Zero Shadow Day: ನಾಳೆ (ಬುಧವಾರ) ಬೆಂಗಳೂರಿನಲ್ಲಿ ಶೂನ್ಯ ನೆರಳು ದಿನ; ಸಮಯ, ವಿವರ
ಬೆಂಗಳೂರು ಜನತೆಗೆ ಬುಧವಾರ ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಗುವ ಅವಕಾಶ ಸಿಕ್ಕಿದೆ. ಬುಧವಾರ ಬೆಂಗಳೂರಿನಲ್ಲಿ 'ಶೂನ್ಯ ನೆರಳು ದಿನ' ಎನ್ನುವ ಅಪರೂಪದ ವಿದ್ಯಮಾನ ಸಂಭವಿಸಲಿದೆ. ಬುಧವಾರ ಬೆಂಗಳೂರಿನಲ್ಲಿದ್ದರೆ ಇದನ್ನು ನೀವು ಕೂಡ ಪರೀಕ್ಷೆ ಮಾಡಬಹುದಾಗಿದೆ.
ಬುಧವಾರ ಮಧ್ಯಾಹ್ನ 12.17 ರಿಂದ 12.23 ರ ನಡುವೆ ಈ ವಿದ್ಯಮಾನ ಸಂಭವಿಸಲಿದೆ. ಸೂರ್ಯನ ಸ್ಥಾನ ನಿಖರವಾಗಿ ಉತ್ತುಂಗಕ್ಕೇರುವ ಕಾರಣ ಎಲ್ಲ ನೆರಳುಗಳು ಕಣ್ಮರೆಯಾಗಲಿದೆ.

ಬೆಂಗಳೂರು ಮಾತ್ರವಲ್ಲದೆ ಅಲ್ಲದೆ, ಕನ್ಯಾಕುಮಾರಿ, ಭೋಪಾಲ್, ಹೈದರಾಬಾದ್ ಮತ್ತು ಮುಂಬೈ ಮುಂತಾದ ಸ್ಥಳಗಳಲ್ಲಿ ಈ ವಿದ್ಯಮಾನ ನಡೆಯಲಿದೆ.
ಶೂನ್ಯ ನೆರಳು ದಿನ ಎಂದರೇನು?
ಸೂರ್ಯ ನೇರವಾಗಿ ತಲೆಯ ಮೇಲೆ ಬಂದಾಗ ಶೂನ್ಯ ನೆರಳು ದಿನ ಎನ್ನಲಾಗುತ್ತದೆ. ಇದರ ಪರಿಣಾಮ ಮಧ್ಯಾಹ್ನ ನೆರಳು ಕಾಣಿಸುವುದಿಲ್ಲ. ಈ ವಿದ್ಯಮಾನವು ಸಾಮಾನ್ಯವಾಗಿ ಸಮಭಾಜಕದ ಸಮೀಪವಿರುವ ಪ್ರದೇಶಗಳಲ್ಲಿ ಸಂಭವಿಸುತ್ತದೆ, ಅಲ್ಲಿ ಸೂರ್ಯನ ಕೋನವು ಭೂಮಿಯ ಮೇಲ್ಮೈಗೆ ಬಹುತೇಕ ಲಂಬವಾಗಿರುತ್ತದೆ. ಪರಿಣಾಮವಾಗಿ, ವಸ್ತುಗಳಿಗೆ ನೆರಳು ಇರುವುದಿಲ್ಲ.
ಭೂಮಿಯು ಸೂರ್ಯನ ಸುತ್ತ ಸುತ್ತುತ್ತಿರುವಾಗ, ಆಕಾಶದಲ್ಲಿ ತನ್ನ ಸ್ಥಾನ ಬದಲಾಯಿಸುತ್ತದೆ, ವರ್ಷದ ವಿವಿಧ ಸಮಯಗಳಲ್ಲಿ ವಿವಿಧ ಅಕ್ಷಾಂಶಗಳಲ್ಲಿ ತನ್ನ ಉತ್ತುಂಗವನ್ನು ತಲುಪುತ್ತದೆ. ಸೂರ್ಯನು ಸಮಭಾಜಕದ 23.5 ಡಿಗ್ರಿ ದಕ್ಷಿಣದಿಂದ 23.5 ಡಿಗ್ರಿ ಉತ್ತರಕ್ಕೆ ಹೋಗುವಂತೆ ಮಾಡುತ್ತದೆ, ವರ್ಷದ ಬಳಿಕ ಮತ್ತೆ ವಾಪಸ್ ಬರುತ್ತದೆ.
ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾದ ಪ್ರಕಾರ, +23.5 ಮತ್ತು -23.5 ಡಿಗ್ರಿ ಅಕ್ಷಾಂಶಗಳ ನಡುವಿನ ಸ್ಥಳಗಳಲ್ಲಿ ವರ್ಷಕ್ಕೆ ಎರಡು ಬಾರಿ ಶೂನ್ಯ ನೆರಳು ದಿನ ಸಂಭವಿಸುತ್ತದೆ.
ಕೋರಮಂಗಲದಲ್ಲಿ ಶೂನ್ಯ ನೆರಳು ಆಯೋಜನೆ
ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ತನ್ನ ಕೋರಮಂಗಲ ಕ್ಯಾಂಪಸ್‌ನಲ್ಲಿ ಶೂನ್ಯ ನೆರಳು ದಿನವನ್ನು ಆಚರಿಸಲಾಗುತ್ತದೆ. ಏಪ್ರಿಲ್ 24ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿವಿಧ ಚಟುವಟಿಕೆಗಳು ನಡೆಯಲಿದ್ದು, ಸಾರ್ವಜನಿಕರು ಪಾಲ್ಗೊಳ್ಳಬಹುದಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಬದಲಾಗುವ ನೆರಳಿನ ಉದ್ದವನ್ನು ನೋಡಬಹುದು. ಸೂರ್ಯನ ಸುತ್ತ ಭೂಮಿಯ ಓರೆ ಮತ್ತು ಕಕ್ಷೆಯ ಬಗ್ಗೆ ಮಾಹಿತಿ ಪಡೆಯಬಹುದು.












Click it and Unblock the Notifications