ಮೈಸೂರಿನಲ್ಲಿ ಕೈಕೊಟ್ಟ ವೆಂಟಿಲೇಟರ್, ರೋಗಿ ನಿಧನ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಫೆಬ್ರವರಿ 8: ವೆಂಟಿಲೇಟರ್ ನ್ನು ಸರಿಯಾಗಿ ನಿರ್ವಹಿಸದೇ ರೋಗಿಯೊಬ್ಬರು ಮೃತಪಟ್ಟ ಘಟನೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಜರುಗಿದೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಮೃತರ ಮಗ ಆರೋಪಿಸಿದ್ದಾರೆ.

ಮೇಟಗಳ್ಳಿ ಬಿ.ಎಂ.ಶ್ರೀನಗರ ನಿವಾಸಿ ಚಿಕ್ಕಮಾದು (68) ಮೃತಪಟ್ಟವರು. ಇವರು ವಾರದ ಹಿಂದೆ ಬನ್ನಿಮಂಟಪದ ಬಳಿ ಅಪಘಾತಕ್ಕೀಡಾಗಿ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಅಲ್ಲಿ ವೆಂಟಿ ಲೇಟರ್ ಇಲ್ಲದಿರುವುದರಿಂದ ಅವರನ್ನು ಮಿಶಿನ್ ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿತ್ತು.

ಮಿಶಿನ್ ಆಸ್ಪತ್ರೆಯಲ್ಲಿ ವೆಚ್ಚದ ಬಾಬ್ತು ಒಂದು ಲಕ್ಷದವರಗೆ ಬಂದುದರಿಂದ ಚಿಕ್ಕಮಾದು ಅವರ ಮಗ ಸ್ಥಳೀಯ ಶಾಸಕರ ನೆರವಿನಿಂದ ಕೆ.ಆರ್.ಆಸ್ಪತ್ರೆಗೆ ವೆಂಟಿಲೇಟರ್ ಹಾಕಿಸಿ ತಂದೆಯನ್ನು ಮತ್ತೆ ಕೆ.ಆರ್.ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗಾಗಿ ದಾಖಲಿಸಿದ್ದರು.

ventilator problem: A 58-year-old man died at KR Hospital in mysuru city

ಆದರೆ ಮಂಗಳವಾರ ರಾತ್ರಿ ವೆಂಟಿಲೇಟರ್ ಕೆಟ್ಟ ಪರಿಣಾಮ ಚಿಕ್ಕಮಾದು ಸಾವನ್ನಪ್ಪಿದ್ದಾರೆ. ಆದರೆ ಅವರ ಮಗ ವೈದ್ಯರ ನಿರ್ಲಕ್ಷ್ಯದಿಂದ ತನ್ನ ತಂದೆ ಸಾವನ್ನಪ್ಪಿದ್ದಾರೆ. ಅವರಿಗೆ ವೆಂಟಿಲೇಟರ್ ನ್ನು ಸರಿಯಾಗಿ ನಿರ್ವಹಣೆ ಮಾಡಲು ಬರುತ್ತಿಲ್ಲ. ಒಬ್ಬರಿಂದ ಒಬ್ಬರಿಗೆ ವರ್ಗಾಯಿಸುತ್ತಲೇ ಇರುತ್ತಾರೆ ಎಂದು ಆರೋಪಿಸಿ ದೂರು ನೀಡಲು ಮುಂದಾಗಿದ್ದಾರೆ. ಚಿಕ್ಕಮಾದು ಅವರ ಮೃತ ಶರೀರವನ್ನು ಕೆ.ಆರ್.ಆಸ್ಪತ್ರೆಯ ಶಾವಾಗಾರದಲ್ಲಿರಿಸಲಾಗಿದೆ.

ಗುಡಿಸಲುಗಳಿಗೆ ಬೆಂಕಿ, ಪಾರಾದ ನಿವಾಸಿಗಳು

ಮೈಸೂರು: ಮೈಸೂರಿನ ಕೆಸರೆ ಕುರಿಮಂಡಿ ಬಡಾವಣೆಯ ಎ ಬ್ಲಾಕ್ ನಲ್ಲಿ ಎರಡು ಗುಡಿಸಲುಗಳಿಗೆ ಬಿಂಕಿ ಬಿದ್ದಿದ್ದು, ಗುಡಿಸಲು ಬೆಂಕಿಗೆ ಆಹುತಿಯಾದ ಘಟನೆ ಮಂಗಳವಾರ ತಡರಾತ್ರಿ ಜರುಗಿದೆ.

ಕುರಿಮಂಡೆ ಬಡಾವಣೆಯಲ್ಲಿ ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿರಬೇಕೆಂದು ಶಂಕಿಸಲಾಗಿದೆ. ಆದರೆ ಮಲಗಿದ್ದವರು ಹೊರಬಂದು ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಪ್ರದೇಶ ನೂರಕ್ಕೂ ಹೆಚ್ಚು ಗುಡಿಸಲುಗಳನ್ನು ಹೊಂದಿದ್ದು, ಭಾರೀ ದುರಂತ ಸಂಭವಿಸುತ್ತಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ventilator problem: A 58-year-old man died at KR Hospital in mysuru city

ಅಕ್ರಮ ಮರಳು ಸಾಗಾಣೆ ವಾಹನ ವಶ
ಮೈಸೂರು: ಮೈಸೂರು ಜಿಲ್ಲಾ ಅಪರಾಧ ದಳ ಯಶಸ್ವಿ ಕಾರ್ಯಾಚರಣೆ ನಡೆಸಿ ಮೈಸೂರಿನಲ್ಲಿ ಅಕ್ರಮವಾಗಿ ಮರಳು ಸಾಗಾಣೆ ನಡೆಸುತ್ತಿದ್ದ ವಾಹನಗಳನ್ನು ವಶಪಡಿಸಿಕೊಂಡಿದೆ.

ಕೆ.ಆರ್.ತಾಲ್ಲೂಕಿನ ಗ್ರಾಮಗಳಾದ ಕಗ್ಗೆರೆ, ಹಳೇ ಎಡತೊರೆ, ದೊಡ್ಡಕೊಪ್ಪಲು ಗ್ರಾಮದ ಬಳಿ ಅಕ್ರಮ ಮರಳು ಸಾಗಾಣೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ವಾಹನ ಚಾಲಕರು ಸೇರಿದಂತೆ 5 ಜನರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಈಶ್ವರ, ಅನಂದ, ದಿನೇಶ, ರಾಮಚಂದ್ರ ಮತ್ತು ಅವಿನಾಶ್ ಎಂದು ಗುರುತಿಸಲಾಗಿದೆ.ಕೆ.ಆರ್.ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A 58-year-old man died at KR Hospital in the mysuru city, after the ventilator which was equipped on him failed to work. Other incident fire fall on the hut escaped the resident. Another incident Police captured the sand transport vehicles in mysuru.
Please Wait while comments are loading...