ಇಶಾ ಅಂಬಾನಿ ಪ್ರಿ ವೆಡ್ಡಿಂಗ್ ಪಾರ್ಟಿಗೆ ಬಂದ ಸೆಲೆಬ್ರಿಟಿಗಳು ಯಾರ್ಯಾರು?

ಜೋಧಪುರ, ಡಿಸೆಂಬರ್ 8: ಪ್ರತಿಷ್ಠಿತ ಉದ್ಯಮಿ ಮುಕೇಶ್ ಅಂಬಾನಿ ಅವರ ಮಗಳು ಇಶಾ ಅಂಬಾನಿ ಮತ್ತು ಆನಂದ್ ಪಿರಿಮಾಲ್‌ ಮದುವೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ.

ಜೋಧಪುರದಲ್ಲಿ ಇಶಾ ಅಂಬಾನಿ ಮತ್ತು ಅನಂದ್‌ ಪಿರಿಮಾಲ್‌ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ಇಂದಿನಿಂದ ಆರಂಭಗೊಂಡಿದೆ. ಡಿಸೆಂಬರ್ 12ಕ್ಕೆ ಮದುವೆ ಕಾರ್ಯ ನೆರವೇರಲಿದೆ.

ಪ್ರಿ ವೆಡ್ಡಿಂಗ್ ಪಾರ್ಟಿಗೆ ಬಾಲಿವುಡ್ ಖ್ಯಾತ ನಟಿ ವಿದ್ಯಾಬಾಲನ್, ಸಿದ್ಧಾರ್ಥ್ ರಾಯ್ ಕಪೂರ್, ಜಾನ್ ಅಬ್ರಹಮ್, ಪ್ರಿಯಾ, ಜಾವೇದ್ ಜಾಫರಿ ಈಗಾಗಲೇ ಉದಯಪುರಕ್ಕೆ ಆಗಮಿಸಿದ್ದಾರೆ. ಅಷ್ಟೇ ಅಲ್ಲದೆ ಭಾರತದ ಕ್ರಿಕೆಟ್ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್-ಅಂಜಿ ತೆಂಡೂಲ್ಕರ್, ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್,ಸಾಕ್ಷಿ ಸಿಂಗ್ ಧೋನಿ-ಪುತ್ರಿ ಝಿವಾ ಕೂಡ ಆಗಮಿಸಿದ್ದಾರೆ.

Isha Ambani Begins Pre-Wedding Celebrations

ಡಿಸೆಂಬರ್ 7 ರಿಂದ 10 ರವರೆಗೆ ಪ್ರಿ ವೆಡ್ಡಿಂಗ್ ಪಾರ್ಟಿ ನಡೆಯುತ್ತಿದ್ದು, ಬಾಲಿವುಡ್ ತಾರೆಗಳ ದಂಡೇ ಹರಿದುಬರುತ್ತಿದೆ. ಡಿಸೆಂಬರ್ 12 ರಂದು ಇಶಾ ಪಿರಾಮಿಲ್ ಗ್ರೂಪ್ ಆಫ್ ಕಂಪನಿ ಒಡೆಯ ಅಜಯ್ ಪಿರಾಮಿಲ್ ಪುತ್ರ ಆನಂದ್ ಜತೆಗೆ ಹಸೆಮಣೆ ಏರಲಿದ್ದಾರೆ. ಈ ಸಮಾರಂಭ ಮುಂಬೈಯಲ್ಲಿ ನಡೆಯಲಿದೆ.

ಇದಕ್ಕೂ ಮೊದಲು ನಡೆಯಲಿರುವ ಪ್ರಿ ವೆಡ್ಡಿಂಗ್ ಪಾರ್ಟಿಯಲ್ಲಿ ಮೂರು ದಿನ, ಮೂರು ಬಾರಿ ಸುಮಾರು 5000 ಕ್ಕೂ ಹೆಚ್ಚು ಮಂದಿಗೆ ಅನ್ನ ದಾನ ಕಾರ್ಯಕ್ರಮ ನಡೆಯಲಿದೆ ಎಂದು ಅಂಬಾನಿ ಕುಟುಂಬ ಮೂಲಗಳು ತಿಳಿಸಿವೆ. ಡಿಸೈನರ್ ಮನೀಶ್ ಮಲ್ಹೋತ್ರಾ ಈಗಾಗಲೇ ಇಲ್ಲಿ ಬೀಡುಬಿಟ್ಟಿದ್ದು, ಮದುಮಗಳು ಇಶಾ ವಸ್ತ್ರ ವಿನ್ಯಾಸ ಮಾಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+