2nd PUC Results: ಧಾರವಾಡ ಜಿಲ್ಲೆಯ ವಿದ್ಯಾಲಕ್ಷ್ಮೀ 597 ಅಂಕ ಪಡೆದು ರಾಜ್ಯಕ್ಕೆ ಪ್ರಥಮ: ಮಾಹಿತಿ
ಹುಬ್ಬಳ್ಳಿ, ಏಪ್ರಿಲ್ 10: ದ್ವಿತೀಯ ಪಿಯುಸಿ ಫಲಿತಾಂಶ ಹೊರ ಬಿದ್ದಿದ್ದು, ವಿದ್ಯಾಕಾಶಿ ಧಾರವಾಡ ಜಿಲ್ಲೆಯು ಕಳೆದ ಬಾರಿಗಿಂತ ಈ ಬಾರಿ ಉತ್ತಮ ಸಾಧನೆ ಮಾಡಿದೆ. ರಾಜ್ಯಕ್ಕೆ 23ನೇ ಸ್ಥಾನ ಪಡೆಯುವ ಮೂಲಕ ಶೈಕ್ಷಣಿಕ ರಂಗದಲ್ಲಿ ಪ್ರಗತಿ ಸಾಧಿಸಿದೆ.
ದ್ವಿತೀಯ ಪಿಯುಸಿ ಫಲಿತಾಂಶ ವಿಚಾರದಲ್ಲಿ ಕಳೆದ ಬಾರಿ ಶೇ. 73 ರಷ್ಟು ಫಲಿತಾಂಶ ಪಡೆದಿತ್ತು 27ನೇ ಸ್ಥಾನಕ್ಕೆ ಕುಸಿದಿತ್ತು. ಈ ವರ್ಷ ಇದೇ ಧಾರವಾಡವು ಫಲಿತಾಂಶದಲ್ಲಿ ಶೇಕಡಾ 80ರಷ್ಟು ಫಲಿತಾಂಶ ಗಿಟ್ಟಿಸಿಕೊಂಡು 23ನೇ ಸ್ಥಾನಕ್ಕೆ ಭಾಜನವಾಗಿದೆ.

ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯ ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿನಿ ವಿದ್ಯಾಲಕ್ಷ್ಮೀ ಅವರು 600 ಅಂಕಿಗಳಿಗೆ 598 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಕಲಾ ವಿಭಾಗದಲ್ಲಿ ಧಾರವಾಡ ಕೆ.ಇ. ಬೋರ್ಡ್ ಕಾಲೇಜಿನ ವಿದ್ಯಾರ್ಥಿನಿ 'ರವಿನಾ ಲಮಾಣಿ' 595 ಅಂಕ ಪಡೆದು ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದಿದ್ದಾರೆ.
ಜಿಲ್ಲಾವಾರು ಸ್ಥಾನಗಳ ಮಾಹಿತಿ
ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ವಿದ್ಯಾಲಕ್ಷ್ಮಿ598 ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ದಕ್ಷಿಣ ಕನ್ನಡ (97.37%) ಪ್ರಥಮ, ಉಡುಪಿ (96.80%) ದ್ವಿತೀಯ, ವಿಜಯಪುರ (94.89%) ತೃತೀಯ, ಗದಗ (72.86%) ಜಿಲ್ಲೆಗೆ ಕೊನೆಯ ಸ್ಥಾನ ಪಡೆದಿದೆ.
ಟಾಪರ್‌ಗಳ ಪಟ್ಟಿ ಇಲ್ಲಿದೆ
ವಿಜ್ಞಾನ ವಿಭಾಗದಲ್ಲಿ ಹುಬ್ಬಳ್ಳಿಯ ವಿದ್ಯಾಲಕ್ಷ್ಮೀ 600ಕ್ಕೆ 598 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಪಿಯುಸಿ ಕಲಾ ವಿಭಾಗದಲ್ಲಿ ಇಬ್ಬರು ಟಾಪರ್ಗಳಾಗಿದ್ದಾರೆ. ಕಲಾ ವಿಭಾಗದಲ್ಲಿ ಮೇಧಾ ಡಿ. ಟಾಪರ್ 600ಕ್ಕೆ 596 ಅಂಕಗಳನ್ನು ಪಡೆದರೆ, ವಿಜಯಪುರದ ವೇದಾಂತ್ ಕೂಡ 600ಕ್ಕೆ 596 ಅಂಕ ಗಳಿಸಿದ್ದಾರೆ.

ಪರೀಕ್ಷೆ ಬರೆದಿದ್ದ 6.98 ಲಕ್ಷ ವಿದ್ಯಾರ್ಥಿಗಳು
ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ಜ್ಞಾನವಿ 600ಕ್ಕೆ 597 ಅಂಕ ಪಡೆದು ಟಾಪರ್ ಆಗಿದ್ದಾರೆ. 2024 ರ ದ್ವಿತೀಯ ಪಿಯು ಪರೀಕ್ಷೆಗೆ 3.3 ಲಕ್ಷ ಹುಡುಗರು ಮತ್ತು 3.6 ಲಕ್ಷ ಹುಡುಗಿಯರು ಹಾಜರಾಗಿದ್ದರು. ರಾಜ್ಯದಾದ್ಯಂತ 1,124 ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಗೆ ಒಟ್ಟು 6.98 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಶಿಕ್ಷಣ ಇಲಾಖೆ ಫಲಿತಾಂಶ ಪ್ರಕಟಿಸಿದೆ. ವಿದ್ಯಾರ್ಥಿಗಳು ನೀವು ನಿಮ್ಮ ಫಲಿತಾಂಶವನ್ನು ಶಿಕ್ಷಣ ಇಲಾಖೆಯ ಈ ಅಧಿಕೃತ ಜಾಲತಾಣದಲ್ಲಿ https://karresults.nic.in/ ನೋಡಬಹುದು.












Click it and Unblock the Notifications