Gokarna: ಗೋಕರ್ಣ ಪ್ರವಾಸಕ್ಕೆ ಬಂದಿದ್ದ ವಿದೇಶಿ ಮಹಿಳೆ ದಿಢೀರ್ ನಾಪತ್ತೆ: ದೂರು ದಾಖಲು
ಕಾರವಾರ, ಫೆಬ್ರವರಿ 07: ಸಾಮಾನ್ಯವಾಗಿ ಗೋಕರ್ಣ ಪ್ರವಾಸಕ್ಕೆ ಪ್ರತಿನಿತ್ಯ ನೂರಾರು ವಿದೇಶಿಗರು ಆಗಮಿಸುತ್ತಾರೆ. ಹಲವಾರು ವಿದೇಶಿಗರು ವಾರ, ತಿಂಗಳುಗಟ್ಟಲೆ ಅಲ್ಲೇ ಇದ್ದು ಸಮುದ್ರ ತಟದಲ್ಲಿ ಸಮಯ ಕಳೆಯುತ್ತಾರೆ. ಇದೇ ರೀತಿ ಗೋಕರ್ಣ ಪ್ರವಾಸಕ್ಕೆ ಆಗಮಿಸಿದ್ದ ವಿದೇಶಿ ಮಹಿಳೆಯೊಬ್ಬರು ದಿಢೀರ್ ನಾಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಜಪಾನ್ ಮೂಲದ ಮಹಿಳೆಯೊಬ್ಬರು ಕುಮಟಾ ತಾಲೂಕಿನ ಗೋಕರ್ಣದಲ್ಲಿ ಏಕಾಏಕಿ ನಾಪತ್ತೆಯಾಗಿದ್ದಾರೆ. ಎಮಿ ಯಮಾಝಕಿ (40) ನಾಪತ್ತೆಯಾದ ಜಪಾನ್ ಮೂಲದ ಪ್ರವಾಸಿ ಎಂದು ಗುರುತಿಸಲಾಗಿದೆ.

ನಾಪತ್ತೆಯಾದ ಮಹಿಳೆ ಎಮಿ ಯಮಾಝಕಿ ಪತಿಯೊಂದಿಗೆ ಗೋಕರ್ಣ ಪ್ರವಾಸಕ್ಕೆ ಆಗಮಿಸಿದ್ದರು. ಈಕೆ ಫೆಬ್ರವರಿ 5ರಂದು ಗೋಕರ್ಣ ಬಂಗ್ಲೆಗುಡ್ಡೆ ನೇಚರ್ ಕಾಟೇಜ್‌ನಲ್ಲಿ ಪತಿ ಜೊತೆ ತಂಗಿದ್ದಳು. ಬೆಳಗ್ಗೆ 10:30ರ ವೇಳೆ ಕಾಟೇಜ್‌ನಿಂದ ಹೊರ ಹೋಗಿದ್ದರು. ಆದರೆ ಆ ಮಹಿಳೆ ಮರಳಿ ಕಾಟೇಜ್ಗೆ ಬಂದಿಲ್ಲ. ಪತಿಗೂ ಗೊತ್ತಿಲ್ಲದಂತೆ ದಿಢೀರ್ ಕಣ್ಮರೆಯಾಗಿದ್ದಾರೆ.
ಪತ್ನಿ ಎಮಿ ಯಮಾಝಕಿ ವಾಪಸ್ ಬಾರದ ಹಿನ್ನೆಲೆಯಲ್ಲಿ ಕಾಣೆಯಾದ ಮಹಿಳೆಯ ಪತಿ ದೈ ಯಮಾಝಕಿ ಗೋಕರ್ಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ವಿದೇಶಿ ಮಹಿಳೆ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿಕೊಂಡಿರುವ ಗೋಕರ್ಣ ಪೊಲೀಸರು ಪತಿ ದೈ ಯಮಾಝಕಿಯಿಂದ ಪಡೆದ ಪ್ರಾಥಮಿಕ ಮಾಹಿತಿ ಹಾಗೂ ಫೋಟೋ ಬಳಸಿಕೊಂಡು ಹುಡುಕಾಟ ಆರಂಭಿಸಿದ್ದಾರೆ.
ಮದುವೆಯಾದ ಒಂದೇ ತಿಂಗಳಿಗೆ ಬಿಟ್ಟಹೋದ ಪತ್ನಿ : ನ್ಯಾಷನಲ್ ಕಬ್ಬಡಿ ಆಟಗಾರ ಸಾವಿಗೆ ಶರಣು
ಚಿಕ್ಕಮಗಳೂರು: ಮದುವೆಯಾದ ಒಂದೇ ತಿಂಗಳಿಗೆ ಪತ್ನಿ ಬಿಟ್ಟಹೋದ ಹಿನ್ನೆಲೆಯಲ್ಲಿ ನ್ಯಾಷನಲ್ ಲೆವೆಲ್ ಕಬ್ಬಡಿ ಆಟಗಾರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದಲ್ಲಿ ನಡೆದಿದೆ. ವಿನೋದ್ ರಾಜ್ ಅರಸ್ ಮೃತ ದುರ್ದೈವಿ.
ತೇಗೂರು ಗ್ರಾಮದ ವಿನೋದ್ ರಾಜ್ ಅರಸ್ ಶುಕ್ರವಾರ ಆತ್ಮಹತ್ಯೆಗೆ ಯತ್ನ ನಡೆಸಿದ್ದರು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಂಗಳವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. 2023 ಡಿ.10 ರಂದು ವಿನೋದ್ ರಾಜ್ ಅರಸ್ ಮದುವೆಯಾಗಿದ್ದರು, ಡಿ.31ಕ್ಕೆ ಪತಿ ಬೇಡ ಎಂದು ಪತ್ನಿ ಬಿಟ್ಟು ಹೋಗಿದ್ದು, ಇವರು ಎರಡು ವರ್ಷದ ಪ್ರೀತಿಸಿ ವಿನೋದ್ ಮದುವೆಯಾಗಿದ್ದರು ಎನ್ನಲಾಗಿದೆ. ಡಿ.31ರಂದು ಇವರ ಪ್ರೇಮ ವಿವಾಹ ಮಹಿಳಾ ಪೊಲೀಸ್ ಠಾಣಾ ಮೆಟ್ಟೀಲೇರಿತ್ತು.












Click it and Unblock the Notifications