Get Updates
Get notified of breaking news, exclusive insights, and must-see stories!

ಗಾಂಧೀಜಿ ಹಂತಕ ಕುರಿತ ಚಿತ್ರ ಬಿಡುಗಡೆಗೆ ಸಿದ್ಧ

ಮುಂಬೈ, ಡಿ.19: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆ ಹೊಗಳಿ ಸಂಸದರೊಬ್ಬರು ಕ್ಷಮೆಯಾಚಿಸಿದ ಸುದ್ದಿ ಓದಿರಬಹುದು. ಈಗ ನಾಥೂರಾಮ್ ಗೋಡ್ಸೆ ಪ್ರತಿಮೆ ಸ್ಥಾಪನೆಗೆ ಅನುಮತಿ ಕೋರಿದ ಬೆನ್ನಲ್ಲೇ ಗೊಡ್ಸೆ ಕುರಿತ ಚಲನಚಿತ್ರವನ್ನು ಬಿಡುಗಡೆ ಮಾಡಲು ಹಿಂದೂ ಸಂಘಟನೆ ಮುಂದಾಗಿದೆ.

ಮುಂದಿನ ಪೀಳಿಗೆಗೆ ಸತ್ಯ ಏನೆಂಬುದು ಅರಿವಾಗಬೇಕಾದರೆ ನಾಥೂರಾಮ್ ಗೋಡ್ಸೆ ಬಗ್ಗೆ ಸಂಪೂರ್ಣ ಚಿತ್ರಣ ನೀಡುವ ಚಲನಚಿತ್ರ, ಸಾಕ್ಷ್ಯಚಿತ್ರಗಳ ಅಗತ್ಯವಿದೆ. ಹೀಗಾಗಿ ಗೋಡ್ಸೆ ಕುರಿತಂತೆ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾ ಹೇಳಿದೆ.

ದೇಶ ಭಕ್ತ್ ನಾಥೂರಾಮ್ ಗೋಡ್ಸೆ ಎಂಬ ಹೆಸರಿನ ಈ ಚಿತ್ರವನ್ನು ಜನವರಿ 30ರಂದು ಬಿಡುಗಡೆ ಮಾಡಲು ತಯಾರಿ ನಡೆಸಲಾಗಿದೆ ಎಂದು ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮುನ್ನ ಕುಮಾರ್ ಶರ್ಮ ಅವರು ದಿ ಹಿಂದೂ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. [ಗೋಡ್ಸೆ 'ದೇಶಪ್ರೇಮಿ' ಹೇಳಿಕೆ ಸಂಸದ ಸಾಕ್ಷಿ ಯೂ ಟರ್ನ್]

Hindu Mahasabha to release Godse film on Jan. 30

ಮಹಾತ್ಮಾ ಗಾಂಧೀಜಿ ಅವರನ್ನು 1948ರ ಜನವರಿ 30 ರಂದು ನಾಥೂರಾಮ್ ಗೋಡ್ಸೆ ಹತ್ಯೆಗೈದಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಗೋಡ್ಸೆ ಚಿತ್ರ ಸಾಕ್ಷ್ಯಚಿತ್ರ ಮಾದರಿಯಲ್ಲಿರುತ್ತದೆ. ಗೋಡ್ಸೆ ಅವರನ್ನು ದೇಶಭಕ್ತನಂತೆ ತೋರಿಸುವುದಕ್ಕಿಂತ ಗಾಂಧೀಜಿ ಅವರು ಹಿಂದೂ ಧರ್ಮೀಯರ ಬಗ್ಗೆ ಹೊಂದಿದ್ದ ಅಭಿಪ್ರಾಯ ನಿಲುವನ್ನು ಜಗತ್ತಿಗೆ ಪರಿಚಯಿಸುವುದು ನಮ್ಮ ಉದ್ದೇಶ ಎಂದು ಶರ್ಮ ಹೇಳಿದ್ದಾರೆ.

ಕಳೆದ ವಾರ ಈ ಬಗ್ಗೆ ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಚರ್ಚೆ ನಡೆದಿತ್ತು. ಮಹಾರಾಷ್ಟ್ರದಲ್ಲಿ ಗೋಡ್ಸೆ ದಿನಾಚರಣೆ, ಗೋಡ್ಸೆ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡುವುದರ ಉದ್ದೇಶದ ಬಗ್ಗೆ ವಿಪಕ್ಷಗಳು ಪ್ರತಿಭಟನೆ ನಡೆಸಿದ್ದವು. ಇದಕ್ಕೆ ಉತ್ತರ ನೀಡಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಗಾಂಧೀಜಿ ಅವರ ಬಗ್ಗೆ ಅವಹೇಳನಕಾರಿ ಅಂಶಗಳಿರುವ ಯಾವುದೇ ಚಿತ್ರ ಅಥವಾ ಗೋಡೆ ಹೊಗಳುವ ಕ್ರಮಗಳನ್ನು ನಮ್ಮ ಸರ್ಕಾರ ಖಂಡಿಸುತ್ತದೆ ಎಂದಿದ್ದರು.

ಮುಂಬೈನ ಪನ್ ವೇಲ್ ನಲ್ಲಿ ಹಿಂದೂ ಸಂಘಟನೆಗಳು ಗೋಡ್ಸೆ ಗಲ್ಲಿಗೇರಿಸಿದ ದಿನ(ನ.15, 1949) ವನ್ನು 'ಶೌರ್ಯ ದಿವಸ' ಎಂಬ ಹೆಸರಿನಲ್ಲಿ ಆಚರಿಸಿದ್ದವು. ಇದಕ್ಕೆ ಭಾರಿ ಟೀಕೆಗಳು ಕೇಳಿ ಬಂದಿತ್ತು. ರಾಜ್ಯಸಭೆಯಲ್ಲೂ ಗದ್ದಲವುಂಟಾಗಿತ್ತು. ಅದರೆ, ಈಗ ಹಿಂದೂ ಸಂಘಟನೆಗಳು ಚಿತ್ರ ಬಿಡುಗಡೆಗೆ ಮುಂದಾಗಿವೆ.(ಏಜೆನ್ಸೀಸ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+