ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಘವೇಶ್ವರ ಶ್ರೀಗಳ ವಿರುದ್ದ ಆರೋಪ: ಪ್ರಕರಣದ ಹಿಂದಿನ ಸಂಚು

By ಅನುರಾಧ
|
Google Oneindia Kannada News

ತುಮಕೂರು, ಅ 29: ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಪ್ರಕರಣದ ಹಿಂದೆ ಕೆಲವೊಂದು ಪೂರ್ವಯೋಜಿತ ಸಂಚುಗಳು ಕೆಲಸ ಮಾಡಿವೆ ಎಂದು ಬೆಂಗಳೂರಿನ ಆಯುರ್ವೇದ ತಜ್ಞ ಡಾ. ಸೀತಾರಾಮ್ ಪ್ರಸಾದ್ ಹೇಳಿದ್ದಾರೆ.

ತುಮಕೂರಿನಲ್ಲಿ ಮಂಗಳವಾರ (ಅ 27) ನಾರಿ ಸುರಕ್ಷಾ ಮತ್ತು ಸಬ್ ಕೆ ಸಾಥ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸೀತಾರಾಮ್ ಪ್ರಸಾದ್, ಬೇಡ್ತಿ, ಆಘನಾಶಿನಿ ಯೋಜನೆಗಳಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮವನ್ನು ವಿರೋಧಿಸಿ ಪಟ್ಟಭದ್ರರನ್ನು ಶ್ರೀಗಳು ಎದುರು ಹಾಕಿಕೊಂಡರು.

ಇದಲ್ಲದೇ, ಅಂಬಾರ ಗುಡ್ಡ ಗಣಿಗಾರಿಕೆ ಮತ್ತು ಗಣಿ ಲಾಬಿಯ ವಿರುದ್ದ ಹೋರಾಡಿದರು. ಹೊಸಗುಂದ ಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಸಾರ್ವಜನಿಕರಿಂದ ತಮ್ಮ ಹೆಸರಿನಲ್ಲಿ ವಂತಿಕೆ ಸಂಗ್ರಹಿಸುತ್ತಿದ್ದವರನ್ನು ಲೆಕ್ಕಪತ್ರಕ್ಕಾಗಿ ಶ್ರೀಗಳು ಒತ್ತಾಯಿಸಿದರು ಎಂದು ಸೀತಾರಾಮ್ ಪ್ರಸಾದ್ ಶ್ರೀಗಳ ವಿರುದ್ದ ನಡೆಯುತ್ತಿರುವ ಸಂಚನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. (ನಿಷ್ಕಳಂಕ ವ್ಯಕ್ತಿತ್ವದ ಶ್ರೀಗಳ ವಿರುದ್ಧ ಅಪಪ್ರಚಾರ)

Rape case on Raghaaveshwara Swamiji is a pre planned

ಇವರೆಲ್ಲಾ ಶ್ರೀಗಳ ವಿರೋಧಿ ಬಣಗಳಾಗಿ ಸಂಘಟಿತರಾಗಿ ಅವರ ವಿರುದ್ದ ಸಂಚು ರೂಪಿಸಿದರು. ರಾಮಾಯಣ ಮಹಾಸತ್ರ, ವಿಶ್ವಗೋ ಸಮ್ಮೇಳನ, ಗೋಹತ್ಯಾ ನಿಷೇಧದ ಬಗೆಗಿನ ಹೋರಾಟ ಇವುಗಳಿಂದ ರಾಘವೇಶ್ವರ ಶ್ರೀಗಳ ಜನಪ್ರಿಯತೆಯನ್ನು ಸಹಿಸದ ಗುಂಪುಗಳು ಒಟ್ಟಾಗಿ ಸೇರಿಕೊಂಡು ಇಂತಹ ಬೃಹತ್ ಸಂಚನ್ನು ಶ್ರೀಗಳ ವಿರುದ್ದ ರೂಪಿಸಿದವು ಎಂದು ಸೀತಾರಾಮ್ ಪ್ರಸಾದ್ ಆರೋಪಿಸಿದ್ದಾರೆ.

ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಗಿರಿಜಾ ಸೂರಾಚಾರ್ ಮಾತನಾಡಿ, ಮಹಿಳೆಯರೆಲ್ಲಾ ಒಟ್ಟಾಗಿ ಸೇರಿ ಕಾನೂನಿನ ದುರುಪಯೋಗವನ್ನು ತಡೆಯೋಣ, ನಿಜವಾದ ಸಂತ್ರಸ್ಥೆಯರಿಗೆ ಸಹಾಯಹಸ್ತ ನೀಡೋಣ ಎಂದು ಕರೆ ಕೊಟ್ಟಿದ್ದಾರೆ.

ಪ್ರಾಸ್ತಾವಿಕ ಭಾಷಣ ಮಾಡಿದ ಲಕ್ಷ್ಮಿ ಮಂಜುನಾಥ್, ಕಾನೂನಿನಲ್ಲಿ ನಮಗೆ ಒದಗಿ ಬಂದ 376 ಕಲಂ ಇಂದು ದುರುಪಯೋಗವಾಗುತ್ತಿರುವ ಬಗ್ಗೆ ನಾವು ಮೊಟ್ಟಮೊದಲು ಯೋಚಿಸಬೇಕಾಗಿದೆ. ಇದು ನಮ್ಮ ರಕ್ಷಣೆಗಾಗಿ ಇರುವ ವ್ಯವಸ್ಥೆಯಾಗಿರುತ್ತದೆ ಎಂದಿದ್ದಾರೆ. (ಸನ್ಯಾಸತ್ವದ ಮಹತ್ವ ಹರಿಯ ಬಿಟ್ಟವರಿಗೇನು ಗೊತ್ತು)

ಇಂತಹ ರಕ್ಷಣಾತ್ಮಕ ಕೊಡುಗೆಯನ್ನು ಯಾರದೋ ಒತ್ತಡಕ್ಕೆ, ಇನ್ಯಾವುದೋ ಆಮಿಷಕ್ಕೆ ಬಲಿಯಾಗಿ ಅಥವಾ ಮತ್ಯಾವುದೋ ದ್ವೇಷ ಸಾಧನೆಗೆ ದುರುಪಯೋಗ ಮಾಡುತ್ತಿರುವ ಮಹಿಳೆಯರನ್ನು ನಾವು ನೋಡುತ್ತಿದ್ದೇವೆ ಮತ್ತು ಇದರಿಂದಾಗಿ ಇಡೀ ಮಹಿಳಾ ಸಮಾಜವೇ ಮುಜುಗರಕ್ಕೊಳಪಟ್ಟು ತಲೆ ತಗ್ಗಿಸುವಂತೆ ಕೂಡಾ ಆಗುತ್ತಿದೆ ಎಂದು ಲಕ್ಷ್ಮಿ ಮಂಜುನಾಥ್ ಬೇಸರ ವ್ಯಕ್ತ ಪಡಿಸಿದ್ದಾರೆ .

ಮುಖವಾಡದ ಸೋಗಿನಲ್ಲಿ ಮಹಿಳೆಯರನ್ನು ಅಪಹಾಸ್ಯಕ್ಕೀಡುಮಾಡುವ, ಸ್ವಯಂಘೋಷಿತ ಹುಸಿ ಸಂತ್ರಸ್ತೆಯರಿಗೆ ಸೊಪ್ಪು ಹಾಕದೇ ನೈಜ ಸಂತ್ರಸ್ತೆಯರ ಶೀಲ ರಕ್ಷಣೆಗಾಗಿ ನಮ್ಮ ಅಧಿಕಾರ ಬಳಸಿ, ಈ ಸಮಾಜವನ್ನು ರಕ್ಷಿಸಿ ಎಂದು ಸರಕಾರಕ್ಕೆ ಲಕ್ಷ್ಮಿ ಮಂಜುನಾಥ್ ಮನವಿ ಮಾಡಿದ್ದಾರೆ. ಹೆಣ್ಣಿನ ಮೇಲೆ 169 ಬಾರಿ ಅತ್ಯಾಚಾರ ಆಗಲು ಸಾಧ್ಯವೇ? ಮುಂದಿನ ಪುಟ ಕ್ಲಿಕ್ಕಿಸಿ

English summary
Rape case on Raghaaveshwara Swamiji of Ramachandrapura Math is a pre planned, noted Ayurvedic Specialist Dr. Seetharam Prasad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X