Mango Drink Recipe: ಈ ಬೇಸಿಗೆಯಲ್ಲಿ ಮಾವಿನ ಹಣ್ಣಿನ ಈ ಸಿಹಿ ಸಿಹಿ..ಖಾರ ಖಾರವಾದ ಡ್ರಿಂಕ್ ಟ್ರೈ ಮಾಡಿ
ಬೆಂಗಳೂರು, ಏಪ್ರಿಲ್. 23: ಮಾವಿನ ಹಣ್ಣಿನ ಸೀಸನ್ ಶುರುವಾಗಿದೆ. ಹಣ್ಣಿನ ಜೊತೆಗೆ ಮಾವಿನ ಕಾಯಿ ಕೂಡ ಹೆಚ್ಚು ಬಳಕೆಯಾಗುತ್ತದೆ. ಮುಂದಿನ ಸೀಸನ್ ಬರುವವರೆಗೂ ಹಣ್ಣಿನ ರುಚಿ ಸವಿಯಲು ಬಯಸುವವರು ಒಂದು ವರ್ಷದವರೆಗೂ ಇಟ್ಟುಕೊಳ್ಳುತ್ತಾರೆ. ಹೀಗಾಗಿಯೇ ಮಾವಿನ ಕಾಯಿಯನ್ನು ಹಲವು ವಿಧವಾಗಿ ಶೇಖರಿಸಿ ಇಟ್ಟುಕೊಳ್ಳಲಾಗುತ್ತದೆ.
ಮಾವಿನ ಹಣ್ಣಿನಿಂದ ಹೋಳಿಗೆ, ಜ್ಯೂಸ್, ಮಾವಿನ ಹಣ್ಣಿನ ಶಿಕರಣೆ ಸೇರಿದಂತೆ ಹಲವು ವಿಧವಾಗಿ ಬಳಸಲಾಗುತ್ತದೆ. ಇದರ ಜೊತೆಗೆ ಮಾವಿನ ಕಾಯಿಯನ್ನು ಪಲ್ಯ, ಚಿತ್ರಾನ್ನ, ಗೊಜ್ಜು, ಉಪ್ಪಿನಕಾಯಿ, ಚಟ್ನಿಯಾಗಿ ಬಳಸಲಾಗುತ್ತದೆ. ಇದನ್ನು ಜ್ಯೂಸ್ ಮಾಡಿ ಸವಿದರೇ ಹೆಚ್ಚು ರುಚಿಯಾಗಿರುತ್ತದೆ. ಇದರ ಸಿಹಿ ಸಿಹಿ ಮತ್ತು ಖಾರ ಖಾರವಾದ ಡ್ರಿಂಕ್ ಮಸಾಲೆಯುಕ್ತ ಮ್ಯಾಂಗೋ ಮಾರ್ಗರಿಟಾ ಸವಿದವರೇ ಅದರ ರುಚಿಯನ್ನು ಬಲ್ಲರು.

ಈ ಬೇಸಿಗೆಗೆ ಮಾವಿನ ಹಣ್ಣಿನ ಈ ಸ್ವೀಟ್ & ಸಾಲ್ಟ್ ಡ್ರಿಂಕ್ ಒಮ್ಮೆ ಟ್ರೈ ಮಾಡಿ. ಇದನ್ನು ಕೆಲವು ಪದಾರ್ಥಗಳನ್ನು ಬಳಸಿ ತಯಾರಿಸಲಾಗುವ ಈ ಪಾನೀಯವನ್ನು, ಬೇಸಿಗೆಯಲ್ಲಿ ಸವಿಯಬಹುದು. ಅದನ್ನು ಮಾಡುವ ವಿಧಾನ ಮತ್ತು ಪದಾರ್ಥಗಳು ವಿವರಣೆ ಈ ಕೆಳಗೆ ಇದೆ.
ಮ್ಯಾಂಗೊ ಮಾರ್ಗರಿಟಾ ಮಾಡಲು ಬೇಕಾದ ಪದಾರ್ಥಗಳು
* ಮಾಗಿದ ಮಾವು: 200 ಗ್ರಾಂ
* ಒಣ ಶುಂಠಿ ಪುಡಿ : 1 ಚಿಟಿಕೆ
* ನೀರು: 100 ಮಿಲಿ
* ಸಕ್ಕರೆ: 30 ಗ್ರಾಂ
* ಐಸ್ ಕ್ಯೂಬ್: 5
* ನಿಂಬೆ : 1 ಸಂಖ್ಯೆ
* ಚಾಟ್ ಮಸಾಲಾ: 2 ಟೆಬಲ್ ಸ್ಪೂನ್
ಮ್ಯಾಂಗೊ ಮಾರ್ಗರಿಟಾ ಮಾಡುವ ವಿಧಾನ
* ಜಾರ್‌ನಲ್ಲಿ ಮಾವಿನಕಾಯಿ ಜೊತೆಗೆ ಸಕ್ಕರೆ, ಶುಂಠಿ ಎಲ್ಲಾ ಪದಾರ್ಥಗಳನ್ನು ಹಾಕಿ ರುಬ್ಬಿ.
* ಸ್ಟ್ರೈನರ್ ಮೂಲಕ ಸೋಸಿಕೊಳ್ಳಿ, ಉಳಿದ ಶುಂಠಿ ಮತ್ತು ಮಾವಿನ ಹಣ್ಣಿನ ನಾರನ್ನು ಹೊರತೆಗೆಯಿರಿ.
* ಎರಡು ಲೋಟವನ್ನು ತೆಗೆದುಕೊಂಡು ಅದರ ಅಂಚಿಗೆ ನಿಂಬೆ ರಸವನ್ನು ಬಳಿಯಿರಿ.
* ಇದನ್ನು ಚಾಟ್ ಮಸಾಲಾದಲ್ಲಿ ಅದ್ದಿ ನಿಂಬೆ ರಸಕ್ಕೆ ಚಾಟ್ ಮಸಾಲಾ ಅಂಟುವಂತೆ ನೋಡಿಕೊಳ್ಳಿ
* ಬಳಿಕ ಗ್ಲಾಸ್‌ಗೆ ಐಸ್ ಕ್ಯೂಬ್ ತುಂಬಿಸಿ.
* ಈಗ ಸೋಸಿದ ಮಾವಿನ ರಸವನ್ನು ಗ್ಲಾಸ್‌ಗೆ ಹಾಕಿ. ಪುದೀನ ಎಲೆಯಿಂದ ಅಲಂಕರಿಸಿ ಸರ್ವ್ ಮಾಡಿ.

ಮ್ಯಾಂಗೊ ಡ್ರಿಂಗ್ ಪ್ರಯೋಜನಗಳು:
ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಹೊಂದಿರುವ ಮಾವಿನಹಣ್ಣನ್ನು ತಿನ್ನುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಇದು ಚರ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಅವರ ವಿಟಮಿನ್ ಸಿ ಅಂಶವು ಚರ್ಮದ ಪ್ರೋಟೀನ್ ಕಾಲಜನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.
ಕೂದಲನ್ನು ಆರೋಗ್ಯಕರವಾಗಿಸಲು ಮಾವಿನ ಹಣ್ಣು ಅತ್ಯಗತ್ಯ. ಅದರ ವಿಟಮಿನ್ ಎ ಮತ್ತು ಕೆರಾಟಿನ್ ಅಂಶವು ಕೂದಲಿನ ಬೆಳವಣಿಗೆ ಮತ್ತು ಆರೋಗ್ಯವನ್ನು ಉತ್ತೇಜಿಸುತ್ತದೆ. ಮುಖದ ಸುಕ್ಕುಗಳನ್ನು ಕಡಿಮೆ ಮಾಡಲು ಮತ್ತು ಸಡಿಲವಾದ ಚರ್ಮವನ್ನು ಟೈಟನಿಂಗ್ ಮಾಡಲು ಸಹಾಯ ಮಾಡುತ್ತದೆ ಮತ್ತು ವಿಟಮಿನ್ ಕೆ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಪೋಷಕಾಂಶಗಳು ಮಾವಿನ ಹಣ್ಣಿನಲ್ಲಿ ಸಮೃದ್ಧವಾಗಿದೆ.












Click it and Unblock the Notifications