2nd Puc Result: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ದ.ಕನ್ನಡ ಪ್ರಥಮ..ಇಲ್ಲಿದೆ ಜಿಲ್ಲಾವಾರು ವಿವರ
ಬೆಂಗಳೂರು, ಏಪ್ರಿಲ್ 10: 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು (ಏಪ್ರಿಲ್ 10) ಬುಧವಾರ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಈಗಾಗಲೇ ಫಲಿತಾಂಶ ಬಿಡುಗಡೆ ಮಾಡಿದ್ದು, ಬೆಳಗ್ಗೆ 11 ಗಂಟೆ ನಂತರ ಫಲಿತಾಂಶ https://karresults.nic.in/ ವೆಬ್ ಸೈಟ್‌ನಲ್ಲಿ ವಿದ್ಯಾರ್ಥಿಗಳು ವೀಕ್ಷಿಸಬಹುದಾಗಿದೆ.
ಈ ಬಾರಿ 84.87% ಬಾಲಕಿಯರು ಉತ್ತೀರ್ಣರಾಗಿದ್ದು, 76.98% ಬಾಲಕರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನು ವಿಜ್ಞಾನ ವಿಭಾಗ 89.96% , ವಾಣಿಜ್ಯ ವಿಭಾಗ 80.94%, ಕಲಾ ವಿಭಾಗದಲ್ಲಿ 68.36 % ಫಲಿತಾಂಶ ಬಂದಿದೆ.

ಕಳೆದ ಬಾರಿಯಂತೆ ಈ ಬಾರಿ ಕೂಡ ದಕ್ಷಿಣ ಕನ್ನಡ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಉಡುಪಿ ಎರಡನೇ ಸ್ಥಾನ ಪಡೆದಿದೆ. ವಿಜಯಪುರ (94.89%) ತೃತೀಯ ಸ್ಥಾನ ಪಡೆದಿದೆ.
ಜಿಲ್ಲಾವಾರು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ವಿವರ
| ಕ್ರ,ಸಂಖ್ಯೆ | ಜಿಲ್ಲೆ | ಶೇಕಡಾ |
| 1 | ದಕ್ಷಿಣ ಕನ್ನಡ | 97.37% |
| 2 | ಉಡುಪಿ | 96.80% |
| 3 | ವಿಜಯಪುರ | 94.89% |
| 4 | ಉತ್ತರ ಕನ್ನಡ | 92.51% |
| 5 | ಕೊಡಗು | 92.13% |
| 6 | ಬೆಂಗಳೂರು ದಕ್ಷಿಣ | 89.57% |
| 7 | ಬೆಂಗಳೂರು ಉತ್ತರ | 88.67% |
| 8 | ಶಿವಮೊಗ್ಗ | 88.58% |
| 9 | ಚಿಕ್ಕಮಗಳೂರು | 88.20% |
| 10 | ಬೆಂಗಳೂರು ಗ್ರಾಮಾಂತರ | 87.55% |
| 11 | ಬಾಗಲಕೋಟೆ | 87.54% |
| 12 | ಕೋಲಾರ | 86.12% |
| 13 | ಹಾಸನ | 85.83% |
| 14 | ಚಾಮರಾಜನಗರ | 84.99% |
| 15 | ಚಿಕ್ಕೋಡಿ | 84.10% |
| 16 | ರಾಮನಗರ | 83.58% |
| 17 | ಮೈಸೂರು | 83.13% |
| 18 | ಚಿಕ್ಕಬಳ್ಳಾಪುರ | 82.84% |
| 19 | ಬೀದರ್ | 81.69% |
| 20 | ತುಮಕೂರು | 81.03% |
| 21 | ದಾವಣಗೆರೆ | 80.96% |
| 22 | ಕೊಪ್ಪಳ | 80.83% |
| 23 | ಧಾರವಾಡ | 80.70% |
| 24 | ಮಂಡ್ಯ | 80.56% |
| 25 | ಹಾವೇರಿ | 78.36% |
| 26 | ಯಾದಗಿರಿ | 77.29% |
| 27 | ಬೆಳಗಾವಿ | 77.20% |
| 28 | ಕಲಬುರಗಿ | 75.48% |
| 29 | ಬಳ್ಳಾರಿ | 74.70% |
| 30 | ರಾಯಚೂರು | 73.11% |
| 31 | ಚಿತ್ರದುರ್ಗ | 72.92% |
| 32 | ಗದಗ | 72.86% |












Click it and Unblock the Notifications