CBSE Exam Results 2022-23: ಶೀಘ್ರವೇ 10ನೇ- 2ಪಿಯುಸಿ ಫಲಿತಾಂಶ ಪ್ರಕಟ, ಪರಿಶೀಲನೆ ಹೇಗೆ? ಇಲ್ಲಿ ತಿಳಿಯಿರಿ
ಬೆಂಗಳೂರು, ಏಪ್ರಿಲ್ 26: ದೇಶದಲ್ಲಿ 2022-2023ನೇ ಶೈಕ್ಷಣಿಕ ವರ್ಷದ 10 ನೇ ತರಗತಿ (SSLC) ಮತ್ತು 12 ನೇ ತರಗತಿಗಳ (2nd PUC) ಪರೀಕ್ಷೆಗಳು ಈಗಾಗಲೇ ಪೂರ್ಣಗೊಂಡಿವೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಫಲಿತಾಂಶ ಪ್ರಕಟಿಸುವುದನ್ನೇ ವಿದ್ಯಾರ್ಥಿಗಳು ಮತ್ತವರ ಫೋಷಕರು ಕಾಯುತ್ತಿದ್ದಾರೆ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಈ ವಾರ್ಷಿಕ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಏಪ್ರಿಲ್ ಅಂತ್ಯ ಇಲ್ಲವೇ ಮೇ ಮೊದಲ ವಾರ ಪ್ರಕಟಿಸಲಿದೆ. ಈ ಬಗ್ಗೆ ಇನ್ನೂ ಅಧಿಕೃತ ದಿನಾಂಕ ಪ್ರಕಟಗೊಂಡಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ವಿದ್ಯಾರ್ಥಿ ಮತ್ತು ಪೋಷಕರು ಕುತೂಹಲಗಳಿಗೆ ತೆರೆ ಬೀಳಲಿದೆ.

2022-2023 ರ ಶೈಕ್ಷಣಿಕ ಬ್ಯಾಚ್‌ಗಾಗಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ವಾರ್ಷಿಕ ಬೋರ್ಡ್ ಪರೀಕ್ಷೆಗಳನ್ನು ಕಳೆದ 15 ಫೆಬ್ರವರಿ ರಿಂದ ಆರಂಭಿಸಿ ಪೂರ್ಣಗೊಳಿಸಿತು. ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳು ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ಫಲಿತಾಂಶದ ಆಧಾರದಲ್ಲಿ ಭವಿಷ್ಯ ಹಾದಿ ಕಂಡು ಕೊಳ್ಳಲಿದ್ದಾರೆ.
10ನೇ ಮತ್ತು 12ನೇ ತರಗತಿಗಳ ಫಲಿತಾಂಶ ಬಿಡುಗಡೆಯ ಬಗ್ಗೆ ದಿನಾಂಕವಾಗಲಿ ಇಲ್ಲವೇ ಸಮಯವಾಗಲಿ ಪ್ರಕಟವಾಗಿಲ್ಲ. ಮುಂದಿನ ಮೇ ಆರಂಭದಲ್ಲಿ ಫಲಿತಾಂಶ ನಿರೀಕ್ಷಿಸುತ್ತಿರುವವರು ತಮ್ಮ ಫಲಿತಾಂಶವನ್ನು ಎಲ್ಲಿ? ಹೇಗೆ? ನೋಡಬೇಕು, ವಿಧಾನ ಏನು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ಇದೆ.
ಸಿಬಿಎಸ್‌ಸಿ ಫಲಿತಾಂಶ ಪರಿಶೀಲನೆ ಹೇಗೆ? ತಿಳಿಯಿರಿ
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12ನೇ ತರಗತಿಯ ಫಲಿತಾಂಶ ಬಿಡುಗಡೆಗೊಳಿಸಿದ ನಂತರ ವಿದ್ಯಾರ್ಥಿಗಳು ಮೊದಲು ಸರ್ಕಾರದ ಅಧಿಕೃತ ವೆಬ್‌ಸೈಟ್‌ಗಳಾದ cbse.gov.in ಮತ್ತು results.cbse.nic.in ಗೆ ಭೇಟಿ ಕೊಡಬೇಕು..

ನಂತರ ಪರದೆ ಮೇಲೆ ಕೇಳಲಾಗುವ ಆಯ್ಕೆಗಳಲ್ಲಿ ತಮ್ಮ ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಫಲಿತಾಂಶ ವಿಭಾಗ ಆಯ್ಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ರೋಲ್ ನಂಬರ್, ಜನ್ಮ ದಿನಾಂಕ ವನ್ನು ನಮೂದಿಸುವ ಮೂಲಕ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಇದರೊಂದಿಗೆ ವಿದ್ಯಾರ್ಥಿಗಳು ಡಿಜಿಲಾಕರ್ ಬಳಸಿಕೊಂಡು ಫಲಿತಾಂಶವನ್ನು ಪಡೆಯಬಹುದಾಗಿದೆ. ಇಲ್ಲಿ ಫಲಿತಾಂಶವನ್ನು ಪಡೆಯಲು ಡಿಜಿಲಾಕರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಅಥವಾ ವೆಬ್‌ಸೈಟ್ digilocker.gov.in ಗೆ ಭೇಟಿ ನೀಡಿ ಅಲ್ಲಿ ಫಲಿತಾಂಶದ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.












Click it and Unblock the Notifications