ಮುಕೇಶ್ ಅಂಬಾನಿ ಈಗ ಏಷ್ಯಾದಲ್ಲೇ ಶ್ರೀಮಂತ ನಂಬರ್ ಒನ್
ನವದೆಹಲಿ, ಜುಲೈ 13: ಮುಕೇಶ್ ಅಂಬಾನಿ ಮತ್ತೆ ಸುದ್ದಿಯಲ್ಲಿದ್ದಾರೆ. ಏಷ್ಯಾದ ಅತಿ ಶ್ರೀಮಂತ ವ್ಯಕ್ತಿಯಾಗಿ ಮುಕೇಶ್ ಅವರು ಈ ವರೆಗೆ ಆ ಸ್ಥಾನ ಅಲಂಕರಿಸಿದ್ದ ಅಲಿಬಾಬಾ ಸಮೂಹದ ಸ್ಥಾಪಕ ಜಾಕ್ ಮಾ ಅವರನ್ನು ಪಕ್ಕಕ್ಕೆ ಸರಿಸಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಮಾರುಕಟ್ಟೆಯಲ್ಲಿ ಏರಿಕೆ ಕಾಣುವ ಮೂಲಕ ಶುಭ ಶುಕ್ರವಾರದಂದು ಅಂಬಾನಿ ಅವರ ಅಂದಾಜು ಆಸ್ತಿ ಮೌಲ್ಯ 44.3 ಬಿಲಿಯನ್ ಅಮೆರಿಕನ್ ಡಾಲರ್ ತಲುಪಿದೆ.
ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಈ ವರೆಗೆ ಮೊದಲ ಸ್ಥಾನದಲ್ಲಿದ್ದ ಜಾಕ್ ಮಾ ಆಸ್ತಿ ಮೌಲ್ಯ 40 ಬಿಲಿಯನ್ ಅಮೆರಿಕನ್ ಡಾಲರ್. ಇದನ್ನು ಲೆಕ್ಕ ಹಾಕಿರುವುದು ಅಮೆರಿಕದಲ್ಲಿ ಷೇರು ಮಾರುಕಟ್ಟೆಯಲ್ಲಿ ಗುರುವಾರ ವ್ಯವಹಾರ ಕೊನೆಗೊಂಡ ಸಮಯಕ್ಕೆ.
ರಿಲಯನ್ಸ್ ಇಂಡಸ್ತ್ರೀಸ್ ನ ಪೆಟ್ರೋಕೆಮಿಕಲ್ಸ್ ಸಾಮರ್ಥ್ಯ ದುಪ್ಪಟ್ಟು ಆಗುವ ಮೂಲಕ ಮತ್ತು ರಿಲಯನ್ಸ್ ಜಿಯೋ ಇನ್ ಫೋಕಾಮ್ ಯಶಸ್ಸಿನ ಮೂಲಕ ಈ ವರ್ಷ 4 ಬಿಲಿಯನ್ ಅಮೆರಿಕನ್ ಡಾಲರ್ ಮುಕೇಶ್ ಅಂಬಾನಿ ಅವರ ಆಸ್ತಿಗೆ ಸೇರ್ಪಡೆಯಾಗಿದೆ.

ಅದಕ್ಕೆ ವಿರುದ್ಧವಾಗಿ ಈ ವರ್ಷದಲ್ಲಿ ಇ ಕಾಮರ್ಸ್ ಕಂಪೆನಿಗಳ ವಿರುದ್ಧದ ಪೈಪೋಟಿಯಲ್ಲಿ ಜಾಕ್ ಮಾ ಅವರ ಆಸ್ತಿ ಮೌಲ್ಯದಲ್ಲಿ 1.4 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟವಾಗಿದೆ.
ಅಂದಹಾಗೆ ಮುಂದಿನ ಏಳು ವರ್ಷಗಳಲ್ಲಿ ಅಂಬಾನಿ ಅವರು ಉದ್ಯಮ ವಿಸ್ತರಣೆ ಆಲೋಚನೆಗಳನ್ನು ಹೊಂದಿದ್ದಾರೆ. ದಶಕದ ನಂತರ ರಿಲಯನ್ಸ್ ಇಂಡಸ್ಟ್ರೀಸ್ 100 ಬಿಲಿಯನ್ ಅಮೆರಿಕನ್ ಡಾಲರ್ ಕ್ಲಬ್ ಗೆ ಮತ್ತೆ ಸೇರ್ಪಡೆಯಾಗಿದೆ.












Click it and Unblock the Notifications