ಈ ಸಲ ಟಾಪರ್ಸ್ ಲಿಸ್ಟ್ ಪ್ರಕಟಿಸದಿರಲು ನಿರ್ಧಾರ: ತನ್ವೀರ್ ಸೇಠ್

Posted By:
Subscribe to Oneindia Kannada

ಬೆಂಗಳೂರು, ಮೇ 11: ದ್ವಿತೀಯ ಪಿಯುಸಿ ಫಲಿತಾಂಶದ ಬಗ್ಗೆ ತಿಳಿಸುವ ವೇಳೆ ಸಚಿವ ತನ್ವೀರ್ ಸೇಠ್ ಹೇಳಿರುವ ಪ್ರಮುಖ ಅಂಶಗಳ ವಿವರ ಇಂತಿದೆ.[ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ, ಈಗ ಲಭ್ಯ]

Second PUC result 2017: Highlight points by minister Tanveer Sait

* ಈ ಬಾರಿ ಟಾಪರ್ಸ್ ಲಿಸ್ಟ್ ಪ್ರಕಟಿಸುತ್ತಿಲ್ಲ. ಸರ್ಕಾರಿ ಆದೇಶದ ಪ್ರಕಾರ ಈ ನಿರ್ಧಾರ ಕೈಗೊಂಡಿದ್ದೇವೆ.
* ಖಾಸಗಿ ಕಾಲೇಜುಗಳು ಟಾಪರ್ಸ್ ಲಿಸ್ಟ್ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ
* ಹಳೆಯ ಅನುಭವಗಳಿಂದ ಪಾಠ ಕಲಿತಿದ್ದೇವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಿದ್ದೆವು
* ಜಿಲ್ಲಾ ಖಜಾನೆಗಳನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದೇವೆ[ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ: ಸೃಜನಾ, ರಾಧಿಕಾ ಟಾಪರ್ಸ್]
* ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯಲ್ಲ. ಕೇವಲ ಚೇಷ್ಟೆ. ವಾಟ್ಸಾಪ್ ನಲ್ಲಿ ಕೆಲವು ಪುಟ ಸೋರಿಕೆಯಾಗಿತ್ತು
* ಈ ಬಾರಿ 48 ಜನ ಡಿಬಾರ್ ಆಗಿದ್ದಾರೆ. 8 ಜನ ಪ್ರಶ್ನೆ ಪತ್ರಿಕೆ ಮನೆಗೆ ಕೊಂಡೊಯ್ದಿದ್ದಾರೆ
* ಫಲಿತಾಂಶ ಹೆಚ್ಚಿಸಲು, ಸರಕಾರಿ ಶಾಲೆ ಉಳಿಸಿಕೊಳ್ಳಲು ಕ್ರಮ
* ಮೂಲ ಸೌಕರ್ಯ ಅಭಿವೃದ್ಧಿ, ಸಮಯಕ್ಕೆ ಸರಿಯಾಗಿ ಪಠ್ಯ ಪುಸ್ತಕಗಳನ್ನು ಕೊಡುವುದು, ಉಪನ್ಯಾಸಕರಿಗೆ ತರಬೇತಿ, ಎಲ್ಲ ಕಾಲೇಜುಗಳಿಗೆ ಲ್ಯಾಬ್ ಕೊಡಲು ಸರಕಾರದ ಕ್ರಮ
* ಫಲಿತಾಂಶ ಹೆಚ್ಚಿಸಲು, ಸರಕಾರಿ ಶಾಲೆ ಉಳಿಸಿಕೊಳ್ಳಲು ಕ್ರಮ[ಜಿಲ್ಲಾವಾರು ಫಲಿತಾಂಶ: ಉಡುಪಿ ಫಸ್ಟ್ , ಬೀದರ್ ಲಾಸ್ಟ್]
* ಕರ್ನಾಟಕ ಸೆಕ್ಯುರ್ ಎಡುಲೇಷನ್ ಸಿಸ್ಟಮ್ ಮಾಡಿದ್ದೇವೆ. ಕ್ಯಾಮೆರಾಗಳನ್ನು ಅಳವಡಿದ್ದೇವೆ. ಸೂಪರ್‌ವೈಸರ್ ಗಳನ್ನು ಬದಲಾಯಿಸಿದ್ದೇವೆ. ಹೀಗಾಗಿ ಕಳೆದ ಆರು ವರ್ಷಗಳಲ್ಲಿ ಕನಿಷ್ಟ ಫಲಿತಾಂಶ ಬಂದಿದೆ. ಆದರೆ ಇದು ನೈಜ ಫಲಿತಾಂಶ.
* ಶೂನ್ಯ ಫಲಿತಾಂಶದ ಶಾಲೆಗಳನ್ನು ಮುಚ್ಚುವುದು ಸುಲಭವಲ್ಲ
* ಸಾಮಾನ್ಯರನ್ನು ಮೀರಿಸಿದ ದೃಷ್ಟಿ ಮಾಂದ್ಯರು. ಸರಾಸರಿಗಿಂತ ಹೆಚ್ಚಿನ ಫಲಿತಾಂಶ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Here are the highlight points brief to media by education minister Tanveer Sait at the time of Second PUC result announcement.
Please Wait while comments are loading...