ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಾಮಪತ್ರ ವಾಪಸ್

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಏಪ್ರಿಲ್ 27 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು 13 ದಿನ ಬಾಕಿ ಇರುವಾಗ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯೊಂದು ಶುಕ್ರವಾರ ನಡೆದಿದೆ. ಕಳೆದ ಬಾರಿ ಮುಸ್ಲಿಂ ಸಮುದಾಯದ ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿತ್ತು ಜೆಡಿಎಸ್. ಈ ಬಾರಿ ಜೆಡಿಎಸ್ ನಿಂದ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿ ಸ್ಪಧೆಯಿಂದ ಹಿಂದೆ ಸರಿದಿದ್ದಾರೆ.

2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಇನಾಯತ್ ಉಲ್ಲಾ ಶಾಬಂದ್ರಿ ಕಣದಲ್ಲಿದ್ದರು. 27,435 ಮತಗಳನ್ನು ಪಡೆಯುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದರು. ಎಲ್ಲಕ್ಕಿಂತಲೂ ಮುಖ್ಯವಾಗಿ ಕಳೆದ ಬಾರಿ ಮುಸ್ಲಿಂ ಸಮುದಾಯದ ಪರಮೋಚ್ಚ ಸಂಸ್ಥೆ ತಂಜಿಂನ ಬೆಂಬಲದೊಂದಿದೆ ಸ್ವಧರ್ಮೀಯರ ಮತಗಳನ್ನು ಶಾಬಂದ್ರಿ ಪಡೆದಿದ್ದರು.

ಕೋಲಾರ : ಡಿಕೆ ರವಿ ತಾಯಿ ಗೌರಮ್ಮರಿಂದ ನಾಮಪತ್ರ ವಾಪಸ್ಕೋಲಾರ : ಡಿಕೆ ರವಿ ತಾಯಿ ಗೌರಮ್ಮರಿಂದ ನಾಮಪತ್ರ ವಾಪಸ್

ಆದರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಂಕಾಳ ವೈದ್ಯರ ಪ್ರಚಾರದ ಭರದಲ್ಲಿ ಶಾಬಂದ್ರಿ ದ್ವಿತೀಯ ಸ್ಥಾನಕ್ಕೆ ಇಳಿಯಬೇಕಾಯಿತು.

JDS candidate withdraw nomination in Karwar-Bhatkal constituency

ಕೊನೆ ಕ್ಷಣದಲ್ಲಿ ಅಭ್ಯರ್ಥಿ ಬದಲು
2013ರ ಚುನಾವಣೆಯಲ್ಲಿ ಸ್ಪರ್ಧಿಸಿದ ಇನಾಯತ್ ಉಲ್ಲಾ ಶಾಬಂದ್ರಿಯನ್ನೇ ಈ ಬಾರಿ ಜೆಡಿಎಸ್ ತನ್ನ ಅಭ್ಯರ್ಥಿ ಎಂದು ಘೋಷಿಸಿತ್ತು. ಅದಕ್ಕೂ ಮುನ್ನ ತನಗೆ ಟಿಕೆಟ್ ಬೇಡ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಯಾವುದಾದರೂ ಒಂದು ಸ್ಥಾನವನ್ನು ಕೊಟ್ಟರೆ ಸಾಕು ಎಂದು ಶಾಬಂದ್ರಿ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದರು.

ಆದರೆ, ಜೆಡಿಎಸ್ ಗೆ ಈ ಬಾರಿ ಶಾಬಂದ್ರಿಯ ಹೊರತಾಗಿ ಉತ್ತಮ ಅಭ್ಯರ್ಥಿ ಭಟ್ಕಳ ಕ್ಷೇತ್ರದಲ್ಲಿ ಸಿಕ್ಕಿರಲಿಲ್ಲ. ಹೀಗಾಗಿ ಅವರನ್ನೇ ಈ ಬಾರಿ ಅಭ್ಯರ್ಥಿಯನ್ನಾಗಿ ಜೆಡಿಎಸ್ ಘೋಷಿಸಿತ್ತು. ಇದರ ನಡುವೆ ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ತಾನು ಜೆಡಿಎಸ್ ನಿಂದ ಸ್ಪರ್ಧಿಸುವುದಾಗಿ ಸುದ್ದಿ ಹಬ್ಬಿಸಿದ್ದರು.

ಆದರೆ, ಅದನ್ನೂ ಅವರು ಹಿಂಪಡೆದಿದ್ದರು. ಬಳಿಕ ಜೆಡಿಎಸ್ ಅಧಿಕೃತವಾಗಿ ಸೈಯದ್ ಮಹ್ಮದ್ ಅಮ್ಜದ್ ಅವರಿಗೆ 'ಬಿ' ಫಾರ್ಮ್ ನೀಡಿ ಕಣಕ್ಕಿಳಿಸಿತ್ತು. ಅಮ್ಜದ್ ಕೂಡ ನಾಮಪತ್ರ ಸಲ್ಲಿಸಿ ಸ್ಪರ್ಧೆ ಬಯಸಿದ್ದರು. ಆದರೆ ನಾಮಪತ್ರವನ್ನು ಶುಕ್ರವಾರ ಹಿಂಪಡೆದಿದ್ದಾರೆ. ಇದು ಜೆಡಿಎಸ್ ಗೆ ಮುಖಭಂಗವಾದರೆ, ಕಾಂಗ್ರೆಸ್ ಗೆ ಪ್ಲಸ್ ಹಾಗೂ ಬಿಜೆಪಿಗೆ ಮೈನಸ್ ಅನ್ನಬಹುದಾಗಿದೆ.

ಕಾರಣ ಏನಿರಬಹುದು?
ಭಟ್ಕಳ ಕೋಮು ಸೂಕ್ಷ್ಮ ಪ್ರದೇಶ. ರಾಜ್ಯದಲ್ಲಿ ನಡೆದಿರುವ ಅತ್ಯಾಚಾರ, ಕೊಲೆ ಸೇರಿದಂತೆ ಮೋದಿ ಅಲೆಯಿಂದಾಗಿ ಈ ಬಾರಿ ಇಲ್ಲಿನ ಬಹುತೇಕ ಹಿಂದೂಗಳು ಬಿಜೆಪಿ ಬೆಂಬಲಿಸುತ್ತಿದ್ದಾರೆ. ಉದಾಹರಣೆಗೆ, ನಾಗೇಂದ್ರ ನಾಯ್ಕ ಜೆಡಿಎಸ್ ಟಿಕೆಟ್ ಪಡೆಯಲು ಹಿಂದೆ ಸರಿದಿದ್ದು.

ಶ್ರೀರಾಮ ಸೇನೆಯ ಜಯಂತ ನಾಯ್ಕ ಕೂಡ ಸಲ್ಲಿಸಿದ್ದ ನಾಮಪತ್ರವನ್ನು ವಾಪಸು ಪಡೆದಿದ್ದು, ಹಿಂದೂಗಳು ಬಿಜೆಪಿ ಬೆಂಬಲಿಸುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿವೆ. ಹೀಗಾಗಿ, ಮುಸ್ಲಿಂ ಮತಗಳು ತಂಜಿಂನ ನಿರ್ಣಯದಂತೆ ಸಾಮಾನ್ಯವಾಗಿ ಕಾಂಗ್ರೆಸ್ ಗೆ ಬೀಳುತ್ತಿದ್ದವು. ಈ ನಿರ್ಣಯದಿಂದ ರೋಸಿ ಹೋಗಿತ್ತು ಜೆಡಿಎಸ್. ತನಗೆ ಮುಸ್ಲಿಂ ಮತಗಳು ದೊರೆಯಲು ಸಾಧ್ಯವಿಲ್ಲವೆಂದು ಜೆಡಿಎಸ್ ಅಭ್ಯರ್ಥಿ ತನ್ನ ನಾಮಪತ್ರವನ್ನು ಭಟ್ಕಳದಲ್ಲಿ ವಾಪಸ್ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಅಂತಿಮವಾಗಿ ಕಣದಲ್ಲಿರುವವರು
ಅಂತಿಮವಾಗಿ ಭಟ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಮಂಕಾಳ ವೈದ್ಯ, ಬಿಜೆಪಿಯಿಂದ ಸುನೀಲ್ ಬಿ.ನಾಯ್ಕ, ಎಂಇಪಿಯಿಂದ ಗಫೂರ ಸಾಬ, ಪಕ್ಷೇತರರಾಗಿ ಅಬ್ದುಲ್ ರೆಹಮಾನ್, ಪ್ರಕಾಶ ಪಿಂಟೋ, ರಾಜೇಶ ನಾಯ್ಕ ಕಣದಲ್ಲಿದ್ದಾರೆ.

English summary
Karnataka Assembly Elections 2018: Syed Mohammad Amzad, JDS candidate from Karwar- Bhatkal constituency withdraw the nomination on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X