Bengaluru Parking: ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್‌ನಲ್ಲಿ ಸ್ಮಾರ್ಟ್ ಪಾರ್ಕಿಂಗ್ ವೈಫಲ್ಯದ ಬಳಿಕ ಹೊಸ ಪಾರ್ಕಿಂಗ್ ವ್ಯವಸ್ಥೆ

ಬೆಂಗಳೂರು, ಏಪ್ರಿಲ್. 24: ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (CBD) ನಲ್ಲಿ ಸ್ಮಾರ್ಟ್ ಪಾರ್ಕಿಂಗ್ ವಿಫಲವಾದ ನಂತರ, ಮತ್ತೆ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳಿಗೆ ಈ ಹೊಸ ಬೆಳವಣಿಗೆಯ ಬಗ್ಗೆ ಮಾಹಿತಿಯೇ ಇಲ್ಲ ಎಂಬುದೇ ಅಚ್ಚರಿಯಾಗಿದೆ.

ನಗರದ ಪ್ರಮುಖ ರಸ್ತೆಗಳಾದ ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್, ಲ್ಯಾವೆಲ್ಲೆ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಂತಹ ಪ್ರಮುಖ ಪ್ರದೇಶಗಳನ್ನು ಒಳಗೊಂಡಿರುವ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (CBD) ಪ್ರದೇಶಕ್ಕೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಸಾಕಷ್ಟು ಪಾರ್ಕಿಂಗ್ ಸೇವೆಗಳಿಲ್ಲದಿದ್ದರೇ ಇಲ್ಲಿ ಜನ ಪರದಾಡುತ್ತಾರೆ. ಹೀಗಾಗಿ ಹಲವು ತಿಂಗಳುಗಳಿಂದ ಕೇಂದ್ರೀಯ ಪಾರ್ಕಿಂಗ್ ವ್ಯವಸ್ಥೆ (ಸಿಪಿಎಸ್) ನಡೆಸುತ್ತಿರುವ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತಿಲ್ಲ. ಈಗ ಹೊಸ ವ್ಯವಸ್ಥೆ ಜಾರಿಗೆ ತಂದಿದೆ.

After smart parking failure New parking system in Central Business District

ವರ್ಕ್ ಆಗದ ಸ್ಮಾರ್ಟ್ ಪಾರ್ಕಿಂಗ್

ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ (ಸಿಬಿಡಿ) ಆರು ವರ್ಷಗಳ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಬಳಿಕ, ಹಳೆಯ ಶೈಲಿಯಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆಯನ್ನು ಮತ್ತೆ ಪ್ರಾರಂಭಿಸಲಾಗಿದೆ. ಪಾರ್ಕಿಂಗ್ ಸ್ಥಳ ನಿರ್ವಾಹಕರು ಪ್ರತ್ಯೇಕವಾಗಿ ಸೀಮಿತ ಅವಧಿಗೆ ದ್ವಿಚಕ್ರ ವಾಹನಗಳಿಗೆ ಗಂಟೆಗೆ 15 ರೂ. ಮತ್ತು ಕಾರುಗಳಿಗೆ ಗಂಟೆಗೆ 30 ರೂಪಾಯಿ ವಿಧಿಸುತ್ತಿದ್ದಾರೆ.

'BBMP Pay and Park' ಎಂಬ ಹೆಸರಿನಲ್ಲಿ ಸೇವೆಗಳನ್ನು ನಿರ್ವಹಿಸಲಾಗುತ್ತಿದೆ. ಪಾರ್ಕಿಂಗ್ ಟಿಕೆಟ್‌ಗಳಲ್ಲಿಯೂ 'ಬಿಬಿಎಂಪಿ ಪೇ ಮತ್ತು ಪಾರ್ಕ್' ಎಂಬ ಹೆಸರಿದೆ. ಆದರೆ, ಬಿಬಿಎಂಪಿ ಅಧಿಕಾರಿಗಳಿಗೆ ಈ ಪರಿಸ್ಥಿತಿಯ ಅರಿವಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಬಿಬಿಎಂಪಿ ಪೂರ್ವದ ಇಂಜಿನಿಯರಿಂಗ್ ವಿಭಾಗ ಮತ್ತು ಟಿಇಸಿ ವಿಭಾಗವು ಯಾವುದೇ ಅನುಮತಿ ನೀಡಲು ನಿರಾಕರಿಸಿದೆ.

After smart parking failure New parking system in Central Business District

ಸ್ಮಾರ್ಟ್ ಪಾರ್ಕಿಂಗ್ ಸ್ಥಗಿತವಾಗಿದ್ದು ಏಕೆ?

ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಗುತ್ತಿಗೆದಾರರು ಬಿಬಿಎಂಪಿಗೆ ಬಾಕಿ ಪಾವತಿಸದ ಕಾರಣ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಸ್ಥಗಿತಗೊಂಡಿದೆ. "ನಾವು ಎಂಟು ರಸ್ತೆಗಳಲ್ಲಿ ಸೆಂಟ್ರಲ್ ಪಾರ್ಕಿಂಗ್ ಸಿಸ್ಟಮ್‌ಗೆ ಗುತ್ತಿಗೆ ನೀಡಿದ್ದೇವೆ. ಆದರೆ, ಕಳೆದ 1.5 ವರ್ಷಗಳಿಂದ ಅವರು ಯಾವುದೇ ಬಾಕಿ ಪಾವತಿಸಿಲ್ಲ. ಅಂದಾಜಿನ ಪ್ರಕಾರ, ಗುತ್ತಿಗೆದಾರನಿಗೆ ತಿಂಗಳಿಗೆ 6 ರಿಂದ 7 ಲಕ್ಷ ಬಾಕಿ ಇದೆ. ಪಾರ್ಕಿಂಗ್ ವ್ಯವಸ್ಥೆಯು ಅವರಿಗೆ ಯಾವುದೇ ಆದಾಯವನ್ನು ನೀಡುತ್ತಿಲ್ಲ, ಏಕೆಂದರೆ ಗುತ್ತಿಗೆದಾರನು 35 ಲಕ್ಷ ರೂಪಾಯಿಗಳನ್ನು ಭಾಗಶಃ ಪಾವತಿಸಿದ ಕಾರಣ ನಾವು ಒಪ್ಪಂದವನ್ನು ರದ್ದುಗೊಳಿಸಿಲ್ಲ" ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+