Voter Guide: ಮತದಾನ ಮಾಡುವ ಮುನ್ನ ಈ ಅಂಶಗಳ ಬಗ್ಗೆ ಗಮನವಿರಲಿ

ಕರ್ನಾಟಕ ಮೊದಲ ಹಂತದ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ (ಏಪ್ರಿಲ್‌ 26) ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗಳು ನಡೆಯಲಿದೆ. 14 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣೆ ಕುತೂಹಲ ಹೆಚ್ಚಿಸಿದೆ.

ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಚುನಾವಣೆಗಳು ನಡೆಯಲಿವೆ. ಹಾಗಿದ್ದರೆ ಕರ್ನಾಟಕದಲ್ಲಿ ನಡೆಯುತ್ತಿರುವ ಚುನಾವಣೆಗಳ ಹಿನ್ನೆಯಲ್ಲಿ, ಈ ಅಂಶಗಳನ್ನು ಮತದಾರ ಗಮನದಲ್ಲಿಟ್ಟುಕೊಂಡರೆ ಒಳಿತು. ಹಾಗಿದ್ದರೆ ಮತದರಾ ಯಾವೆಲ್ಲ ಅಂಶಗಳನ್ನು ಗಮಸಿಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Voter s Guide 5 Things to know before casting your vote for Lok Sabha Elections 2024

ಏಪ್ರಿಲ್ 26 ಶುಕ್ರವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡುವ ಅವಕಾಶ ಇರುತ್ತದೆ. ಮತದಾನದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು, ಮತದಾನದ ಹಬ್ಬದಲ್ಲಿ ಭಾಗವಹಿಸಬೇಕು. ನೀವು ನಿಮ್ಮ ಮನಸ್ಸಿಗೆ ಇಷ್ಟವಾದ ಅಭ್ಯರ್ಥಿಗೆ ಮತದಾನ ಮಾಡುವ ಹಕ್ಕನ್ನು ಮತದಾರ ಹೊಂದಿರುತ್ತಾನೆ. ಅಲ್ಲದೆ ಮತದರಾ ಈ ಅಭ್ಯರ್ಥಿಗಳು ತನಗೆ ಇಷ್ಟ ಇಲ್ಲದೇ ಇದ್ದಲ್ಲಿ ಕೊನೆಯಲ್ಲಿರುವ ನೋಟಾವನ್ನು ಸಹ ಒತ್ತಿ ತನ್ನ ಹಕ್ಕನ್ನು ಚಲಾಯಿಸಬಹುದು.

ಈ ಅಂಶಗಳನ್ನು ಗಮನಿಸಿ

- ಮತದಾರ ಭೂತ್‌ ಮಟ್ಟದಲ್ಲಿ ತಮಗೆ ನೀಡಲಾಗಿರುವ ವೋಟರ್‌ ಸ್ಲಿಪ್‌ನ್ನು ತೆಗೆದುಕೊಂಡು ಬರುವುದು ಒಳ್ಳೆಯದು. ಇದರಿಂದ ಚುನಾವಣಾ ಅಧಿಕಾರಿಗೆ ನಿಮ್ಮ ಸಂಖ್ಯೆಯನ್ನು ಹುಡುಕಲು ಸಹಾಯಕವಾಗುತ್ತದೆ.

- ಮತದಾರ ಮೊದಲು ಪೋಲಿಂಗ್ ಆಫಿಸರ್‌ ಹತ್ತಿರ ತೆರಳಿ ಗುರುತಿನ ಚೀಟಿಯನ್ನು ಪರಿಶೀಲಿಸಬೇಕು. ಈ ವೇಳೆ ನಿಮ್ಮ ಹೆಸರು ಹಾಗೂ ಸೀರಿಯಲ್‌ ನಂಬರ್‌ ಪರಿಶೀಲಿಸಲಾಗುತ್ತದೆ.

Voter s Guide 5 Things to know before casting your vote for Lok Sabha Elections 2024

- ಬಳಿಕ ಮತದಾರ ಎರಡನೇ ಪೋಲಿಂಗ್ ಆಫಿಸರ್‌ ಬಳಿ ಹೋಗಬೇಕು. ಈ ಅಧಿಕಾರಿ ನಿಮ್ಮ ಸೀರಿಯಲ್‌ ನಂಬರ್‌ನ್ನು ಪಟ್ಟಿಯಲ್ಲಿ ಪರಿಶೀಲಿಸಿ, ಅದರ ಮುಂದುಗಡೆಯಲ್ಲಿ ಸಹಿ ಅಥವಾ ಹೆಬ್ಬಟ್ಟನ್ನು ಒತ್ತಲು ಸೂಚಿಸುತ್ತಾರೆ. ಬಳಿಕ ಎಡಗೈ ತೋರಬೆರಳಿಗೆ ನೀವು ಮತದಾನ ಮಾಡಿರುವ ಗುರುತಾಗಿ ಶಾಹಿ ಹಚ್ಚುತ್ತಾರೆ.

- ಮತದಾರ ತನ್ನ ವೋಟರ್‌ ಸ್ಲಿಪ್‌ ಪಡೆದು ಮೂರನೇ ಪೋಲಿಂಗ್ ಆಫೀಸರ್‌ ಬಳಿ ತೆರಳಬೇಕು. ಮತಗಟ್ಟೆಯ ಅಧಿಕಾರಿ ಇವಿಎಂನಲ್ಲಿನ ಬ್ಯಾಲೆಟ್‌ ಬಟನ್‌ ಒತ್ತುತ್ತಾರೆ. ಇದರಿಂದ ಬ್ಯಾಲೆಟ್‌ ಯೂನಿಟ್‌ ಸಕ್ರಿಯಗೊಳ್ಳುತ್ತದೆ.

Voter s Guide 5 Things to know before casting your vote for Lok Sabha Elections 2024

- ಮತಗಟ್ಟೆಗೆ ತೆರಳಿದ ಬಳಿಕ ಇವಿಎಮ್‌ ಮಶೀನ್‌ನಲ್ಲಿ ಅಭ್ಯರ್ಥಿಗಳ ಹೆಸರು ಇರುತ್ತದೆ. ನಿಮಗೆ ಬೇಕಾದ ಅಭ್ಯರ್ಥಿಯ ಮುಂದಿನ ಕೆಂಪು ಬಟನ್‌ ಒತ್ತಿ. ಬಳಿಕ ಕೆಂಪು ಬಣ್ಣದ ಬೆಳಕು ಪ್ರಕಾಶಿಸುತ್ತದೆ. ಬಳಿಕ ಬೀಪ್‌ ಸೌಂಡ್‌ ಬರುತ್ತದೆ. VVPAT ಮೂಲಕ ನಿಮ್ಮ ಮತ ಸರಿಯಾಗಿ ಚಲಾವಣೆ ಆಗಿದೆಯಾ ಎಂದು ಪರಿಶೀಲಿಸಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+