ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲುಗಳಲ್ಲಿ ಲಭ್ಯವಿರುವ ಪುಸ್ತಕಗಳ ಮೇಲೆ ನಿಗಾ ಇರಿಸಿ: ಡಿಜಿಗಳಿಗೆ MHA ಸಲಹೆ

|
Google Oneindia Kannada News

ನವದೆಹಲಿ ಮೇ 4: ಕೈದಿಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರದಂತೆ ಖಾತ್ರಿಪಡಿಸಿಕೊಳ್ಳಲು ಜೈಲು ಗ್ರಂಥಾಲಯಗಳಲ್ಲಿ ಲಭ್ಯವಿರುವ ಸಾಹಿತ್ಯದ ಮೇಲೆ ಸೂಕ್ತ ನಿಗಾ ವಹಿಸುವಂತೆ ಮತ್ತು ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ಅದನ್ನು ಕಾಲಕಾಲಕ್ಕೆ ಪರಿಶೀಲಿಸುವಂತೆ ಕೇಂದ್ರವು ದೇಶಾದ್ಯಂತ ಎಲ್ಲಾ ರಾಜ್ಯಗಳು ಮತ್ತು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

"ಕಾರಾಗೃಹಗಳು ದೇಶವಿರೋಧಿ ಚಟುವಟಿಕೆಗಳಿಗೆ ಉತ್ಪಾದನಾ ಕೇಂದ್ರವಾಗುವುದನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದಕ್ಕಾಗಿ ಜೈಲುಗಳ ನಿಯಮಿತ ತಪಾಸಣೆ ನಡೆಸಬೇಕು" ಎಂದು ಗೃಹ ವ್ಯವಹಾರಗಳ ಸಚಿವಾಲಯ (MHA) ರಾಜ್ಯಗಳಿಗೆ ಮತ್ತು ಜೈಲುಗಳ ಮಹಾನಿರ್ದೇಶಕರಿಗೆ ಸಲಹೆ ನೀಡಿದೆ. ಜೈಲುಗಳಲ್ಲಿ ನಿರ್ವಹಣೆ ಮತ್ತು ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸುವುದು ಇದರ ಒಂದು ಭಾಗವಾಗಿದೆ ಎಂದು ಎಂಹೆಚ್‌ಎ ಹೇಳಿದೆ.

ದೆಹಲಿ: ಫಿಟ್ನೆಸ್ ಪ್ರಮಾಣಪತ್ರವಿಲ್ಲದ ವಾಹನ ಓಡಿಸಿದರೆ 10,000 ರೂ.ವರೆಗೆ ದಂಡ, ಜೈಲುದೆಹಲಿ: ಫಿಟ್ನೆಸ್ ಪ್ರಮಾಣಪತ್ರವಿಲ್ಲದ ವಾಹನ ಓಡಿಸಿದರೆ 10,000 ರೂ.ವರೆಗೆ ದಂಡ, ಜೈಲು

ಕೈದಿಗಳಿಗೆ ಪ್ರವೇಶಿಸಬಹುದಾದ ಸಾಹಿತ್ಯದ ಕುರಿತು ನಿಗಾ ವಹಿಸುವಂತೆ ಜೈಲಾಧಿಕಾರಿಗಳಿಗೆ MHA ಸಲಹೆ ನೀಡಿದೆ. ಇದರಿಂದ ದೇಶ ವಿರೋಧಿ ವಸ್ತು ಜೈಲುಗಳೊಳಗೆ ತಲುಪದಂತೆ ನೋಡಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು MHA ಹೇಳಿದೆ.

Keep an eye on books available in jails: MHA advisory to states

"ಜೈಲು ಚಟುವಟಿಕೆಗಳಲ್ಲಿ ತೊಡಗಿರುವ ಎನ್‌ಜಿಒಗಳ ಹಿನ್ನೆಲೆಯನ್ನು ನಿರಂತವಾಗಿ ಪರಿಶೀಲಿಸಬೇಕು. ಜೊತೆಗೆ ಕೈದಿಗಳು ನಕಾರಾತ್ಮಕವಾಗಿ ಪ್ರಭಾವಿತರಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಜೈಲು ಗ್ರಂಥಾಲಯಗಳಲ್ಲಿ ಲಭ್ಯವಿರುವ ಸಾಹಿತ್ಯದ ಮೇಲೆ ಸೂಕ್ತ ಮೇಲ್ವಿಚಾರಣೆಯನ್ನು ನಡೆಸಬೇಕು" ಎಂದು ಅದು ಹೆಳಿದೆ.

ಕಳೆದ ವರ್ಷ ಜನವರಿಯಲ್ಲಿ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾದ ಕಾರ್ಯಕರ್ತೆ ಸುಧಾ ಭಾರದ್ವಾಜ್ ಅವರಿಗೆ ತಿಂಗಳಿಗೆ ಐದು ಪುಸ್ತಕಗಳನ್ನು ಪ್ರವೇಶಿಸಲು ಮುಂಬೈ ನ್ಯಾಯಾಲಯವು ಅನುಮತಿ ನೀಡಿದಾಗ, ಜೈಲು ಅಧಿಕಾರಿಗಳು ಖೈದಿಗಳಿಗಾಗಿ ಕಳುಹಿಸಲಾದ ಪುಸ್ತಕಗಳನ್ನು ಸ್ವೀಕರಿಸಲು ನಿರಾಕರಿಸುವಂತಿಲ್ಲ, ಆದರೆ ಅವರ ಪುಸ್ತಕದ ವಿಷಯವನ್ನು ಪರಿಶೀಲಿಸಬಹುದು ಎಂದು ಹೇಳಿತ್ತು.

Keep an eye on books available in jails: MHA advisory to states

ಇದೇ ಸಲಹೆಗಳನ್ನು ಕಾರ್ಯಗತಗೊಳಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಜೊತೆಗೆ ಜೈಲುಗಳಲ್ಲಿ ಕೈದಿಗಳಿಗೆ ಮೊಬೈಲ್ ಫೋನ್‌ಗಳ ಅಕ್ರಮ ಪ್ರವೇಶ / ಬಳಕೆಯನ್ನು ನಿರ್ಬಂಧಿಸಲು ಆಧುನಿಕ ತಂತ್ರಜ್ಞಾನದ ಪ್ರಗತಿಯೊಂದಿಗೆ ಪರಿಣಾಮಕಾರಿ ಜಾಮಿಂಗ್ ಪರಿಹಾರಗಳನ್ನು ಬಳಸಬೇಕು ಎಂದು MHA ಸಲಹೆ ನೀಡಿದೆ.

ಕೈದಿಗಳಿಗೆ ತಲುಪುವ ವಸ್ತುಗಳ ಬಗ್ಗೆ ನಿಗಾ ವಹಿಸುವುದು ಗುಪ್ತಚರ ಸಂಸ್ಥೆಗಳ ಪ್ರಮುಖ ಕೆಲಸವಾಗಿದೆ. ಇದರ ಬಗ್ಗೆ ಚರ್ಚಿಸಲು ವರ್ಷಗಳಲ್ಲಿ ಹಲವಾರು ಸಭೆಗಳಲ್ಲಿ ಪ್ರಸ್ತಾಪಿಸಲಾಗಿದೆ ಎಂದಿದೆ.

"ಸರಿಯಾದ ಪ್ರವೇಶ ಮತ್ತು ನಿರ್ಗಮನ ರಿಜಿಸ್ಟರ್‌ಗಳನ್ನು ನಿರ್ವಹಿಸುವ ಮೂಲಕ ಜೈಲು ಸಿಬ್ಬಂದಿಯ ಅನಗತ್ಯ ಚಲನೆಯನ್ನು ಒಳಗೆ ಮತ್ತು ಹೊರಗೆ ನಿರ್ಬಂಧಿಸಲು ಎಂಎಚ್‌ಎ ಜೈಲು ಅಧಿಕಾರಿಗಳಿಗೆ ತಿಳಿಸಿದೆ. ತರುವಾಯ ಜೈಲುಗಳ ಎಲ್ಲಾ ಕಾರ್ಯ ಚಟುವಟಿಕೆಗಳು ಮತ್ತು ಸಿಸಿಟಿವಿ ಪರಿಶೀಲಿಸಬೇಕು. ಸಾಧ್ಯವಾದಷ್ಟು ಮಟ್ಟಿಗೆ ಹೊರಗಿನ ಗೋಡೆ ಮತ್ತು ಜೈಲು ವಾರ್ಡ್ ಗೋಡೆಗಳ ನಡುವಿನ ಅಂತರವನ್ನು ಹೊರಗಿನಿಂದ ನಿಷಿದ್ಧ ವಸ್ತುಗಳನ್ನು ಎಸೆಯುವ ಘಟನೆಗಳ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬಹುದು" ಎಂದು ಹೇಳಿದೆ.

"ಮೊದಲ ಬಾರಿ ಅಪರಾಧ ಮಾಡುವವರು ಮತ್ತು ಪುನರಾವರ್ತಿತ ಅಪರಾಧಿಗಳನ್ನು ಪ್ರತ್ಯೇಕಿಸಬೇಕು. ಅಭ್ಯಾಸದ ಅಪರಾಧಿಗಳು ಮೊದಲ ಬಾರಿಗೆ ಅಪರಾಧ ಮಾಡಿದವರ ಮೇಲೆ ನಕಾರಾತ್ಮಕ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪ್ರತ್ಯೇಕ ವಾರ್ಡ್ / ಜೈಲು ಸಂಕೀರ್ಣದಲ್ಲಿ ಅವರನ್ನು ಇರಿಸಬೇಕು" ಎಂದು ಎಂಹೆಚ್‌ಎ ಹೇಳಿದೆ. ಇದರಿಂದ ಅಪರಾಧಿಗಳಿಗೆ ಸಹಾಯ ಮಾಡುವ ಅಥವಾ ಅಪರಾಧ ಪುನರಾವರ್ತಿತವಾಗದಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ಅದು ಹೇಳಿದೆ.

English summary
The Ministry of Home Affairs (MHA) has advised DGs to keep a close watch on the books available in state Jails.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X