Get Updates
Get notified of breaking news, exclusive insights, and must-see stories!

ದ್ವಿತೀಯ ಪಿಯು ಪರೀಕ್ಷೆ; ಸಹ ಮುಖ್ಯ ಅಧೀಕ್ಷಕರ ಕರ್ತವ್ಯಗಳು

ಬೆಂಗಳೂರು, ಫೆಬ್ರವರಿ 27; ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮಾರ್ಚ್ 1 ರಿಂದ ಮಾರ್ಚ್ 22ರ ತನಕ ಪರೀಕ್ಷೆ 1,124 ಕೇಂದ್ರಗಳಲ್ಲಿ ನಡೆಯಲಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಅಧ್ಯಕ್ಷರು ಪರೀಕ್ಷೆಯ ಹಿನ್ನಲೆಯಲ್ಲಿ ಸಹ ಮುಖ್ಯ ಅಧೀಕ್ಷಕರು ನಿರ್ವಹಿಸಬೇಕಾದ ಕರ್ತವ್ಯಗಳ ಮಾಹಿತಿ ನೀಡಿದ್ದಾರೆ. ಪರೀಕ್ಷೆ ಕುರಿತು ಹೊರಡಿಸಿರುವ ಸುತ್ತೋಲೆಯನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.

2nd PUC Exam From March 1 Role And Responsibilities Of Chief Superintendent

ಸಹ ಮುಖ್ಯ ಅಧೀಕ್ಷಕರ ಕರ್ತವ್ಯಗಳು

* 2024ರ ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರನ್ನು ಸಹ ಮುಖ್ಯ ಅಧೀಕ್ಷಕರನ್ನಾಗಿ ಮಂಡಲಿಯಿಂದ ನೇಮಕ ಮಾಡಲಾಗುವುದು.

* ಸಹ ಮುಖ್ಯ ಅಧೀಕ್ಷಕರು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಿಗೆ ಎಲ್ಲಾ ಪರೀಕ್ಷಾ ಕಾರ್ಯಗಳಿಗೆ ಪೂರ್ಣ ಸಹಕಾರವನ್ನು ನೀಡುವುದು ಹಾಗೂ ಪರೀಕ್ಷಾ ಕಾರ್ಯಗಳಲ್ಲಿ ಮುಖ್ಯ ಅಧೀಕ್ಷಕರು ಹಾಗೂ ಸಹ ಮುಖ್ಯ ಅಧೀಕ್ಷಕರು ಜಂಟಿಯಾಗಿ ಸಮಾನ ಹೊಣೆಗಾರರಾಗಿರುತ್ತಾರೆ.

* ಯಾವುದಾದರೂ ಪರೀಕ್ಷಾ ಕೇಂದ್ರಕ್ಕೆ ಮಂಡಲಿಯಿಂದ ನೇಮಕಾತಿಗೊಂಡಿರುವ ಸಹ ಮುಖ್ಯ ಅಧೀಕ್ಷಕರು ಕಾರಣಾಂತರಗಳಿಂದ ಕರ್ತವ್ಯಕ್ಕೆ ಹಾಜರಾಗದಿದ್ದ ಪಕ್ಷದಲ್ಲಿ ಕೇಂದ್ರದ ಮುಖ್ಯ ಅಧೀಕ್ಷಕರು ಕೂಡಲೇ ಜಿಲ್ಲಾ ಉಪನಿರ್ದೇಶಕರನ್ನು ಸಂಪರ್ಕಿಸಿ ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು.

* ಸಹ ಮುಖ್ಯ ಅಧೀಕ್ಷಕರಾಗಿ ನೇಮಕಗೊಂಡವರು ಪರೀಕ್ಷೆ ನಡೆಯುವ ಎಲ್ಲಾ ದಿನಗಳಲ್ಲಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರುವುದು. ಸಹ ಮುಖ್ಯ ಅಧೀಕ್ಷಕರು ಪ್ರಶ್ನೆ ಪತ್ರಿಕೆ ಬಾಕ್ಸ್‌ಗಳನ್ನು ಸ್ವೀಕರಿಸಿದ ನಂತರ ಪ್ರಶ್ನೆ ಪತ್ರಿಕೆಗಳು ಆಯಾ ದಿನದ ವಿಷಯಕ್ಕೆ ಸಂಬಂಧಿಸಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.

* ಪರೀಕ್ಷಾ ಕೇಂದ್ರಗಳಲ್ಲಿ ಮಂಡಲಿಯ ನಿರ್ದೇಶನದಂತೆ ಸಿ.ಸಿ.ಟಿ.ವಿ ಗಳನ್ನು ಕಡ್ಡಾಯವಾಗಿ ಅಳವಡಿಸಿದ್ದಾರೆಯೇ? ಹಾಗೂ ಅವುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೆ? ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳುವುದು.

* ಪರೀಕ್ಷಾ ಕೇಂದ್ರಗಳಲ್ಲಿ/ಬ್ಲಾಕ್‌ಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸೂಕ್ತವಾದ ಪೀಠೋಪಕರಣಗಳ ವ್ಯವಸ್ಥೆ ಮಾಡಿಸುವುದು.

* ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಯನ್ನು ಕೊಠಡಿಗಳಲ್ಲಿ ಮುಂಚಿತವಾಗಿ ನಮೂದಿಸಲು ಹಾಗೂ ಪೂರ್ವಸಿದ್ಧತೆಗಾಗಿ ಉಪನ್ಯಾಸಕರು ಮತ್ತು ಸಿಬ್ಬಂದಿಯವರನ್ನು ಕಡ್ಡಾಯವಾಗಿ ಬಳಸಿಕೊಳ್ಳುವುದು ಹಾಗೂ ಪರೀಕ್ಷಾ ಕಾರ್ಯದಲ್ಲಿ ಭಾಗಿಯಾಗುವವರೆಲ್ಲರೂ ಗುರುತು ಚೀಟಿಯನ್ನು ಕಡ್ಡಾಯವಾಗಿ ಧರಿಸಿರಬೇಕು.

* ಕೊಠಡಿ ಮೇಲ್ವಿಚಾರಕರುಗಳನ್ನು ನೇಮಿಸಿಕೊಳ್ಳುವಾಗ ಆಯಾ ದಿನದ ಪರೀಕ್ಷಾ ವಿಷಯಕ್ಕೆ ಸಂಬಂಧಪಡದ ಉಪನ್ಯಾಸಕರನ್ನು ಮಾತ್ರ ನೇಮಿಸಿಕೊಳ್ಳಲು ಕ್ರಮ ವಹಿಸುವುದು.

* ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳಾಗಲಿ, ಸಿಬ್ಬಂದಿಯವರಾಗಲಿ ಮೊಬೈಲ್ ಫೋನ್‌ಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸುವುದು.

* ಪ್ರಶ್ನೆಪತ್ರಿಕೆ ಬಂಡಲುಗಳನ್ನು ಪರೀಕ್ಷೆ ಪ್ರಾರಂಭವಾಗುವ ಮುಂಚಿತವಾಗಿ ಅಂದರೆ ಬೆಳಿಗ್ಗೆ 9.45ಕ್ಕೆ ಮುಖ್ಯ ಅಧೀಕ್ಷಕರು, ವಿಶೇಷ ಜಾಗೃತದಳದ ಸದಸ್ಯರು ಹಾಗೂ ಕಛೇರಿ ಅಧೀಕ್ಷಕರ ಸಹಕಾರದೊಂದಿಗೆ ತೆರೆಯುವುದು.

* ಸರಬರಾಜು ಮಾಡಲಾದ ಪ್ರಶ್ನೆ ಪತ್ರಿಕೆಗಳ ಸೀಲು ಮಾಡಿದ ಲಕೋಟೆಗಳನ್ನು ಮುಖ್ಯ ಅಧೀಕ್ಷಕರ ಸಹಕಾರದೊಂದಿಗೆ ಕೊಠಡಿ ಮೇಲ್ವಿಚಾರಕರಿಗೆ ವಿತರಣೆ ಮಾಡುವುದು. ಹೆಚ್ಚುವರಿ ಬ್ಲಾಕ್‌ಗಳಿದ್ದಲ್ಲಿ ಬ್ಲಾಕ್ ಅಧೀಕ್ಷಕರುಗಳ ಸಹಕಾರವನ್ನು ಪಡೆಯುವುದು.

* ಕೊಠಡಿ ಮೇಲ್ವಿಚಾರಕರಿಗೆ 'ರೂಮ್ ಅಲಾಟ್‌ಮೆಂಟ್' ಅನ್ನು ಲಾಟರಿ ಮೂಲಕ ನಿರ್ಧರಿಸಿ, ಒಂದು ರಿಜಿಸ್ಟರಿನಲ್ಲಿ ದಾಖಲಿಸುವುದು.

* ಪ್ರಶ್ನೆ ಪತ್ರಿಕೆಗಳ ಸುರಕ್ಷತೆಯು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಮತ್ತು ಸಹ ಮುಖ್ಯ ಅಧೀಕ್ಷಕರು ಇಬ್ಬರದ್ದು ಸಮಾನ ಹೊಣೆಗಾರಿಕೆಯಾಗಿದ್ದು, ಬೆಳಗಿನ ಅವಧಿಯಲ್ಲಿ 10.05 ನಿಮಿಷಕ್ಕೆ ಕೊಠಡಿ ಮೇಲ್ವಿಚಾರಕರಿಗೆ ಸೀಲ್ ಮಾಡಿರುವ ಪ್ರಶ್ನೆಪತ್ರಿಕೆ ಲಕೋಟೆಗಳನ್ನು ವಿತರಿಸುವುದು.

* ಪ್ರತಿದಿನದ ಪರೀಕ್ಷೆಗೆ ನೋಂದಾಯಿಸಲ್ಪಟ್ಟ ಅಭ್ಯರ್ಥಿಗಳು ನಿಗದಿತ ಸ್ಥಳದಲ್ಲಿಯೇ ಪರೀಕ್ಷೆಯನ್ನು ಬರೆಯುವಂತೆ ನೋಡಿಕೊಳ್ಳುವುದು.

* ಕೊಠಡಿ ಮೇಲ್ವಿಚಾರಕರಿಂದ ಉತ್ತರ ಪತ್ರಿಕೆಗಳನ್ನು ಸ್ವೀಕರಿಸುವಾಗ ಹಾಗೂ ಆಯಾ ಲಕೋಟೆಯಲ್ಲಿಡುವ ಮುಂಚೆ ಪ್ರತಿಯೊಬ್ಬ ಅಭ್ಯರ್ಥಿಯ ನೋಂದಣಿ ಸಂಖ್ಯೆ ಮತ್ತು ಉತ್ತರ ಪತ್ರಿಕೆಯ ಕ್ರಮ ಸಂಖ್ಯೆಯನ್ನು ಕೊಠಡಿ ಮೇಲ್ವಿಚಾರಕರ ದಿನಚರಿಯೊಂದಿಗೆ ಪರಿಶೀಲಿಸುವುದು.

* ಉತ್ತರ ಪತ್ರಿಕೆ ಬಂಡಲುಗಳನ್ನು ಮೌಲ್ಯಮಾಪನ ಕೇಂದ್ರಗಳಿಗೆ ಕಳುಹಿಸುವಾಗ, ಕಳುಹಿಸಬೇಕಾದ ಮೌಲ್ಯಮಾಪನ ಶಿಬಿರದ ವಿಳಾಸವನ್ನು ಖುದ್ದಾಗಿ ಪರಿಶೀಲಿಸುವುದು ಮತ್ತು ಉತ್ತರ ಪತ್ರಿಕೆಗಳ ಚೀಲಗಳ ಮೇಲೆ ಸಹ ಮುಖ್ಯ ಅಧೀಕ್ಷಕರು ಮತ್ತು ಮುಖ್ಯ ಅಧೀಕ್ಷಕರು ತಪ್ಪದೇ ಸಹಿ ಮಾಡುವುದು.

* ಪರೀಕ್ಷಾ ಅವ್ಯವಹಾರಗಳಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಗಮನವಹಿಸಿ, ಉತ್ತರ ಪತ್ರಿಕೆ. ಪ್ರವೇಶ ಪತ್ರ, ಅಭ್ಯರ್ಥಿಯ ಹೇಳಿಕೆ ಪತ್ರ, ಕೊಠಡಿ ಮೇಲ್ವಿಚಾರಕರ ಮತ್ತು ಮುಖ್ಯ ಅಧೀಕ್ಷಕರ ಲಿಖಿತ ಹೇಳಿಕೆಗಳನ್ನು ತುರ್ತಾಗಿ ಪ್ರತ್ಯೇಕವಾಗಿ ಉಪನಿರ್ದೇಶಕರು (ಪರೀಕ್ಷೆ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ, 6ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560 003 ಇವರ ವಿಳಾಸಕ್ಕೆ ಕಳುಹಿಸುವುದು.

* ಸಹ ಮುಖ್ಯ ಅಧೀಕ್ಷಕರಾಗಿ ಕಾರ್ಯನಿರ್ವಹಿಸುವ ವ್ಯಕ್ತಿಯ ಮಗ ಅಥವಾ ಮಗಳು ಪರೀಕ್ಷೆ ಬರೆಯುತ್ತಿದ್ದಲ್ಲಿ ಮೊದಲೇ ಮಾಹಿತಿ ಕೊಟ್ಟು ಕರ್ತವ್ಯದಿಂದ ಬಿಡುಗಡೆ ಹೊಂದಬೇಕು.

* ಒಂದು ಭಾಷಾ ವಿಷಯಕ್ಕೆ ಪರೀಕ್ಷೆಯಿಂದ ವಿನಾಯಿತಿ ಪಡೆದ ವಿಕಲಚೇತನ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳಿಗೆ ಹಸಿರು ಬಣ್ಣದ ಸ್ಟಿಕ್ಕರ್ ಅಂಟಿಸುವಂತೆ ಕೊಠಡಿ ಮೇಲ್ವಿಚಾರಕರಿಗೆ ಸೂಚಿಸಬೇಕು.

* ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆ ಬಂಡಲುಗಳ ಮೇಲೆ ಬರೆಯುವ ವಿವರಗಳನ್ನು ಸರಿಯಾಗಿ ಪರಿಶೀಲಿಸುವುದು ಹಾಗೂ ಒಬ್ಬ ಉಪನ್ಯಾಸಕರು ಹಾಗೂ ಒಬ್ಬರು 'ಡಿ' ದರ್ಜೆ ನೌಕರ ಮತ್ತು ಸಹ ಮುಖ್ಯ ಅಧೀಕ್ಷಕರು ಪೊಲೀಸ್ ಬಂದೋಬಸ್ತ್ ನೊಂದಿಗೆ ಅಂಚೆ ಕಛೇರಿಗೆ ಕಳುಹಿಸುವುದು.

* ಸುದ್ದಿ ಮಾಧ್ಯಮ ಮತ್ತು ಛಾಯಾ ಗ್ರಾಹಕರಿಗೆ ಪರೀಕ್ಷಾ ಕೊಠಡಿಗಳಿಗೆ ಪ್ರವೇಶ ನಿಷೇಧಿಸುವುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+