Get Updates
Get notified of breaking news, exclusive insights, and must-see stories!

CM Siddaramaiah: ಗಾಂಧೀಜಿ ಅವರಷ್ಟು ಸರಳ ಜೀವನ ನಡೆಸಿದ ವ್ಯಕ್ತಿ ಯಾರು ಇಲ್ಲ: ಸಿದ್ದರಾಮಯ್ಯ

ಬೆಂಗಳೂರು,ಅಕ್ಟೋಬರ್‌ 02: ಮಹಾತ್ಮಾ ಗಾಂಧೀಜಿ ಅವರಷ್ಟು ಸರಳ ಜೀವನವನ್ನು ಅಳವಡಿಸಿಕೊಂಡು ಬದುಕು ನಡೆಸಿದವರು ಭಾರತ ದೇಶದಲ್ಲೇ ಯಾರು ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.

ನಗರದ ಗಾಂಧಿ ಭವನದ ಮಹಾದೇವ ದೇಸಾಯಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಅವರ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿ ಅವರು ಹೇಳಿದಂತೆ ನಡೆದವರು. ನಾವೆಲ್ಲರೂ ಅವರಂತೆಯೇ ನಡೆಯಲು ಸಾಧ್ಯವಾಗದಿದ್ದರೂ ಅಲ್ಪ ಸ್ವಲ್ಪವಾದರೂ ಅವರ ದಾರಿಯಲ್ಲಿ ಸಾಗಲು ಪ್ರಯತ್ನ ಮಾಡಬೇಕು. ಆಗಲೇ ನಾವುಗಳು ಅವರಿಗೆ ಗೌರವ ಸಲ್ಲಿಸಿದಂತೆ ಎಂದು ತಿಳಿಸಿದರು.

chief-minister-siddaramaiah

ದಕ್ಷಿಣ ಆಫ್ರಿಕಾಗೆ ವಕೀಲಿ ವೃತ್ತಿ ಮಾಡಲು ಹೋದ ಗಾಂಧೀಜಿ ಅವರು ಅಲ್ಲಿಯೂ ಕೂಡ ಅಸಮಾನತೆ ವಿರುದ್ಧ ಹೋರಾಟ ಮಾಡಿ ಸೆರೆಮನೆ ವಾಸ ಅನುಭವಿಸಿದರು. ಗೋಪಾಲಕೃಷ್ಣ ಗೋಖಲೆ ಅವರು ಬ್ರಿಟೀಷರಿಂದ ಭಾರತದೇಶವನ್ನು ಬಿಡುಗಡೆಗೊಳಿಸುವ ಹೋರಾಟದ ನಾಯಕತ್ವವನ್ನು ವಹಿಸಿಕೊಳ್ಳುವಂತೆ ಹೇಳಿ ಗಾಂಧಿ ಅವರನ್ನು ಭಾರತಕ್ಕೆ ಕರೆಸಿಕೊಂಡರು. ಗೋಖಲೆ ಅವರ ಅಣತಿಯಂತೆ ಸ್ವಾತಂತ್ರ್ಯ ಹೋರಾಟದ ನಾಯಕತ್ವವನ್ನು ವಹಿಸಿಕೊಂಡ ಗಾಂಧಿ ಅವರು ಅಹಿಂಸಾ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟದ ನಾಯಕತ್ವವನ್ನು ವಹಿಸದೇ ಇದ್ದಿದ್ದರೆ ನಾವು ಬ್ರಿಟೀಷರ ಗುಲಾಮಗಿರಿಯಿಂದ ಹೊರಗೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಹಳ್ಳಿಗಳು ಉದ್ಧಾರವಾದರೆ ಮಾತ್ರ ದೇಶ ಉದ್ಧಾರವಾಗಲಿದೆ ಎಂಬ ಗಾಂಧಿ ಅವರ ಆಶಯ ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಕೂಡ ಸಾಧ್ಯವಾಗಿಲ್ಲ. ಆಗಿನ ಕಾಲದಲ್ಲಿ ಇಷ್ಟು ತಂತ್ರಾಜ್ಞಾನ ಅಭಿವೃದ್ಧಿಯಾಗದಿದ್ದರೂ ಕೂಡ ಗಾಂಧೀಜಿ ಅವರು ಮಾಡಿದ ಭಾಷಣ ದೇಶದ ಮೂಲೆ ಮೂಲೆಗೂ ತಲುಪುತಿತ್ತು. ಇದು ಜನರು ಅವರ ಭಾಷಣ ಕೇಳಲು ಎಷ್ಟು ಉತ್ಸುಕರಾಗಿದ್ದರು ಎಂಬುದನ್ನು ತಿಳಿಸುತ್ತದೆ. ಸತ್ಯ ಅಹಿಂಸಾ ಮಾರ್ಗದಲ್ಲಿ ನಡೆದ ಗಾಂಧಿ ಅವರ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು. ನಮ್ಮ ಸರ್ಕಾರ ಕೂಡ ಗಾಂಧೀಜಿ ಅವರ ಚಿಂತನೆಯಡಿಯಲ್ಲಿಯೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.

ಇದೇ ದಿನ ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನ ಎಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ನೆನೆದ ಮುಖ್ಯಮಂತ್ರಿ ಅವರು, ಶಾಸ್ತ್ರಿ ಅವರು ಗಾಂಧಿ ಅವರ ಅನುಯಾಯಿಯಾಗಿದ್ದರು. ಅವರು ದೇಶ ಕಂಡ ಒಬ್ಬ ಪ್ರಾಮಾಣಿಕ ರಾಜಕಾರಣಿ. ಅವರು ಬಿಟ್ಟು ಹೋಗಿರುವ ಮಾಲ್ಯಗಳನ್ನು ರಾಜಕಾರಣಿಗಳು ಅಳವಡಿಸಿಕೊಳ್ಳಬೇಕೆಂದರು.

chief-minister-siddaramaiah

ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಹೆಚ್.ಕೆ. ಪಾಟೀಲ್ ಅವರು ಈ ಸಂದರ್ಭದಲ್ಲಿ ಗಾಂಧಿ ಭವನದಲ್ಲಿ ಇರುವ ಗಾಂಧಿ ಕುರಿತ ಪುಸ್ತಕಗಳನ್ನು ಯುವ ಜನರಿಗೆ ಆನ್‌ಲೈನ್ ನಲ್ಲಿ ಓದುವ ಅವಕಾಶ ಒದಗಿಸಿಕೊಡುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ಜಾಲತಾಣಕ್ಕೆ ಅವರು ಚಾಲನೆ ನೀಡಿದರು.

ಪ್ರಾಸ್ತಾವಿಕ ಭಾಷಣದಲ್ಲಿ ಗಾಂಧೀಜಿ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂಗತಿಗಳನ್ನು ಹಾಕುತ್ತಿರುವ ಕುರಿತು ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ನಾಡೋಟ ಡಾ. ವೂಡೇ ಪಿ. ಕೃಷ್ಣ ಅವರು ವ್ಯಕ್ತಪಡಿಸಿದ ವಿಷಾದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರಾದ ಹೆಚ್.ಕೆ. ಪಾಟೀಲ್ ಅವರು ದೇಶದ ಮೇಲೆ ಅಭಿಮಾನ ಇಲ್ಲದವರು ಈ ಕೆಲಸ ಮಾಡುತ್ತಾರೆ. ಭಾರತ ಬೇರೆ ಅಲ್ಲ, ಗಾಂಧಿ ಬೇರೆ ಅಲ್ಲ.

ಜನರ ಮನಸ್ಸಿನಲ್ಲಿ ಗೊಂದಲ ಹುಟ್ಟುಹಾಕುವ ಮತ್ತು ಗಾಂಧೀಜಿ ಅವರಿಗೆ ಅವಮಾನ ಆಗುವಂತೆ ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ವಿಚಾರದಲ್ಲಿ ಸರ್ಕಾರ ಚಿಂತಿಸಲಿದೆ ಎಂದು ಹೇಳಿದರು. ಗಾಂಧೀಜಿ ಅವರನ್ನು ಅನುಸರಿಸುವುದು ಕಷ್ಟವೇನು ಇಲ್ಲ. ಸತ್ಯ ಹೇಳುವುದು, ಸರಳವಾಗಿರುವುದು, ಯಾರಿಗೂ ಹಿಂಸೆ ಮಾಡದಿರುವುದು, ಎಲ್ಲರನ್ನೂ ಸಮಾನರಾಗಿ ಕಾಣುವುದು ಇವುಗಳನ್ನು ಎಲ್ಲರೂ ಅನುಸರಿಸಬಹುದು ಎಂದು ಸಚಿವರು ತಿಳಿಸಿದರು.

ಗಾಂಧಿ ಅವರ ಚಿಂತನೆಗಳನ್ನು ಯುವ ಸಮುದಾಯಗಳಿಗೆ ಡಿಜಿಟಲ್ ಮಾಧ್ಯಮಗಳ ಮೂಲಕ ತಲುಪಿಸುವ ಯೋಜನೆಗೆ ಗಾಂಧಿ ಭವನದೊಂದಿಗೆ ಸಹಕಾರ ನೀಡುತ್ತಿರುವ ಅಮೆರಿಕಾ ದೇಶದ ಪಬ್ಲಿಕ್ ರಿಸೋರ್ಸ್ ನ ಸ್ಥಾಪಕರು ಹಾಗೂ ಅಧ್ಯಕ್ಷರಾದ ಕಾರ್ಲ್ ಮಲಾಮಡ್ ಅವರು ತಾವು ಗಾಂಧಿ ಅವರ ಸಾಹಿತ್ಯವನ್ನು ಅಂತರ್ಜಾಲದಲ್ಲಿ ಒದಗಿಸಿರುವ ಕುರಿತು ಹಾಗೂ ತಾವು ಗಾಂಧೀಜಿ ಅವರ ಮೇಲೆ ಹೊಂದಿರುವ ಅಭಿಪ್ರಾಯಗಳನ್ನು ಹಂಚಿಕೊಂಡರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+