ತಂದೆಯೇ ಮಗಳನ್ನು ಹತ್ಯೆಗೈದು ಪೊಲೀಸರಿಗೆ ಶರಣಾಗಿರುವ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಆಧುನಿಕ ಜಗತ್ತಿನಲ್ಲಿ ಮರ್ಯಾದಾ ಹತ್ಯೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆ ದುರಂತ ಸಾಕ್ಷಿಯಾಗಿದೆ.

ಪಿರಿಯಾಪಟ್ಟಣದ ಗೊಲ್ಲರ ಬೀದಿಯ ನಿವಾಸಿ ಜಯರಾಂ ಪುತ್ರಿ ಗಾಯಿತ್ರಿ (19) ಎಂಬಾಕೆಯನ್ನು ಹತ್ಯೆ ಮಾಡಿದ ಆರೋಪಿ. ಗಾಯತ್ರಿ ಅನ್ಯ ಕೋಮಿನ ಯುವಕನನ್ನು ಪ್ರೀತಿಸುತ್ತಿರುವ ವಿಚಾರ ಹೆತ್ತವರಿಗೆ ಗೊತ್ತಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಚಿಕನ್ ಅಂಗಡಿ ಹುಡುಗನ ಲವ್ ಕಹಾನಿ, ಮರ್ಯಾದಾ ಹತ್ಯೆ ಜಡ್ಜ್ ಮೆಂಟ್ಚಿಕನ್ ಅಂಗಡಿ ಹುಡುಗನ ಲವ್ ಕಹಾನಿ, ಮರ್ಯಾದಾ ಹತ್ಯೆ ಜಡ್ಜ್ ಮೆಂಟ್

ಆದರೆ ಗಾಯತ್ರಿ ಮಾತ್ರ ತಾನು ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಈ ವಿಷಯವಾಗಿ ಮನೆಯಲ್ಲಿ ಜಟಾಪಟಿ ನಡೆದಿತ್ತು. ಮಗಳ ಮನಸ್ಸನ್ನು ಬದಲಾಯಿಸಲು ತಂದೆ ಜಯರಾಂ ಸರ್ವ ರೀತಿಯಲ್ಲಿಯೂ ಪ್ರಯತ್ನ ಮಾಡಿದ್ದರು. ಆದರೆ ಆಕೆ ಯಾವುದೇ ಒತ್ತಡಕ್ಕೂ ಮಣಿದಿರಲಿಲ್ಲ.

 ಮರ್ಯಾದಾ ಹತ್ಯೆ: ರಾಮನಗರದಲ್ಲಿ ಮಗಳ ಪ್ರೇಮಿಯನ್ನು ಕೊಂದ ತಂದೆ ಮರ್ಯಾದಾ ಹತ್ಯೆ: ರಾಮನಗರದಲ್ಲಿ ಮಗಳ ಪ್ರೇಮಿಯನ್ನು ಕೊಂದ ತಂದೆ

ಶುಕ್ರವಾರ ಜಮೀನಿನಲ್ಲಿ ಜಯರಾಂ ಉಳುಮೆ ಮಾಡುತ್ತಿದ್ದ. ಮಧ್ಯಾಹ್ನ 12.30ಕ್ಕೆ ಮಗಳು ಗಾಯತ್ರಿ ಊಟ ತೆಗೆದುಕೊಂಡು ಹೋಗಿದ್ದಳು. ಊಟದ ಸಮಯದಲ್ಲಿ ಮತ್ತೆ ಮಗಳೊಂದಿಗೆ ಮಾತು ಶುರುಮಾಡಿದ ಜಯರಾಂ ನೀನು ಪ್ರೀತಿಸುತ್ತಿರುವ ಯುವಕ ನಮ್ಮ ಕೋಮಿನವನಲ್ಲ. ದಯವಿಟ್ಟು ಅವನನ್ನು ಬಿಟ್ಟು ಬಿಡು ಎಂದಿದ್ದಾನೆ.

 ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ; ಮೈಸೂರಿನಲ್ಲಿ ಮರ್ಯಾದಾ ಹತ್ಯೆ? ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ; ಮೈಸೂರಿನಲ್ಲಿ ಮರ್ಯಾದಾ ಹತ್ಯೆ?

ಆಗ ಗಾಯತ್ರಿ ನಾನು ಮದುವೆಯಾಗುವುದಾದರೆ ಅವನನ್ನೇ. ಈ ವಿಚಾರದಲ್ಲಿ ನಾನು ಯಾರ ಮಾತನ್ನೂ ಕೇಳುವುದಿಲ್ಲ ಎಂದಿದ್ದಾಳೆ. ಇದರಿಂದ ಕೋಪಗೊಂಡ ಜಯರಾಂ ತನ್ನ ಬಳಿಯಿದ್ದ ಮಚ್ಚನ್ನು ಆಕೆಯತ್ತ ಬೀಸಿದ್ದಾನೆ. ಈ ವೇಳೆ ಆಕೆ ಕೈಯನ್ನು ಅಡ್ಡ ಮಾಡಿದ್ದು ಮೊದಲ ಏಟು ಕೈಗೆ ಬಿದ್ದಿದೆ.

ಪುನಃ ಮತ್ತೆ ಮಚ್ಚಿನಿಂದ ಮಗಳ ಕುತ್ತಿಗೆ ಭಾಗಕ್ಕೆ ಬೀಸಿದ್ದಾನೆ. ಪರಿಣಾಮ ಗಾಯತ್ರಿ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟಿದ್ದಾಳೆ. ಮಗಳನ್ನು ಕೊಂದ ಬಳಿಕ ಜಯರಾಂ ನೇರವಾಗಿ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆಯೇ ಕೃತ್ಯ ನಡೆದ ಸ್ಥಳಕ್ಕೆ ಎಸ್ಪಿ ಚೇತನ್, ಡಿವೈಎಸ್ಪಿ ರವಿಪ್ರಸಾದ್, ಇನ್ಸ್ ಪೆಕ್ಟರ್ ಜಗದೀಶ್, ಬಿ. ಆರ್. ಪ್ರದೀಪ್, ಪಿಎಸ್ಐ ಸದಾಶಿವತಿಪರೆಡ್ಡಿ, ಪುಟ್ಟರಾಜು ಭೇಟಿ ನೀಡಿ ಸ್ಥಳ ಮಹಜರು ನಡೆಸಿದರು.

English summary
Gayathri 19 year old killed in honour killing at Mysuru district Piriyapatna. Girl killed by father later he surrender to police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X