SSLC, 2nd ಪಿಯುಸಿಯಲ್ಲಿ ಒಂದೇ ರೀತಿ ಅಂಕ ಪಡೆದ ಹಾಸನದ ಅವಳಿ ಸಹೋದರಿಯರು.! ಹೇಗೆ ಸಾಧ್ಯ?
ಹಾಸನ, ಏಪ್ರಿಲ್, 12: ಕರ್ನಾಟಕದ ಹಾಸನದ ಚುಕ್ಕಿ ಮತ್ತು ಇಬ್ಬನಿ ಚಂದ್ರ ಕೆ.ವಿ. ಎಂಬ ಹೆಸರಿನ ಅವಳಿ ಸಹೋದರಿಯರು ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಂದೇ ರೀತಿಯ ಅಂಕಗಳನ್ನು ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಇಂತಹ ಸಾಧನೆಗಳು ಅಪರೂಪ. ಹಾಗಾದರೆ ಈ ಅವಳಿ ಸಹೋದರಿಯರು ಪಡೆದ ಅಂಕಗಳೆಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇದೀಗ ಏಪ್ರಿಲ್ 10ರಂದು ದ್ವಿತೀಯ ಪಿಯುಸಿಯಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಈ ಅವಳಿ ಸಹೋದರಿಯರು 600ಕ್ಕೆ ನಿಖರವಾಗಿ 571 ಅಂಕಗಳನ್ನು ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಇನ್ನು ಎರಡು ವರ್ಷಗಳ ಹಿಂದೆಯೂ ಸಹ ಇದೇ ರೀತಿ ಈ ಅವಳಿ ಸಹೋದರಿಯರು 10ನೇ ತರಗತಿ ಪರೀಕ್ಷೆಯಲ್ಲಿ 625ಕ್ಕೆ ನಿಖರವಾಗಿ 620 ಒಂದೇ ರೀತಿಯ ಅಂಕಗಳನ್ನು ಗಳಿಸಿದ್ದರು. ಇನ್ನು ಈ ಬಗ್ಗೆ ಮಾತನಾಡಿದ ಚುಕ್ಕಿ,
ನಮಗೆ ಒಂದೇ ರೀತಿಯ ಅಂಕಗಳು ಹೇಗೆ ಬಂದವು ಎಂದು ನಮಗೆ ತಿಳಿದಿಲ್ಲ ಎಂದು ಹೇಳಿದರು.
"ಅಲ್ಲದೆ, ನಾವಿಬ್ಬರೂ ಶೇಕಡಾ 97 ಪ್ಲಸ್ ಅಂಕಗಳನ್ನು ನಿರೀಕ್ಷಿಸುತ್ತಿದ್ದೆವು. ಅತ್ಯಂತ ಸಂತಸದ ಸಂಗತಿಯೆಂದರೆ, ಆದರೆ ನಾವು ಅಂದುಕೊಂಡಿದ್ದಕ್ಕಿಂತ ಸ್ವಲ್ಪ ಹೆಚ್ಚಿನದಾಗಿ ಒಂದೇ ರೀತಿಯ ಅಂಕಗಳನ್ನು ಪಡೆದುಕೊಂಡಿದ್ದೇವೆ," ಹೇಳಿದರು.
ಇದೀಗ ತಮ್ಮ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೆ ಇವರು ತಮ್ಮ ಶಿಕ್ಷಣವನ್ನು ಮುಂದುವರೆಸಲು ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಆಯ್ಕೆ ಮಾಡಲು ಬಯಸುತ್ತಿದ್ದಾರೆ. ಮತ್ತು ಇಬ್ಬರೂ ಒಂದೇ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ. ಇವರು ಬರೀ ಅಂಕ ಗಳಿಸಲಷ್ಟೇ ಸೀಮಿತವಾಗಿರದೆ, ಸಂಗೀತ, ನೃತ್ಯ ಮತ್ತು ಕ್ರೀಡೆಗಳಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಈ ಅವಳಿ ಸಹೋದರಿಯರು ಹಾಸನದ ಎನ್‌ಡಿಆರ್‌ಕೆ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದರು. ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಕ್ಷೇತ್ರ ಇದರಲ್ಲಿ ಯಾವುದರಲ್ಲಿ ಆಸಕ್ತಿ ಇದೆ ಎಂದು ಕೇಳಿದಾಗ, ಚುಕ್ಕಿ "ನಾನು ಇನ್ನೂ ಏನನ್ನೂ ನಿರ್ಧರಿಸಿಲ್ಲ. ನಾವಿಬ್ಬರೂ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ಆದ್ದರಿಂದ ನಮ್ಮ ಆಸಕ್ತಿಯನ್ನು ಅದರಡೆಗೆ ಕೇಂದ್ರಿಕರಿಸಿದ್ದೇವೆ," ಎಂದು ಹೇಳಿದರು.
ಇನ್ನು ನಿಮ್ಮಿಬ್ಬರ ನಡುವೆ ಸ್ಪರ್ಧೆ ಇದೆಯೇ ಎಂದು ಕೇಳಿದಾಗ, ಕಿರಿಯ ಅವಳಿ ಇಬ್ಬನಿ, "ನನ್ನ ಸಹೋದರಿ ನನಗಿಂತ ಹೆಚ್ಚು ಅಂಕಗಳನ್ನು ಪಡೆದರೆ, ನಾನು ಹೆಚ್ಚು ಸಂತೋಷಪಡುತ್ತೇನೆ," ಎಂದು ಹೇಳಿದರು.
ಇನ್ನು ಈ ಸಹೋದರಿಯರ ತಂದೆ ವಿನೋದ್ ಚಂದ್ರ ಮಾತನಾಡಿ, "ಇಬ್ಬನಿ ತನ್ನ ಸಹೋದರಿಗಿಂತಲೂ ಉತ್ತಮ ಅಂಕಗಳನ್ನು ಗಳಿಸಿದರೆ, ಇಬ್ಬರೂ ಇತರ ವಿಷಯಗಳಲ್ಲಿ ಒಂದರಿಂದ ಎರಡು ಅಂಕಗಳನ್ನು ಹೆಚ್ಚಿಗೆ ಗಳಿಸಿದ್ದಾರೆ" ಎಂದು ಹೇಳಿದರು. ಅಲ್ಲದೆ, ಅವರಿಬ್ಬರೂ ಪರಸ್ಪರ ಹೊಂದಾಣಿಕೆಯಿಂದ ಇರುತ್ತಾರೆ. ಆದರೆ ಅವರನ್ನು ಪುಸ್ತಕದ ಹುಳುಗಳು ಎಂದು ಕರೆಯಲು ಸಾಧ್ಯವಿಲ್ಲ," ಎಂದು ಹೇಳಿದರು.












Click it and Unblock the Notifications