• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಂಬಾನಿ ಪುತ್ರಿ ವೈಭವದ ಮದ್ವೆ ಫೋಟೋ ಕ್ಲಿಕ್ಕಿಸಿದ್ದು ಮಂಗಳೂರಿನ ಯುವಕ!

|

ಮಂಗಳೂರು, ಡಿಸೆಂಬರ್ 18: ಒಂದು ಕಾಲದಲ್ಲಿ ಮಂಗಳೂರಿನ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ದೇಶದ ಅತ್ಯಂತ ಅದ್ದೂರಿ ಮದುವೆ ಎಂದೇ ಪರಿಣಿಸಲಾಗುವ ಭಾರತದ ನಂಬರ್ ಒನ್ ಶ್ರೀಮಂತ ಮುಕೇಶ್ ಅಂಬಾನಿ ಪುತ್ರಿ ಇಶಾ ಮತ್ತು ಉದ್ಯಮಿ ಆನಂದ್ ಪಿರಾಮನ್ ಮದುವೆ ಸಮಾರಂಭದ ಫೋಟೋಗಳನ್ನು ಸೆರೆ ಹಿಡಿದ್ದಾನೆ ಎಂದರೆ ನಂಬಲು ಸಾಧ್ಯವೇ?

ಆದರೆ ಇದು ಸತ್ಯ ಸಂಗತಿ. ಒಂದು ಕಾಲದಲ್ಲಿ ಮಂಗಳೂರಿನ ಕದ್ರಿ ಬಳಿ ಇರುವ ಪೆಟ್ರೋಲ್ ಪಂಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ವಿವೇಕ್ ಸಿಕ್ವೇರಾ, ಮುಕೇಶ್ ಅಂಬಾನಿ ಪುತ್ರಿ ಇಶಾ ಮತ್ತು ಆನಂದ್ ಪಿರಾಮನ್ ಮದುವೆ ಸಮಾರಂಭದ ಫೋಟೋಗಳನ್ನು ಸೆರೆ ಹಿಡಿದ್ದಾರೆ.

ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ಮದುವೆ ತಯಾರಿ ಹೇಗಿದೆ ನೋಡಿ

ಮನೆಯಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಅರ್ಧಕ್ಕೆ ಶಿಕ್ಷಣವನ್ನು ಮೊಟಕುಗೊಳಿಸಿದ್ದ ವಿವೇಕ್ ನಂತರ ಪೆಟ್ರೋಲ್ ಬಂಕ್ ಒಂದರಲ್ಲಿ ಅಟೆಂಡೆಂಟ್ ಆಗಿ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ಸ್ನೇಹಿತ ನೋರ್ವನ ಸಲಹೆಯಂತೆ ವಿವೇಕ್ ಫೋಟೋಗ್ರಫಿ ಕಲಿತರು.

ಆದರೆ ಕ್ಯಾಮೆರಾ ಖರೀದಿಗೆ ವಿವೇಕ್ ಅವರಲ್ಲಿ ಹಣವಿರದ ಕಾರಣ ಪೆಟ್ರೋಲ್ ಬಂಕ್ ನಲ್ಲಿ ಭದ್ರತಾ ಠೇವಣಿಯಾಗಿ ಇಟ್ಟಿದ್ದ 7 ಸಾವಿರ ರೂಪಾಯಿ ಹಿಂದಕ್ಕೆ ಪಡೆದು ಚಿಕ್ಕದೊಂದು ಕ್ಯಾಮೆರಾ ಖರೀದಿಸುವುದರೊಂದಿಗೆ ತಮ್ಮ ಫೋಟೋಗ್ರಫಿ ಪಯಣ ಆರಂಭಿಸಿದರು. ನಂತರ ವಿವೇಕ್ ಹಿಂದೆ ತಿರುಗಿ ನೋಡಿದ್ದೇ ಇಲ್ಲ.

ಇಶಾ ಅಂಬಾನಿ ಪ್ರಿ ವೆಡ್ಡಿಂಗ್ ಪಾರ್ಟಿಗೆ ಬಂದ ಸೆಲೆಬ್ರಿಟಿಗಳು ಯಾರ್ಯಾರು?

ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುತ್ತಿದ್ದ ಆ ಯುವಕ ನಂತರದ ದಿನಗಳಲ್ಲಿ ಖ್ಯಾತ ಮದುವೆ ಫೋಟೋಗ್ರಾಫರ್ ವಿವೇಕ್ ಸಿಕ್ವೇರಾ ಆಗಿ ಬೆಳೆದು ನಿಂತರು. ಮುಂದೆ ಓದಿ...

ಒಂದೇ ಒಂದು ಕ್ಲೂ ಕೂಡ ಇರಲಿಲ್ಲ

ಒಂದೇ ಒಂದು ಕ್ಲೂ ಕೂಡ ಇರಲಿಲ್ಲ

ವಿವೇಕ್ ಸಿಕ್ವೇರಾ ಖ್ಯಾತಿ ಎಲ್ಲಿಯವರೆಗೆ ಬೆಳೆಯಿತೆಂದರೆ , ದೇಶದ ನಂಬರ್ ಒನ್ ಶ್ರೀಮಂತ ಮುಕೇಶ್ ಅಂಬಾನಿ ಪುತ್ರಿ ಮದುವೆ ಸಮಾರಂಭದ ಫೋಟೋಗಳನ್ನು ಸೆರೆಹಿಡಿಯುವ ಆಫರ್ ಪಡೆಯುವ ವರೆಗೆ ತಲುಪಿದೆ. ಮಂಗಳೂರಿನ ವಿವೇಕ್ ಸಿಕ್ವೇರಾ ಮತ್ತು ಅವರ ತಂಡ 15 ದಿನಗಳ ಕಾಲ ಅಂಬಾನಿ ಕುಟುಂಬದ ಸಮಾರಂಭದಲ್ಲಿ ಭಾಗಿಯಾಗಿ ವಿಶೇಷ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದೆ.

ಕಳೆದ ಜೂನ್ ತಿಂಗಳಿನಲ್ಲಿ ಅಂಬಾನಿ ಮತ್ತು ಪಿರಾಮಲ್ ಕುಟುಂಬಕ್ಕೆ ಆಪ್ತರೊಬ್ಬರು ವಿವೇಕ್ ಅವರನ್ನು ಸಂಪರ್ಕಿಸಿ ಡಿಸೆಂಬರ್ 1 ರಿಂದ 15 ರವರೆಗಿನ ಎಲ್ಲ ದಿನಗಳನ್ನು ಕಾಯ್ದಿರಿಸುವಂತೆ ಸೂಚಿಸಿದ್ದರು. ಅದಲ್ಲದೇ ವಿವೇಕ್ ಈ ಹಿಂದೆ ಕ್ಲಿಕ್ಕಿಸಿರುವ ಕೆಲ ಫೋಟೋ ಸ್ಯಾಂಪಲ್ ಗಳನ್ನು ಕಳುಹಿಸಿಕೊಡುವಂತೆ ಸೂಚಿಸಿದ್ದರು. ಆದರೆ ಕರೆ ಮಾಡಿದ ವ್ಯಕ್ತಿ 15 ದಿನಗಳ ಕಾಲ ಯಾರ ಮದುವೆ ನಡೆಯಲಿದೆ? ಯಾವ ಸ್ಥಳದಲ್ಲಿ ನಡೆಯಲಿದೆ? ಎನ್ನುವ ಮಾಹಿತಿಯನ್ನು ಹೇಳಿರಲಿಲ್ಲ. ಎಲ್ಲವೂ ರಹಸ್ಯವಾಗಿದ್ದ ಈ ಮಾತುಕತೆ ಬಗ್ಗೆ ವಿವೇಕ್ ಬಹಳ ಕುತೂಹಲ ಹೊಂದಿದ್ದರು. ಆದರೆ ಒಂದೇ ಒಂದು ಕ್ಲೂ ಕೂಡ ಇರಲಿಲ್ಲ.

ಮುಂಬೈ ನಲ್ಲಿ ನಡೆಯಿತು ಮಾತುಕತೆ

ಮುಂಬೈ ನಲ್ಲಿ ನಡೆಯಿತು ಮಾತುಕತೆ

ಕಳೆದ ಅಕ್ಟೋಬರ್ ನಲ್ಲಿ ಅಂಬಾನಿ ಪುತ್ರಿಯ ಮದುವೆ ಸಮಾರಂಭ ಫೋಟೋ ತೆಗೆಯಲು ವಿವೇಕ್ ಅವರನ್ನು ಆಯ್ಕೆ ಮಾಡಿದ ವಿಚಾರ ಗೊತ್ತಾಗಿದೆ. ಅದನ್ನು ಕೇಳಿದ ವಿವೇಕ್ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ . ಈ ವಿಷಯವನ್ನು ಅರಗಿಸಿಕೊಳ್ಳಲು ಎರಡು ದಿನ ಬೇಕಾಯಿತು ಎಂದು ವಿವೇಕ್ ಹೇಳಿಕೊಂಡಿದ್ದಾರೆ. ನಂತರ ಮುಂಬೈಗೆ ಹೋಗಿ ಫೋಟೋ ರಹಸ್ಯ, ಸಂಭಾವನೆ ವಿಚಾರ ಕುರಿತು ಮಾತನಾಡಿ ಒಪ್ಪಂದ ಮಾಡಿಕೊಂಡು ಬಂದಿದ್ದಾರೆ. ಯಾವುದೇ ಕಾರಣಕ್ಕೂ ತೆಗೆದ ಫೋಟೋಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬಾರದು ಎಂದು ಷರತ್ತು ಕೂಡ ಈ ಷರತ್ತಿನ ಅನ್ವಯ ವಿಧಿಸಲಾಗಿತ್ತು.

ಮುಕೇಶ್ ಅಂಬಾನಿ ಈಗ ಏಷ್ಯಾದಲ್ಲೇ ಶ್ರೀಮಂತ ನಂಬರ್ ಒನ್

ಡ್ರೋನ್ ಕೂಡ ಬಳಸಲಾಯಿತು

ಡ್ರೋನ್ ಕೂಡ ಬಳಸಲಾಯಿತು

ಮುಕೇಶ್ ಅಂಬಾನಿ ಪುತ್ರಿ ಇಶಾ ಮತ್ತು ಉದ್ಯಮಿ ಆನಂದ್ ಪಿರಾಮನ್ ಮದುವೆಗಾಗಿಯೇ ವಿವೇಕ್ ಅವರ ತಂಡ 2 ತಿಂಗಳು ಸಿದ್ಧತೆ ನಡೆಸಿತ್ತು. ವಿವೇಕ್ ಅವರ ‘ಲುಕ್ಸ್ ಕ್ಯಾಪ್ಚರ್' ನ 17 ಮಂದಿ ಸದಸ್ಯರ ತಂಡ ಮುಂಬೈ ಮತ್ತು ಉದಯ್‍ಪುರ್ ಸಮಾರಂಭವನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದೆ. ವಿವೇಕ್ ಅವರ ತಂಡ ಸ್ಟಿಲ್ ಕ್ಯಾಮರಾ ಮಾತ್ರವಲ್ಲದೇ ವಿಡಿಯೋ, ಡ್ರೋನ್ ಮೂಲಕ ಸಮಾರಂಭವನ್ನು ಸೆರೆಹಿಡಿದಿದೆ.

ಶಂಕರ್ ಅವರೂ ಭಾಗವಹಿಸಿದ್ದರು

ಶಂಕರ್ ಅವರೂ ಭಾಗವಹಿಸಿದ್ದರು

ಅತ್ಯಂತ ಬಿಗಿ ಭದ್ರತೆಯಲ್ಲಿ ನಡೆದ ಈ ಮದುವೆಯಲ್ಲಿ ವಿವೇಕ್ ಅವರ ಸ್ಟುಡಿಯೋ ಪಾಲುದಾರನಾಗಿರುವ ಶಂಕರ್ ಅವರೂ ಭಾಗವಹಿಸಿದ್ದರು. ಮದುವೆ ಸಮಾರಂಭದಲ್ಲಿ ಭಾಗವಹಿಸಲು ವಿವೇಕ್ ಹಾಗೂ ಶಂಕರ್ ಅವರಿಗೆ ವಿಶೇಷ ಐಡಿ ಕಾರ್ಡ್ ನೀಡಲಾಗಿತ್ತು. ಹೀಗಾಗಿ ವಿಐಪಿ, ವಧುವರರಿಗೆಂದೇ ಮೀಸಲಾಗಿದ್ದ ಸ್ಥಳದಲ್ಲಿ ಓಡಾಟ ಮಾಡಲು ಅನುಮತಿ ಕೂಡ ಸಿಕ್ಕಿತ್ತು.

30 ಟಿಬಿ ಡೇಟಾ ರೆಕಾರ್ಡ್

30 ಟಿಬಿ ಡೇಟಾ ರೆಕಾರ್ಡ್

ವಿವೇಕ್ ಸಿಕ್ವೇರಾ ಅವರ ತಂಡ ಅದ್ದೂರಿ ಮದುವೆ ಸಮಾರಂಭದ ಸುಮಾರು 1.2 ಲಕ್ಷ ಫೋಟೋ, ವಿಡಿಯೋ ಸೇರಿ ಒಟ್ಟು 30 ಟಿಬಿ ಡೇಟಾ ರೆಕಾರ್ಡ್ ಮಾಡಿದೆ. ಈ ಎಲ್ಲಾ ಫೋಟೋ,ವಿಡಿಯೋ ವನ್ನು ಒಂದು ತಿಂಗಳ ಡೆಡ್ ಲೈನ್ ಒಳಗಡೆ ಅಂಬಾನಿ ಕುಟುಂಬಕ್ಕೆ ನೀಡಬೇಕಿದೆ.

ವಿವೇಕ್ ಜೊತೆ ಭಾರತದ ಇನ್ನೊಂದು ಫೋಟೋಗ್ರಾಫರ್ ತಂಡ ಅಷ್ಟೇ ಅಲ್ಲದೇ ಬ್ರಿಟನ್, ಇಟಲಿ ಇತರೆ ದೇಶಗಳ ಪ್ರಸಿದ್ಧ ಫೋಟೋಗ್ರಾಫರ್ ಗಳು ಅಂಬಾನಿ ಪುತ್ರಿಯ ವೈಭವದ ಮದುವೆಯನ್ನು ಕವರ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru's famous wedding photographer Vivek Sequeira captured over 1.2 lakh photos of Isha Ambani's wedding.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more