5,000 ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಸೂಚನೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಅಕ್ಟೋಬರ್ 14:ಅರಣ್ಯ ಮತ್ತು ಪರಿಸರ ಇಲಾಖೆಯು ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಮರಗಿಡಗಳನ್ನು ಕಡಿಯಲು ಪರವಾನಗಿ ನೀಡಿದೆ. ಈಗಾಗಲೇ ಸುಮಾರು 4995 ಮರಗಳನ್ನು ಕಡಿಯಲು ಅನುಮತಿ ದೊರಕಿದ್ದು ನಿತ್ಯಹರಿದ್ವರ್ಣ ಕಾಡು ಬೋಳಾಗಲಿದೆ.,

ಸಕಲೇಶಪುರ, ಹಾಸನ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ 14 ಎಕರೆಯಷ್ಟು ಪ್ರದೇಶದಲ್ಲಿ ಈ ಮರಗಳು ಹರಡಿವೆ. ರಾಜ್ಯ ಸರಕಾರವು ನೀಡಿರುವ ಈ ಆದೇಶದ ಮೇರೆಗೆ 1,332 ಬಿದಿರಿನ ಮರಗಳನ್ನೂ ಕಡಿಯಲು ಅನುಮತಿ ಲಭ್ಯವಾಗಿದೆ. [ಎತ್ತಿನಹೊಳೆ ಯೋಜನೆ : ಸರ್ಕಾರದ ಸ್ಪಷ್ಟನೆಗಳು]

ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಕೋಲಾರ, ಚಿಕ್ಕಮಗಳೂರು, ಮತ್ತು ಬೆಂಗಳೂರಿಗೆ ಕುಡಿಯುವ ನೀರನ್ನು ಒದಗಿಸುವ ಕಾರಣದಿಂದ ವಿವಿಧ ಸಂಘ ಸಂಸ್ಥೆಗಳು ವಿರೋಧ ಹೇರುತ್ತಿದ್ದ ಹಿನ್ನಲೆಯಲ್ಲಿ ಮಂದಗತಿಯಲ್ಲಿ ಯೋಜನೆ ನಡೆಯುತ್ತಿದೆ.

Yettinahole river diversion Forest Department Permission to cut 5,000 trees

ಪರಿಸರ ಇಲಾಖೆಯ ಪೂರ್ವಭಾವಿ ಅನುಮೋದನೆಯನ್ನು ಪಡೆಯದೆ ಈ ಹಿಂದೆ ಮರಗಳನ್ನು ಕಡಿಯಲಾಗಿತ್ತು. ಈ ಹಿನ್ನಲೆಯಲ್ಲಿ ಮರಗಳನ್ನು ಕಡಿಯದಂತೆ ಅರ್ಜಿದಾರರು ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ಕೇಂದ್ರದಿಂದ ಮರಗಳನ್ನು ಕಡಿಯಲು ಅನುಮತಿ ದೊರೆತಿದೆ.

ಯಾವ ಗ್ರಾಮದಲ್ಲಿ ಎಷ್ಟು ಹಾನಿ?: ಹೆಗ್ಗದ್ದೆಯಲ್ಲಿ 569, ಕಾಡುಮನೆಯಲ್ಲಿ 3,102, ದೊಡ್ಡನಾಗರದಲ್ಲಿ 449, ನಾಡಳ್ಳಿಯಲ್ಲಿ 643, ಆಳುವಳ್ಳಿಯಲ್ಲಿ 107 ಹಾಗೂ ಕಡಗರಹಳ್ಳಿಯಲ್ಲಿ 125 ಮರಗಳು ನೆಲಕ್ಕುರಳಲಿವೆ.

ಇದಕ್ಕೆ ಪ್ರತಿಯಾಗಿ ಎಲ್ಲಿ ಸಸಿಗಳನ್ನು ನೆಟ್ಟು ಅರಣ್ಯವನ್ನು ಬೆಳಸಲಾಗುವುದು ಎಂಬುದು ಇನ್ನೂ ತಿಳಿದು ಬಂದಿಲ್ಲ. ಪರಿಸರಕ್ಕೆ ಹಾನಿಯಾಗುವ ಇಂಥ ಯೋಜನೆಯಿಂದ ವಿನಾಶದ ಅಂಚಿನಲ್ಲಿರುವ ಅನೇಕ ಜೀವಿಗಳು ನಾಶವಾಗುತ್ತವೆ ಎಂದು ಪರಿಸರವಾಗಿ ಕಿಶೋರ್ ಕುಮಾರ್ ಹೇಳಿದ್ದಾರೆ.

ಎತ್ತಿನಹೊಳೆ ತಿರುವು ಯೋಜನೆ ಮೂಲಕ ನೇತ್ರಾವತಿ ನದಿ ನೀರನ್ನು ಪಶ್ಚಿಮ ಘಟ್ಟದಿಂದ ಬಯಲುಸೀಮೆಗೆ ಹರಿಸಲಾಗುವುದು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಈ ಯೋಜನೆ ಅನಿವಾರ್ಯ ಎಂದು ಸರ್ಕಾರ ಸಮರ್ಥನೆ ನೀಡಿದೆ. ರಾಜ್ಯದ 7 ಜಿಲ್ಲೆಗಳ 28 ತಾಲ್ಲೂಕುಗಳ 68.5 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶ ಇದಾಗಿದೆ.

ಎತ್ತಿನಹೊಳೆ ಯೋಜನೆಗಾಗಿ ಕರ್ನಾಟಕ ಸರ್ಕಾರ 12,912.36 ಕೋಟಿ ರೂ. ಮೊತ್ತದ ಪರಿಷ್ಕೃತ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆಯನ್ನೂ ನೀಡಿದೆ. ಪ್ರಸ್ತುತ ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Yettinahole river diversion : The Forest Department has given permission to fell close to 5,000 trees (4,995 to be precise) in the Western Ghats to make way for the project which envisages to provide drinking water to the parched Kolar, Chikkaballapur and Bengaluru Rural districts.
Please Wait while comments are loading...