ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರದಲ್ಲಿ ಕೋಸ್ಟ್‌ಗಾರ್ಡ್ ಜಟ್ಟಿ ನಿರ್ಮಾಣಕ್ಕೆ ಒಪ್ಪಿಗೆ: 80 ಕೋಟಿ ರೂ. ವೆಚ್ಚ

By ಉತ್ತರ ಕನ್ನಡ ಪ್ರತಿನಿಧಿ
|
Google Oneindia Kannada News

ಕಾರವಾರ, ನವೆಂಬರ್‌23: ದೇಶದ ರಕ್ಷಣಾ ವ್ಯವಸ್ಥೆಗೆ ಸಹಕಾರಿಯಾಗಿರುವ ಮತ್ತು ರಾಜ್ಯದ ಕರಾವಳಿ ತೀರದ ರಕ್ಷಣೆಯಲ್ಲಿ ಕೋಸ್ಟ್ ಗಾರ್ಡ್ ಮಹತ್ವದ ಪಾತ್ರ ವಹಿಸುತ್ತದೆ. ಮುಂಬೈನಲ್ಲಿ ನಡೆದ ಉಗ್ರ ದಾಳಿಯ ಬಳಿಕವಂತೂ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸುವುದರ ಜೊತೆಗೆ ಮೀನುಗಾರರ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.‌

ಕಾರವಾರದಲ್ಲಿ ಸ್ಥಾಪಿತವಾಗಿರುವ ಕೋಸ್ಟ್ ಗಾರ್ಡ್‌ಗೆ ಈವರೆಗೂ ತನ್ನದೇ ಸ್ವಂತ ನೆಲೆ ಎಂಬುದು ಇರಲಿಲ್ಲ. ಆದರೆ ಇದೀಗ ಸರ್ಕಾರ ಜಟ್ಟಿ ನಿರ್ಮಾಣಕ್ಕೆ ಜಾಗ ಗುರುತು ಮಾಡಿದ್ದು, ಇದು ಕೋಸ್ಟ್ ಕಾರ್ಯಾಚರಣೆಗೆ ಮತ್ತಷ್ಟು ಸಹಕಾರಿಯಾಗುವ ಸಾಧ್ಯತೆ ಇದೆ.

ಇನ್ನೂ ಸಲ್ಲಿಕೆಯಾಗದ ಉ.ಕನ್ನಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಸ್ತಾವನೆ: ಸತ್ಯ ಬಯಲುಇನ್ನೂ ಸಲ್ಲಿಕೆಯಾಗದ ಉ.ಕನ್ನಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಸ್ತಾವನೆ: ಸತ್ಯ ಬಯಲು

ರಾಜ್ಯದ ಕರಾವಳಿ ತೀರದ ರಕ್ಷಣೆಯಲ್ಲಿ ಕೋಸ್ಟ್‌ಗಾರ್ಡ್ ಸಹ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕಳೆದ 2008ರಲ್ಲಿ ಮುಂಬೈನಲ್ಲಿ ನಡೆದಿದ್ದ ದಾಳಿಯಲ್ಲಿ ಉಗ್ರರು ಕಡಲಮಾರ್ಗದ ಮೂಲಕ ಒಳಗೆ ಸುಳಿದ್ದರು. ಈ ಕಾರಣದಿಂದಾಗಿ ಕಡಲತೀರ ಪ್ರದೇಶದಲ್ಲಿ ಭದ್ರತೆ ಕೈಗೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿ ಹೆಚ್ಚು ಪ್ರಾಮುಖ್ಯತೆ ಪಡೆದಿತ್ತು.

ವಾಣಿಜ್ಯ ಬಂದರಿನಲ್ಲೇ ಕೋಸ್ಟ್‌ಗಾರ್ಡ್ ಹಡಗು ನಿಲುಗಡೆ

ವಾಣಿಜ್ಯ ಬಂದರಿನಲ್ಲೇ ಕೋಸ್ಟ್‌ಗಾರ್ಡ್ ಹಡಗು ನಿಲುಗಡೆ

ದೇಶದ ಕರಾವಳಿ ತೀರದಲ್ಲಿ ಕಣ್ಗಾವಲಿಡಲು ಕರಾವಳಿ ತಟ ರಕ್ಷಣಾ ಪಡೆ ಸ್ಥಾಪನೆ ಮಾಡಿದ್ದು ದೇಶದ ಕರಾವಳಿಯುದ್ದಕ್ಕೂ ಭದ್ರತೆಯನ್ನು ನೋಡಿಕೊಳ್ಳುತ್ತಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಒಂದಾಗಿರುವ ಕಾರವಾರದಲ್ಲಿಯೂ ಸಹ ಕೋಸ್ಟ್‌ಗಾರ್ಡ್ ತನ್ನ ಕೇಂದ್ರವನ್ನು ಹೊಂದಿದ್ದು ನೌಕಾನೆಲೆಯಂತೆ ಕಾರ್ಯನಿರ್ವಹಿಸುತ್ತಿದೆ. ಆದರೆ ಇಷ್ಟು ವರ್ಷ ಕಳೆದರೂ ಸಹ ಕೋಸ್ಟ್‌ಗಾರ್ಡ್ ಹಡಗುಗಳನ್ನು ನಿಲ್ಲಿಸಲು ಸ್ವಂತ ಜಾಗವನ್ನು ಹೊಂದಿಲ್ಲ. ಸದ್ಯ ಕಾರವಾರದ ವಾಣಿಜ್ಯ ಬಂದರಿನಲ್ಲೇ ಬೋಟುಗಳನ್ನು ನಿಲ್ಲಿಸಲಾಗುತ್ತಿದೆ.

ಕೋಸ್ಟ್‌ಗಾರ್ಡ್ ಜಟ್ಟಿ ನಿರ್ಮಾಣಕ್ಕೆ ಸರ್ಕಾರ ಅಸ್ತು

ಕೋಸ್ಟ್‌ಗಾರ್ಡ್ ಜಟ್ಟಿ ನಿರ್ಮಾಣಕ್ಕೆ ಸರ್ಕಾರ ಅಸ್ತು

ಕೆಲವೊಮ್ಮೆ ವಾಣಿಜ್ಯ ಹಡಗುಗಳು ಆಗಮಿಸಿದ ಸಂದರ್ಭದಲ್ಲಿ ಬೋಟು ನಿಲ್ಲಿಸಲು ಕೋಸ್ಟ್‌ಗಾರ್ಡ್ ತೊಂದರೆ ಅನುಭವಿಸಬೇಕಾದ ಪ್ರಸಂಗಗಳು ನಡೆದಿದೆ. ಆದರೆ ಇದೆಲ್ಲವನ್ನು ಅರಿತ ಕೋಸ್ಟ್ ಗಾರ್ಡ್ ಕಾರವಾರ ಬಂದರು ಪ್ರದೇಶದ ಅಲೆತಡೆಗೋಡೆ ಬಳಿ ಖಾಲಿ ಜಾಗದಲ್ಲಿ ಪ್ರತ್ಯೇಕ ಜಟ್ಟಿ ನಿರ್ಮಿಸಿಕೊಳ್ಳಲು ಬೇಡಿಕೆ ಇಟ್ಟಿದ್ದು, ಇದೀಗ ಅನುಮತಿ ಕೂಡ ಸಿಕ್ಕಿದೆ. ಈಗಾಗಲೇ ಜಾಗದ ಪರಿಶೀಲನೆ ನಡೆಸಿರುವ ಕೋಸ್ಟ್ ಗಾರ್ಡ್ ಅಧಿಕಾರಿಗಳು ಅಲೆತಡೆಗೋಡೆಯ ಪಕ್ಕದ ಜಾಗಕ್ಕೆ ಹೊಂದಿಕೊಂಡು ಕೋಸ್ಟ್‌ಗಾರ್ಡ್ ಜಟ್ಟಿ ನಿರ್ಮಾಣ ಮಾಡಲಾಗುತ್ತದೆ ಎಂದು ಇಂಡಿಯನ್ ಕೋಸ್ಟ್‌ಗಾರ್ಡ್ ಕಮಾಂಡೆಂಡ್ ಮನೋಜ್ ಬಾಂದೇಕರ್ ಹೇಳಿದ್ದಾರೆ.

 80 ಕೋಟಿ ವೆಚ್ಚದಲ್ಲಿ ಜಟ್ಟಿ ಕಾಮಗಾರಿಗಳು

80 ಕೋಟಿ ವೆಚ್ಚದಲ್ಲಿ ಜಟ್ಟಿ ಕಾಮಗಾರಿಗಳು

ಸದ್ಯ ಬಂದರು ಪ್ರದೇಶದಲ್ಲೇ ಕೋಸ್ಟ್‌ಗಾರ್ಡ್ ಬೋಟುಗಳು ಲಂಗರು ಹಾಕುತ್ತಿವೆ. ಆದರೆ ಪ್ರತಿನಿತ್ಯ ವಾಣಿಜ್ಯ ಚಟುವಟಿಕೆಗಳಿಂದಾಗಿ ಕೋಸ್ಟ್ ಗಾರ್ಡ್ ಬೋಟು ನಿಲುಗಡೆಗೆ ಸಮಸ್ಯೆಯಾಗುತ್ತಿದ್ದು, ಪಕ್ಕದಲ್ಲೇ ಮೀನುಗಾರಿಕಾ ಬಂದರು ಸಹ ಇರುವುದರಿಂದಾಗಿ ಕೋಸ್ಟ್‌ಗಾರ್ಡ್ ಬೋಟುಗಳಿಗೆ ಲಂಗರು ಹಾಕುವುದೇ ದೊಡ್ಡ ಸಮಸ್ಯೆಯಾಗಿತ್ತು. ಇದೀಗ ಪ್ರತ್ಯೇಕ ಜಟ್ಟಿ ನಿರ್ಮಾಣವಾಗುವುದರಿಂದ ಸಾಕಷ್ಟು ಅನುಕೂಲವಾಗಲಿದ್ದು ಸುಮಾರು 80 ಕೋಟಿ ವೆಚ್ಚದಲ್ಲಿ ಜಟ್ಟಿ ಕಾಮಗಾರಿಗಳು ನಡೆಯಲಿವೆ.

 ಹೋವರ್ ಕ್ರಾಫ್ಟ್ ನಿಲುಗಡೆಯನ್ನೂ ಸಹ ವಾರ್ಗಾಯಿಸುವಂತೆ ಸ್ಥಳೀಯರ ಮನವಿ

ಹೋವರ್ ಕ್ರಾಫ್ಟ್ ನಿಲುಗಡೆಯನ್ನೂ ಸಹ ವಾರ್ಗಾಯಿಸುವಂತೆ ಸ್ಥಳೀಯರ ಮನವಿ

ಇನ್ನು ಕೋಸ್ಟ್‌ಗಾರ್ಡ್ ಪ್ರತ್ಯೇಕ ಜಟ್ಟಿ ನಿರ್ಮಾಣವನ್ನು ಸಾರ್ವಜನಿಕರು ಸಹ ಸ್ವಾಗತಿಸಿದ್ದಾರೆ. ಇದರೊಂದಿಗೆ ಟ್ಯಾಗೋರ್ ಕಡಲತೀರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಹೋವರ್ ಕ್ರಾಫ್ಟ್ ನಿಲುಗಡೆಯನ್ನೂ ಸಹ ಬ್ರೇಕ್ ವಾಟರ್ ಬಳಿಯೇ ವರ್ಗಾಯಿಸಿಕೊಳ್ಳುವಂತೆ ಸ್ಥಳೀಯರಾದ ಟಿಬಿ ಹರಿಕಾಂತ ಮನವಿ ಮಾಡಿದ್ದಾರೆ.

ಒಟ್ಟಾರೆ ಕರಾವಳಿ ತಟ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಕೋಸ್ಟ್‌ಗಾರ್ಡ್ ಬೋಟುಗಳ ನಿಲುಗಡೆಗೆ ಪ್ರತ್ಯೇಕ ಜಟ್ಟಿ ನಿರ್ಮಾಣಕ್ಕೆ ಸ್ಥಳಾವಕಾಶ ಸಿಕ್ಕಿರುವುದು ಉತ್ತಮವೇ. ಇದರೊಂದಿಗೆ ಹೋವರ್ ಕ್ರಾಫ್ಟ್ ನಿಲುಗಡೆಗೂ ಕಡಲತೀರದ ಜಾಗ ಪಡೆಯಲು ಕೋಸ್ಟ್‌ಗಾರ್ಡ್ ಪ್ರಯತ್ನಿಸುತ್ತಿದ್ದು ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

English summary
80 crore for the construction of Coast Guard Jatti at Karwar. The coast guard approved to construct a jetty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X