ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರಾಗೃಹ ಇಲಾಖೆಯಿಂದ ಕೈದಿಗಳಿಗೆ ಸುವರ್ಣಾವಕಾಶ

|
Google Oneindia Kannada News

ಬೆಂಗಳೂರು, ಆಗಸ್ಟ್‌ 18: ಕರ್ನಾಟಕ ರಾಜ್ಯ ಕಾರಾಗೃಹಗಳ ಇಲಾಖೆಯು ಖೈದಿಗಳಿಂದ ಇಂಧನ ಕೇಂದ್ರಗಳನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಈ ಕೇಂದ್ರಗಳನ್ನು ಕಾರಾಗೃಹಗಳಿಗೆ ಸಮೀಪವಿರುವ ಆಯ್ದ ಸ್ಥಳಗಳಲ್ಲಿ ಪ್ರಾರಂಭಿಸಲಾಗುವುದು. ಇದರಿಂದ ಇಲಾಖೆ ಸಿಬ್ಬಂದಿ ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದು ಎಂದು ಹೇಳಲಾಗಿದೆ.

ರಾಜ್ಯವು ಸುಮಾರು 100 ಕಾರಾಗೃಹಗಳನ್ನು ಹೊಂದಿದ್ದು, ಇದರಲ್ಲಿ ಕೇಂದ್ರ, ಜಿಲ್ಲಾ, ಮುಕ್ತ ಮತ್ತು ತಾಲೂಕು ಮಟ್ಟದ ಜೈಲುಗಳಲ್ಲಿ 15,000ಕ್ಕೂ ಹೆಚ್ಚು ಕೈದಿಗಳು ಸೆರೆವಾಸಿಗಳಾಗಿದ್ದಾರೆ. ಹಿರಿಯ ಪೊಲೀಸ್ ಮಹಾನಿರ್ದೇಶಕರು ಮಾತನಾಡಿ, ಈ ಯೋಜನೆಯು ಜೈಲುಗಳು ಮತ್ತು ತಿದ್ದುಪಡಿ ಸೇವೆಗಳು, ಕಾರಾಗೃಹ ಇಲಾಖೆಯ ಸುಧಾರಣೆ ಮತ್ತು ಪುನರ್ವಸತಿ ಉಪಕ್ರಮಗಳ ಭಾಗವಾಗಿದೆ ಎಂದು ಹೇಳಿದ್ದಾರೆ.

ಜೈಲುಗಳಲ್ಲಿ ಲಭ್ಯವಿರುವ ಪುಸ್ತಕಗಳ ಮೇಲೆ ನಿಗಾ ಇರಿಸಿ: ಡಿಜಿಗಳಿಗೆ MHA ಸಲಹೆಜೈಲುಗಳಲ್ಲಿ ಲಭ್ಯವಿರುವ ಪುಸ್ತಕಗಳ ಮೇಲೆ ನಿಗಾ ಇರಿಸಿ: ಡಿಜಿಗಳಿಗೆ MHA ಸಲಹೆ

ನಾವು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮತ್ತು ಭಾರತ್ ಪೆಟ್ರೋಲಿಯಂ (ಬಿಪಿ) ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಕೈದಿಗಳು ತಮ್ಮ ಅವಧಿಯನ್ನು ಪೂರೈಸಿ ಜೈಲಿನಿಂದ ಹೊರಬಂದಾಗ ಅವರು ಪೆಟ್ರೋಲ್ ಬಂಕ್‌ಗಳಲ್ಲಿ ಉದ್ಯೋಗವನ್ನು ಕಂಡುಕೊಳ್ಳಬಹುದು ಅಥವಾ ಸ್ವಂತವಾಗಿ ಬಂಕ್‌ಗಳನ್ನು ಪ್ರಾರಂಭಿಸಬಹುದು. ಆಂಧ್ರಪ್ರದೇಶ ಮತ್ತು ತಮಿಳುನಾಡಿನಂತಹ ಕೆಲವು ರಾಜ್ಯಗಳಲ್ಲಿ ಇದೇ ರೀತಿಯ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ನಾವು ಈ ಬಗ್ಗೆ ಕಾರ್ಯಸಾಧ್ಯತೆಯ ಮೇಲೆ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

Prisoners will soon own petrol stations

ಈಗ ನಾವು ಕಾರಾಗೃಹಗಳಿಗೆ ಹತ್ತಿರವಿರುವ ಸೂಕ್ತ ಸ್ಥಳಗಳನ್ನು ಗುರುತಿಸುತ್ತಿದ್ದೇವೆ. ಎಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ಅವರಿಗೆ ಅವಕಾಶ ಮಾಡಿ ಕೊಡಲಾಗುವುದು. ಇದೊಂದು ವಾಣಿಜ್ಯೋದ್ಯಮವಾಗಿದ್ದು, ಕೈದಿಗಳಿಗೆ ಕೆಲಸ ನೀಡುವ ಮೊದಲು ತರಬೇತಿ ನೀಡಲಾಗುವುದು. ಒಂದೇ ಪೆಟ್ರೋಲ್ ಬಂಕ್‌ನಲ್ಲಿ ಕನಿಷ್ಠ 45 ಕೈದಿಗಳಿಗೆ ಮೂರು ಪಾಳಿಯಲ್ಲಿ ಕೆಲಸ ಮಾಡುವ ಅವಕಾಶವನ್ನು ನೀಡಬಹುದು. ಪ್ರತಿ ಪಾಳಿಯಲ್ಲಿ 15 ಸದಸ್ಯರು ಕೆಲಸ ಮಾಡಬಹುದು ಎಂದು ಕಾರಾಗೃಹ ಇಲಾಖೆಯ ಮೂಲಗಳು ತಿಳಿಸಿವೆ. ಇದಕ್ಕೆ ಉತ್ತಮ ನಡತೆ ಹೊಂದಿರುವ ಕೈದಿಗಳನ್ನು ಆಯ್ಕೆ ಮಾಡಲಾಗುವುದು. ಇಂಧನ ಕೇಂದ್ರಗಳ ಪಕ್ಕದಲ್ಲಿ ಕಾರ್‌ವಾಶ್ ಮತ್ತು ಇತರ ಸೇವೆಗಳನ್ನೂ ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.

ಈ ಚಿಂತನೆ ಸಂಬಂಧ ಇತರ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು. ಕಾರಾಗೃಹ ಇಲಾಖೆಯು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹ ಸೇರಿದಂತೆ ವಿವಿಧ ಕಾರಾಗೃಹಗಳು ಮತ್ತು ಮೈಸೂರು ಮತ್ತು ಬೆಳಗಾವಿ ಜೈಲುಗಳಲ್ಲಿ ಬೇಕರಿ ಘಟಕಗಳನ್ನು ನಡೆಸುತ್ತಿದೆ.

Prisoners will soon own petrol stations

ಕೈದಿಗಳು ಬ್ರೆಡ್, ಬನ್, ಬಿಸ್ಕತ್ತುಗಳು, ಕೇಕ್ ಮತ್ತು ಕುಕೀಸ್ ಸೇರಿದಂತೆ ಬೇಕರಿ ಉತ್ಪನ್ನಗಳನ್ನು 'ಪರಿವರ್ತನಾ' ಎಂಬ ಬ್ರಾಂಡ್ ಹೆಸರಿನಲ್ಲಿ ಸಾಮಾನ್ಯ ಜನರಿಗೆ ಮಾರಾಟ ಮಾಡುತ್ತಾರೆ. ಕೈದಿಗಳು ಲಡ್ಡೂ, ಮೈಸೂರು ಪಾಕ್, ದಿಲ್ ಪಸಂದ್ ಮತ್ತು ಖಾರಾ ಬೋಂಡಿಯನ್ನೂ ಮಾಡುತ್ತಾರೆ. ಈ ಉತ್ಪನ್ನಗಳನ್ನು ಪೆಟ್ರೋಲ್ ಬಂಕ್‌ನ ಪಕ್ಕದಲ್ಲಿ ಮಾರಾಟ ಮಾಡಲು ನಾವು ಒಂದು ಔಟ್‌ಲೆಟ್ ಅನ್ನು ಸಹ ಹೊಂದಬಹುದು ಎಂದು ಅಧಿಕಾರಿ ಹೇಳಿದರು.

Recommended Video

ಇವತ್ತಿನ ಸೈಕ್ ನ್ಯೂಸ್ ನಲ್ಲಿ ಮೋದಿ‌, ಮುದೋಳ, ಕುರಿ-ಕೋಳಿ ಮತ್ತು ದುಬೈ | *India | OneIndia Kannada

English summary
The Karnataka State Prisons Department is planning to start inmate fuel stations. It is said that these stations will be started at selected places near the jails so that the department staff can monitor them easily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X