ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಇದು ಸಕಾಲ : ರಾಮ್ ದೇವ್
ಮುಂಬೈ, ಮೇ 14: ಮುಂಬೈ 26/11 ಉಗ್ರರ ದಾಳಿಯ ಹಿಂದೆ ಪಾಕಿಸ್ತಾನ ಕೈವಾಡವಿದೆ ಎಂದು ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತದ ಯೋಗಗುರು ಬಾಬಾ ರಾಮದೇವ್ ಅವರು ಕಿಡಿಕಾರಿದ್ದಾರೆ.
ಈಗ ಪಾಕ್ ಆಕ್ರಮಿತ ಕಾಶ್ಮೀರ(PoK)ವನ್ನು ಭಾರತದ ವಶಕ್ಕೆ ಪಡೆಯುವ ಕಾಲ ಬಂದಿದೆ. ಅಲ್ಲದೇ, ಪಾಕ್ ವಶದಲ್ಲಿರುವ ಬಲೂಚಿಸ್ತಾನವನ್ನು ಸ್ವಾತಂತ್ರ್ಯಗೊಳಿಸಬೇಕಿದೆ ಎಂದು ಪಾಕಿಸ್ತಾನದ ವಿರುದ್ಧ ಯೋಗ ಗುರು ಪ್ರತಿಕ್ರಿಯಿದ್ದಾರೆ.

ಇದೇ ವೇಳೆ ಉಗ್ರರಿಗೆ ಪಾಕ್ ಆಶ್ರಯ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಇನ್ನಾದರೂ ಉಗ್ರವಾದಕ್ಕೆ ಪಾಕ್ ನೆಲೆ ನೀಡುವುದನ್ನು ಬಿಡಬೇಕು ಎಂದು ಸಲಹೆ ನೀಡಿದ್ದಾರೆ.
ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಮುಂಬೈ ದಾಳಿಯ ಹಿಂದೆ ಪಾಕ್ ಕೈವಾಡವಿದೆ ಎಂದು ಪರೋಕ್ಷವಾಗಿ ಹೇಳಿದ್ದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.












Click it and Unblock the Notifications