ಜಿಟಿಡಿ ಇಂಗ್ಲಿಷ್ ಟೀಕಿಸಿದವರ ಮೇಲೆ ರಾಯರೆಡ್ಡಿ ಬೇಸರ
Recommended Video

ಕೊಪ್ಪಳ, ಜೂನ್ 26: ಉನ್ನತ ಶಿಕ್ಷಣ ಸಚಿವರಾದ ಜಿ.ಟಿ. ದೇವೇಗೌಡರು ಇಂಗ್ಲಿಷ್‌ನಲ್ಲಿ ಮಾತನಾಡುವ ಅಗತ್ಯವಿಲ್ಲ ಅವರು ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ಉನ್ನತ ಶಿಕ್ಷಣಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನವೇ ಅವರಿಗೆ ಇಂಗ್ಲಿಷ್‌ನಲ್ಲಿ ಮಾತನಾಡಲು ಬರುವುದಿಲ್ಲ ಎಂದು ಅಪಹಾಸ್ಯ ಮಾಡಿರುವ ಮಂದಿ ಸಾಕಷ್ಟು ಇದ್ದಾರೆ ಆದರೆ ನಾವೇನು ಇಂಗ್ಲಿಷರ ಗುಲಾಮರಲ್ಲ, ದೇವೇಗೌಡರಿಗೆ ಇಂಗ್ಲಿಷ್ ಬರೊಲ್ಲ ಎಂಬ ಕೆಲವರ ವಾದದಿಂದ ನನಗೆ ಬೇಜಾರಾಗಿದೆ ಎಂದರು.
ಜಿ.ಟಿ. ದೇವೆಗೌಡ ಅವರು ಬಟ್ಲರ್ ಇಂಗ್ಲೀಷ್ ಮಾತನಾಡಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಬಸವರಾಜ ರಾಯರೆಡ್ಡಿ ದೇವೇಗೌಡರು ಇಂಗ್ಲಿಷ್‌ನಲ್ಲಿ ಮಾತನಾಡಕೂಡದು. ಕನ್ನಡ ಮಾತನಾಡಿದರೆ ಕೀಳಿರಿಮೆ, ಇಂಗ್ಲಿಷ್ ಮಾತನಾಡಿದ್ರೆ ದೊಡ್ಡಸ್ತಿಕೆ ಎಂಬ ಭಾವ ತಪ್ಪು ಎಂದು ಹೇಳಿದರು.

ಕೊಟ್ಟಿರುವ ಖಾತೆ ಸಂವಿಧಾನತ್ಮಕವಾಗಿ ಸರಿ ಇದೆ, ನಾನು ಜಿ.ಟಿ.ದೇವೆಗೌಡರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ, ಖಾತೆ ಹೇಗೆ ನಿರ್ವಹಿಸುತ್ತಾರೆ ಅನ್ನೋದು ಮುಖ್ಯವೇ ಹೊರತು ಭಾಷೆ ಮುಖ್ಯವಲ್ಲ. ಅವರಿಗೆ ಕೊಟ್ಟಿರುವ ಖಾತೆ ಸಂವಿಧಾನತ್ಮಕವಾಗಿ ಸರಿ ಇದೆ. ನಮ್ಮ ಸಂವಿಧಾನದಲ್ಲಿ ಅನಕ್ಷರಸ್ಥರು ಕೂಡಾ ರಾಷ್ಟ್ರಪತಿ, ಪ್ರಧಾನಿ ಮುಖ್ಯಮಂತ್ರಿ ಆಗಲು ಅವಕಾಶವಿದೆ ಎಂದು ತಿಳಿಸಿದರು.












Click it and Unblock the Notifications