ಗೊಂದಲದ ನಡುವೆಯೇ ಔರಾದ್ ಅಭ್ಯರ್ಥಿ ಘೋಷಿಸಿದ ಯಡಿಯೂರಪ್ಪ!

Posted By: Gururaj
Subscribe to Oneindia Kannada

ಬೀದರ್, ಡಿಸೆಂಬರ್. 08 : ಬಂಡಾಯದ ಬಿಸಿಯ ನಡುವೆಯೇ ಬೀದರ್ ಜಿಲ್ಲೆಯ ಔರಾದ್‌ ಕ್ಷೇತ್ರದ ಅಭ್ಯರ್ಥಿಯನ್ನು ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಧನಾಜಿ ಜಾಧವ ಅವರು ಕ್ಷೇತ್ರದ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದರು.

ಔರಾದ್ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಭಿನ್ನಮತ ಸ್ಫೋಟ

ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆಯ 27ನೇ ದಿನ ಬೀದರ್‌ ಜಿಲ್ಲೆಯ ಔರಾದ್‌ನಲ್ಲಿ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ ಹಾಲಿ ಶಾಸಕ ಪ್ರಭು ಚವ್ಹಾಣ್ ಅವರು 2018ರ ಚುನಾವಣೆ ಅಭ್ಯರ್ಥಿ ಎಂದು ಘೋಷಣೆ ಮಾಡಿದರು.

ಔರಾದ್‌ನಲ್ಲಿ ನಡೆದ ಈ ಸಮಾವೇಶ ಹಲವು ಗೊಂದಲಗಳಿಗೂ ಕಾರಣವಾಯಿತು, ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಧನಾಜಿ ಜಾಧವ ಯಾತ್ರೆಯ ಸಮಾವೇಶಕ್ಕಾಗಿ ಪ್ರತ್ಯೇಕ ವೇದಿಕೆ ನಿರ್ಮಾಣ ಮಾಡಿದ್ದರು. ವೇದಿಕೆಗೆ ಧನಾಜಿ ಜಾಧವ ಆಗಮಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತೊಡಿಸಿದರು.

ಭಾಲ್ಕಿ ಅಭ್ಯರ್ಥಿ ಘೋಷಿಸಿದ ಯಡಿಯೂರಪ್ಪ : ಕಣ್ಣೀರಿಟ್ಟ ಡಿ.ಕೆ.ಸಿದ್ರಾಮ!

ಕೆಜೆಪಿ-ಬಿಜೆಪಿ ನಾಯಕರು ಎಂಬ ಪ್ರಶ್ನೆಯಿಂದಾಗಿ ಸಮಾವೇಶದಲ್ಲಿ ಗೊಂದಲ ಉಂಟಾಗಿತ್ತು. 'ಕೆಜೆಪಿ-ಬಿಜೆಪಿ ಎಂದು ಗೊಂದಲ ಸೃಷ್ಟಿ ಮಾಡುವವರನ್ನು ಪಕ್ಷದಿಂದ ಹೊರ ಹಾಕಲಾಗುತ್ತದೆ' ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ಔರಾದ್‌ನಲ್ಲಿ ಪರಿವರ್ತನಾ ಯಾತ್ರೆ

ಔರಾದ್‌ನಲ್ಲಿ ಪರಿವರ್ತನಾ ಯಾತ್ರೆ

ಶಾಸಕ ಪ್ರಭು ಚವ್ಹಾಣ್, ಬಿ.ಎಸ್.ಯಡಿಯೂರಪ್ಪ ಅಮರೇಶ್ವರ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಸಮಾವೇಶಕ್ಕೆ ಆಗಮಿಸದರು. ಹಿಂದೆ ಕೆಜೆಪಿಯಲ್ಲಿದ್ದ ಧನಾಜಿ ಜಾಧವ್ ಅವರು ವೇದಿಕೆಗೆ ಆಗಮಿಸಿದರು. ಆಗ ಕೆಲವು ಬಿಜೆಪಿ ಕಾರ್ಯಕರ್ತರು ಗದ್ದಲವೆಬ್ಬಿಸಿದರು. ಈ ಸಂದರ್ಭದಲ್ಲಿ ಬಿಜೆಪಿ-ಕೆಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಯಡಿಯೂರಪ್ಪ ಅವರು ಹೇಳಿದ್ದೇನು?

ಯಡಿಯೂರಪ್ಪ ಅವರು ಹೇಳಿದ್ದೇನು?

‘ಕೆಜೆಪಿ-ಬಿಜೆಪಿ ಎಂದು ಗೊಂದಲ ಎಬ್ಬಿಸಿದರೆ ಪಕ್ಷದಿಂದ ಹೊರಹಾಕುವುದಾಗಿ' ಯಡಿಯೂರಪ್ಪ ಎಚ್ಚರಿಕೆ ನೀಡಿದರು. ‘ಎಲ್ಲರೂ ಒಂದಾಗಿ ಕೆಲಸ ಮಾಡಿ, ರಾಜ್ಯದಲ್ಲಿ ಮುಂದೆ ನಮ್ಮ ಸರ್ಕಾರ ಬರಲಿದೆ. ನೀವು ಏಕೆ ಹೀಗೆ ಕಿತ್ತಾಡಿಕೊಳ್ಳುತ್ತೀರಿ?' ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ಅಭ್ಯರ್ಥಿ ಘೋಷಣೆ ಮಾಡಿದ ಯಡಿಯೂರಪ್ಪ

ಅಭ್ಯರ್ಥಿ ಘೋಷಣೆ ಮಾಡಿದ ಯಡಿಯೂರಪ್ಪ

ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ 'ಶಾಸಕ ಪ್ರಭು ಚೌವ್ಹಾಣ್ ಅವರು ನಮ್ಮ ಪಕ್ಷದ ಮುಂದಿನ ವಿಧಾನಸಭೆ ಚುನಾವಣೆ ಅಭ್ಯರ್ಥಿ' ಎಂದು ಘೋಷಣೆ ಮಾಡಿದರು.

ಕ್ಷೇತ್ರದ 2013ರ ಫಲಿತಾಂಶ

ಕ್ಷೇತ್ರದ 2013ರ ಫಲಿತಾಂಶ

2013ರಲ್ಲಿ ಕ್ಷೇತ್ರದಲ್ಲಿ ಬಿಜೆಪಿ-ಕೆಜೆಪಿ ಮತ ವಿಂಗಡನೆಯಾಗಿತ್ತು. ಪ್ರಭು ಬಿ.ಚವ್ಹಾಣ್ 61,826 ಮತಗಳನ್ನು ಪಡೆದು ಜಯಗಳಿಸಿದ್ದರು. ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಧನಾಜಿ ಜಾಧವ್ 38,635 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಗಾಯಕವಾಡ್ ವಿಜಯಕುಮಾರ್ 15,456 ಮತ ಪಡೆದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a 27th day of Nava Karnataka Parivarthana Yatra Aurad, Bidar district BJP state president B.S.Yeddyurappa announced sitting MLA Prabhu Chavan as candidate for Aurad assembly constituency for 2018 elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ