ಮಗಳಾದನು ಮಗ... ಜಗತ್ತೇನೇ ಹೇಳಲಿ, ತುಂಬಿದೆ ಅಮ್ಮನ ಕಣ್ಣಾಲಿ!
ಕಣ್ಣೆದುರಲ್ಲೇ ಮಗನು ಮಗಳಾಗಿ ಬದಲಾಗುತ್ತಿರುವುದನ್ನು ಕಂಡ ಅಮ್ಮನ ಮನಸ್ಥಿತಿ ಹೇಗಿರಬೇಡ? ಸಮಾಜದ ವ್ಯಂಗ್ಯದ ಬಾಯಿಗೆ ತುತ್ತಾಗುವ ಭಯ. ಮಗನ ಭವಿಷ್ಯ ನೆನೆದರೆ ಆತಂಕಗೊಳ್ಳುವ ಮನ, ಕುಟುಂಬಸ್ಥರೆದುರು, ಸ್ನೇಹಿತರು, ಬಂಧುಗಳೆದುರು ತಲೆಯೆತ್ತಿ ನಡೆಯಲಾಗದ ಅಸಹಾಯಕತೆ...
ಆದರೆ ಮುಂಬೈ ಮಹಿಳೆಯೊಬ್ಬರು ಈ ಯಾವ ಭಾವವನ್ನೂ ಎದುರಿಸಲಿಲ್ಲ... ತಮ್ಮ ಮಗನಲ್ಲಿ ಹೆಣ್ತನದ ಭಾವನೆಗಳು ಮೊಳೆಯುತ್ತಿರುವುದು ಗೊತ್ತಾದಾಗಲೂ ಅದನ್ನು ಪ್ರಶ್ನಿಸಲಿಲ್ಲ. ಅವನು ಹೇಗಿದ್ದಾನೋ ಹಾಗೆಯೇ ಒಪ್ಪಿಕೊಂಡರು ಆ ಮಹಾತಾಯಿ! ಇವರ ಹೆಸರು ವೈಯಕ್ತಿಕ ವಿವರಗಳ ಬಗ್ಗೆ ಮಾಹಿತಿ ಲಭ್ಯವಿಲ್ಲ.
Humans of Bombay ಎಂಬ ಫೇಸ್ ಬುಕ್ ಪುಟದಲ್ಲಿ ಈ ಮಹಾತಾಯಿಯ ಕುರಿತ ಬರಹವನ್ನು ಪೋಸ್ಟ್ ಮಾಡಲಾಗಿದ್ದು, ಆಕೆಯ ನಡೆಯನ್ನು ಸಾವಿರಾರು ಜನ ಶ್ಲಾಘಿಸಿದ್ದಾರೆ.
ಮಡಿಲಲ್ಲಿ ನಗುತ್ತಿದ್ದವು ಅವಳಿ ಮಕ್ಕಳು!
ಕೆಲವು ವರ್ಷಗಳ ಹಿಂದಿನ ಮಾತು. ಮುಂಬೈಯ ಮಹಿಳೆಯೊಬ್ಬರಿಗೆ ತಮಗೆ 'ಅವಳಿ ಜವಳಿ' ಮಕ್ಕಳಾಗಬೇಕೆಂಬ ಕನಸು. ಅವರ ಆಸೆಯೋ, ಹರಕೆಯೋ ಗೊತ್ತಿಲ್ಲ. ಗರ್ಭಿಣಿ ಎಂಬುದು ತಿಳಿದು ಆಸ್ಪತ್ರೆಗೆ ತೆರಳಿ ಸ್ಕ್ಯಾನ್ ಮಾಡಿಸಿದಾಗಲೇ ಗೊತ್ತಾಗಿದ್ದು, ತಮ್ಮ ಗರ್ಭದಲ್ಲಿ ಅವಳಿ ಜವಳಿ ಮಕ್ಕಳಿವೆ ಎಂಬುದು!
ಒಂದು ಕ್ಷಣ ಅಚ್ಚರಿ. ಒಂಬತ್ತು ತಿಂಗಳು ಹೇಗೆ ಕಳೆಯಿತೋ ಗೊತ್ತಿಲ್ಲ. ಅಮ್ಮನ ಮಡಿಲಲ್ಲಿ ಇಬ್ಬರು ಮಕ್ಕಳು, ಒಂದು ಗಂಡು, ಒಂದು ಹೆಣ್ಣು. ಅಚ್ಚರಿ ಎಂದರೆ ಇಬ್ಬರ ವರ್ತನೆಯಲ್ಲೂ ಅಜಗಜಾಂತರ. ಹೆಣ್ಣು ಮಗುವಿಗೆ ಆಟ, ಓಡಾಟ ಇಷ್ಟ. ಗಂಡು ಮಗವಿಗೆ ಮನೆಯಲ್ಲೇ ಇರುವುದು, ನೃತ್ಯ ಎಂದರೆ ಇಷ್ಟ.

ಮಗನಲ್ಲಿ ಮೊಳಕೆಯೊಡೆಯುತ್ತಿತ್ತು ಹೆಣ್ತನದ ಭಾವ
ಇಂಥ ವ್ಯತಿರಿಕ್ತ ಮನಸ್ಥಿತಿಯ ಈ ಮಕ್ಕಳಲ್ಲಿ ಹೆಣ್ಣು ಮಗು ಸಹಜವಾಗಿಯೇ ಇದ್ದದೂ, ಗಂಡು ಮಗುವಿನಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿತ್ತು. ದೇಹ ಗಂಡಾಗಿದ್ದರೂ, ಅದರೊಳಗೆ ಹೆಣ್ತನ ಹುಟ್ಟಿಕೊಂಡಿತ್ತು.
ತಾಯಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುವವರು. ಅವರು ಮಗನನ್ನು ಪಾರ್ಲರ್ ಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ತಾಯಿ ಮಾಡುವ ಕೆಲಸವನ್ನೆಲ್ಲ ನೋಡುತ್ತಿದ್ದ ಹುಡುಗ ಅದನ್ನೇ ಅನುಕರಿಸುವುದಕ್ಕೆ ಆರಂಭಿಸಿದ. ಹೆಣ್ಣಾಗಿ ಇರುವುದೇ ಆತನಿಗೆ ಹೆಚ್ಚು ಇಷ್ಟವಾಗುತ್ತಿತ್ತು.

ನಿಟ್ಟುಸಿರು ಮೂಡಿಸಿದ ಸುಪ್ರೀಂ ಕೋರ್ಟ್ ತೀರ್ಪು
ಮಗನಲ್ಲಿ ಬದಲಾವಣೆಯಾಗುವುದನ್ನು ಕಂಡ ತಂದೆಗೆ ಆತಂಕವಾಗಿತ್ತು. ಆದರೆ ತಾಯಿ ಮಾತ್ರ ಯಾವ ಆತಂಕವನ್ನೂ ಮಾಡಿಕೊಳ್ಳದೆ ಆತನ ಭಾವನೆಗಳಿಗೆ ಬೆಲೆ ನೀಡಿದರು. ಮೊನ್ನೆ ಮೊನ್ನೆ ಸುಪ್ರೀಂ ಕೋರ್ಟ್ ಐಪಿಸಿ ಸೆಕ್ಷನ್ 377 ಅನ್ನು ರದ್ದುಗಳಿಸುವಂತೆ ಕೋರಲಾಗಿದ್ದ ಅರಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಮಹತ್ವದ ತೀರ್ಪೊಂದನ್ನು ನೀಡಿತ್ತು. ಸಹಮತದ ಸಲಿಂಗಕಾಮ ಅಪರಾಧವಲ್ಲ ಎಂಬುದು ಈ ತೀರ್ಪು.

ತುಂಬಿದೆ ಅಮ್ಮನ ಕಣ್ಣಾಲಿ
ಈ ಐತಿಹಾಸಿಕ ತೀರ್ಪು ಹೊರಬರುತ್ತಿದ್ದಂತೆಯೇ ನಿಟ್ಟುಸಿರಿಟ್ಟ ಸಾವಿರಾರು ಜನರಲ್ಲಿ ಈ ಮಹತಾಯಿಯೂ ಒಬ್ಬರು. ಇಂದು ಅವರ ತಂದೆಯೂ ಮಗನನ್ನು ಒಪ್ಪಿಕೊಳ್ಳುತ್ತೆ ಎಂಬ ವಿಶ್ವಾಸ ತಾಯಿ-ಮಗನ(ಳ)ದ್ದು!
ಈ ಜಗತ್ತು ಮಗನ ಬಗ್ಗೆ ಏನೇ ಹೇಳಲಿ... ಅಮ್ಮನ ಕಣ್ಣಾಲಿಗಳು ಮಾತ್ರ ತುಂಬಿವೆ.. ದುಃಖಕ್ಕಲ್ಲ. ಮಗನ ಇಷ್ಟಕ್ಕೆ, ಸ್ವಾತಂತ್ರ್ಯಕ್ಕೆ ತಾನು ಧಕ್ಕೆಯಾಗಲಿಲ್ಲ ಎಂಬ ಖುಷಿಗೆ, ಸಲಿಂಗ ಕಾಮ ಅಪರಾಧವಲ್ಲ ಎಂದ ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪಿಗೆ!
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications