ಐಟಿ ದಾಳಿ: ಡಿಕೆಶಿ ಬೆಂಬಲಿಗರಿಂದ ಮಂಗ್ಳೂರು ಆದಾಯ ಕಚೇರಿಗೆ ಕಲ್ಲು

By: ಕಿರಣ್ ಸಿರ್ಸಿಕರ್
Subscribe to Oneindia Kannada

ಮಂಗಳೂರು, ಆಗಸ್ಟ್ 02 : ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ಆದಾಯ ತೆರಿಗೆ ದಾಳಿಯನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಮಂಗಳೂರು ಆದಾಯ ಕಚೇರಿ ಮೇಲೆ ಕಲ್ಲು ತೂರಿದ್ದಾರೆ.

'ಇವತ್ತು ಡಿಕೆ ಶಿವಕುಮಾರ್, ನಾಳೆ ಪೂಜಾರಿ, ನಾಡಿದ್ದು ಸೋನಿಯಾ ಗಾಂಧಿ'

ಡಿಕೆಶಿ ಅವರ ಮೇಲೆ ದಾಳಿಗೆ ಬಿಜೆಪಿಯ ಪಿತೂರಿ ಎಂದು ಆಕ್ರೋಶಗೊಂಡ ಯೂತ್ ಕಾಂಗ್ರೆಸ್,ನಗರದ ಅತ್ತಾವರದಲ್ಲಿರುವ ಆದಾಯ ಕಚೇರಿ ಮೇಲೆ ಕಲ್ಲು ತೂರಿ ಕಿಟಕಿ ಗ್ಲಾಸ್ ಗಳನ್ನು ಪುಡಿ-ಪುಡಿ ಮಾಡಿದರು.

ಬಳಿಕ ಕಚೇರಿ ಒಳಕ್ಕೆ ನುಗ್ಗಲು ಯತ್ನಿಸಿದ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ತಡೆದು ಹೊರಕ್ಕೆ ಕಳುಹಿಸಿದರು. ನಂತರ ಅಲ್ಲಿಂದ ತೆರಳಿದ ಪ್ರತಿಭಟನಾಕಾರರು, ಎದುರಿನ ರಸ್ತೆಯಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಡಿಕೆಶಿ ಮೇಲೆ ಐಟಿ ದಾಳಿ : 10 ಪ್ರಮುಖ ಬೆಳವಣಿಗೆಗಳು

IT raid on D K Shivakumar, Congress attacks on Mangaluru central revenue office
IT Shock To DK Shivakumar Close Astrology | Oneindia Kannada

ಇನ್ನು ಬೆಂಗಳೂರಿನ ಸದಾಶಿವ ನಗರದಲ್ಲಿರುವ ಡಿಕೆಶಿ ನಿವಾಸ ಎದುರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಪ್ರತಿಭಟನೆ ಮಾಡಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Angered by the income tax (I-T) raids on state energy minister D K Shivakumar, members of Youth Congress here on Wednesday August 2 attacked at the city's central revenue office at Attavar.
Please Wait while comments are loading...